IPL 2025: ಐಪಿಎಲ್​ನಲ್ಲಿ ವಿದೇಶಿ ಆಟಗಾರರ ಮೇಲಿನ ಹಣದ ಸುರಿಮಳೆಗೆ ಬ್ರೇಕ್

|

Updated on: Sep 29, 2024 | 1:54 PM

IPL 2025: ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಪಡೆದ ಆಟಗಾರನೆಂದರೆ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್​. ಐಪಿಎಲ್ 2024ರ ಹರಾಜಿನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಸ್ಟಾರ್ಕ್ ಅವರನ್ನು 24.75 ಕೋಟಿ ರೂ.ಗೆ ಖರೀದಿಸಿದ್ದರು. ಇನ್ನು 2ನೇ ದುಬಾರಿ ಆಟಗಾರ ಆಸ್ಟ್ರೇಲಿಯಾದ ಆಲ್​ರೌಂಡರ್ ಪ್ಯಾಟ್ ಕಮಿನ್ಸ್. ಎಸ್​ಆರ್​ಹೆಚ್ ಫ್ರಾಂಚೈಸಿ ಕಮಿನ್ಸ್ ಅವರನ್ನು 20.50 ಕೋಟಿ ರೂ.ಗೆ ಖರೀದಿಸಿದ್ದರು. ಆದರೆ ಈ ಬಾರಿ ಇಂತಹ ಬೃಹತ್ ಬಿಡ್ಡಿಂಗ್​ಗೆ ಬ್ರೇಕ್ ಬೀಳಲಿದೆ.

1 / 9
ಐಪಿಎಲ್ ಸೀಸನ್-18ರ ಮೆಗಾ ಹರಾಜಿಗಾಗಿ ರೂಪುರೇಷೆಗಳು ಸಿದ್ಧವಾಗಿದೆ. ಈ ಬಾರಿಯ ಹರಾಜಿಗೂ ಮುನ್ನ ಒಟ್ಟು 5 ಐವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು. ಹಾಗೆಯೇ ಓರ್ವ ಆಟಗಾರನ ಮೇಲೆ ಆರ್​ಟಿಎಂ ಆಯ್ಕೆ ಬಳಸಬಹುದಾಗಿದೆ. ಅದರಂತೆ ಪ್ರತಿ ಫ್ರಾಂಚೈಸಿಗೆ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

2 / 9
ಇಲ್ಲಿ ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಕೆಲ ನಿಯಮಗಳು ಅನ್ವಯವಾಗಲಿದೆ. ಈ ನಿಯಮದಂತೆ ಐವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಮುಂದಾದರೆ ಮೊದಲ ಆಟಗಾರನಿಗೆ 18 ಕೋಟಿ, ಎರಡನೇ ಆಟಗಾರನಿಗೆ 14 ಕೋಟಿ, ಮೂರನೇ ಆಟಗಾರನಿಗೆ 11 ಕೋಟಿ, ನಾಲ್ಕನೇ ಆಟಗಾರನಿಗೆ 18 ಕೋಟಿ, ಐದನೇ ಆಟಗಾರನಿಗೆ 14 ಕೋಟಿ ರೂ. ನೀಡಬೇಕಾಗುತ್ತದೆ.

3 / 9
ಹಾಗೆಯೇ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ವಿದೇಶಿ ಆಟಗಾರರ ಬೃಹತ್ ಬಿಡ್ಡಿಂಗ್​ಗೂ ಬ್ರೇಕ್ ಹಾಕಲಾಗಿದೆ. ಏಕೆಂದರೆ ಕಳೆದ ಸೀಸನ್​ನ ಐಪಿಎಲ್ ಹರಾಜಿನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್​ ಫ್ರಾಂಚೈಸಿಯು ಮಿಚೆಲ್ ಸ್ಟಾರ್ಕ್ ಅವರನ್ನು ಬರೋಬ್ಬರಿ 24.75 ಕೋಟಿ ರೂ.ಗೆ ಖರೀದಿಸಿತ್ತು. ಇನ್ನು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಪ್ಯಾಟ್ ಕಮಿನ್ಸ್ ಅವರಿಗೆ 20.50 ಕೋಟಿ ರೂ. ನೀಡಿತ್ತು.

4 / 9
ಇತ್ತ ರಿಟೈನ್ ಆಗಿದ್ದ ವಿರಾಟ್ ಕೊಹ್ಲಿ (15 ಕೋಟಿ ರೂ.) ಜಸ್​ಪ್ರೀತ್ ಬುಮ್ರಾ (12 ಕೋಟಿ ರೂ.), ರೋಹಿತ್ ಶರ್ಮಾ (16 ಕೋಟಿ ರೂ.) ಸೇರಿದಂತೆ ಪ್ರಮುಖ ಆಟಗಾರರು ಕಡಿಮೆ ಮೊತ್ತ ಪಡೆದಿದ್ದರು. ಇದರ ಬೆನ್ನಲ್ಲೇ ಐಪಿಎಲ್ ಹರಾಜು ನಿಯಮದ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದವು. ಹೀಗಾಗಿಯೇ ಈ ಬಾರಿ ವಿದೇಶಿ ಆಟಗಾರರ ಮೇಲಿನ ಬಿಗ್ ಬಿಡ್ಡಿಂಗ್​ಗೆ ಬ್ರೇಕ್ ಹಾಕಲು ಬಿಸಿಸಿಐ ನಿರ್ಧರಿಸಿದೆ.

5 / 9
ಇದಕ್ಕಾಗಿ ಹೊಸ ನಿಯಮವನ್ನು ಜಾರಿಗೊಳಿಸಲಾಗಿದ್ದು, ಅದರಂತೆ ಈ ಬಾರಿಯ ಹರಾಜಿನಲ್ಲಿ ಭಾರತೀಯರಿಗಿಂತ ವಿದೇಶಿ ಆಟಗಾರರು ಹೆಚ್ಚಿನ ಮೊತ್ತ ಪಡೆಯುವಂತಿಲ್ಲ. ಅಂದರೆ ಈ ಬಾರಿಯ ಗರಿಷ್ಠ ರಿಟೈನ್ ಮೊತ್ತ 18 ಕೋಟಿ ರೂ. ಇದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಯಾವುದೇ ವಿದೇಶಿ ಆಟಗಾರನ ಖರೀದಿಸುವಂತಿಲ್ಲ. ಒಂದು ವೇಳೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಭಾರತೀಯ ಆಟಗಾರ 18 ಕೋಟಿಗೂ ಅಧಿಕ ಮೊತ್ತಕ್ಕೆ ಬಿಕರಿಯಾದರೆ, ಅಷ್ಟೇ ಮೊತ್ತವನ್ನು ವಿದೇಶಿ ಆಟಗಾರ ಪಡೆಯಬಹುದು.

6 / 9
ಉದಾಹರಣೆಗೆ: ಇಶಾನ್ ಕಿಶನ್ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡು 19 ಕೋಟಿ ರೂ.ಗೆ ಮಾರಾಟವಾದರೆ, ವಿದೇಶಿ ಆಟಗಾರರ ಗರಿಷ್ಠ ಬಿಡ್ಡಿಂಗ್ ಮೊತ್ತ 19 ಕೋಟಿ ರೂ. ಆಗಿರಲಿದೆ. ಅಂದರೆ ಇಲ್ಲಿ ಭಾರತೀಯ ಆಟಗಾರ ಪಡೆಯುವ ಗರಿಷ್ಠ ಬಿಡ್ಡಿಂಗ್ ಮೊತ್ತದ ಮೇಲೆ ವಿದೇಶಿ ಆಟಗಾರರ ಗರಿಷ್ಠ ಹರಾಜು ಮೊತ್ತ ನಿರ್ಧಾರವಾಗಲಿದೆ.

7 / 9
ಇದಾಗ್ಯೂ ಹರಾಜಿನ ಪೈಪೋಟಿಯನ್ನು ಉಳಿಸಿಕೊಳ್ಳಲು ವಿದೇಶಿ ಆಟಗಾರರ ಮೇಲಿನ ಬೃಹತ್ ಬಿಡ್ಡಿಂಗ್​ಗೆ ಅವಕಾಶ ನೀಡಲಾಗುತ್ತದೆ. ಅಂದರೆ ವಿದೇಶಿ ಆಟಗಾರರಿಗೆ ನಿಗದಿ ಮಾಡಲಾದ ಗರಿಷ್ಠ ಹರಾಜು ಮೊತ್ತ ಮೀರಿ ಬಿಡ್ಡಿಂಗ್ ಮುಂದುವರೆಸಬಹುದು. ಆದರೆ ಹೀಗೆ ಹೆಚ್ಚುವರಿಯಾಗಿ ಸಿಗುವ ಮೊತ್ತವು ಬಿಸಿಸಿಐ ಪಾಲಾಗಲಿದೆ.

8 / 9
ಉದಾಹರಣೆಗೆ: ಇಶಾನ್ ಕಿಶನ್ ಈ ಬಾರಿಯ ಹರಾಜಿನಲ್ಲಿ 19 ಕೋಟಿ ರೂ. ಮಾರಾಟವಾಗಿದ್ದಾರೆ ಎಂದಿಟ್ಟುಕೊಳ್ಳಿ. ಇದರೊಂದಿಗೆ ವಿದೇಶಿ ಆಟಗಾರರ ಗರಿಷ್ಠ ಬಿಡ್ಡಿಂಗ್ ಮೊತ್ತ 19 ಕೋಟಿ ರೂ. ಆಗಲಿದೆ. ಅತ್ತ ಟ್ರಾವಿಸ್ ಹೆಡ್ ಖರೀದಿಗಾಗಿ ಸಿಎಸ್​ಕೆ ಫ್ರಾಂಚೈಸಿ 19 ಕೋಟಿ ರೂ. ಬಿಡ್ಡಿಂಗ್ ಮಾಡಿದ್ದರೆ, ಎಸ್​ಆರ್​ಹೆಚ್ ಫ್ರಾಂಚೈಸಿ 19.50 ಕೋಟಿ ರೂ.ಗೆ ಹರಾಜು ಕೂಗಬಹುದು. ಅಲ್ಲದೆ ಬಿಡ್ಡಿಂಗ್ ಪೈಪೋಟಿಯನ್ನು​ ಮುಂದುವರೆಸಬಹುದು. ಅಂತಿಮವಾಗಿ ಟ್ರಾವಿಸ್ ಹೆಡ್ 25 ಕೋಟಿ ರೂ.ಗೆ ಮಾರಾಟವಾದರೆ, ಭಾರತೀಯ ಆಟಗಾರನ ಗರಿಷ್ಠ ಬಿಡ್ಡಿಂಗ್ ಮೊತ್ತಕ್ಕೆ ಸಮವಾಗಿ 19 ಕೋಟಿ ರೂ. ಮಾತ್ರ ಟ್ರಾವಿಸ್ ಹೆಡ್​ಗೆ ಸಿಗಲಿದೆ. ಇನ್ನುಳಿದ 6 ಕೋಟಿ ರೂ. ಅನ್ನು ಹೆಡ್​ನ ಖರೀದಿಸಿದ ಫ್ರಾಂಚೈಸಿ, ಬಿಸಿಸಿಐನ ಆಟಗಾರರ ಕಲ್ಯಾಣ ನಿಧಿಗೆ ನೀಡಬೇಕು.

9 / 9
ಈ ಮೂಲಕ ಐಪಿಎಲ್​ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯರಿಗಿಂತ ವಿದೇಶಿ ಆಟಗಾರರಿಗೆ ಹೆಚ್ಚಿನ ಮೊತ್ತ ಸಿಗದಂತೆ ತಡೆಯಲು ಹೊಸ ನಿಯಮವನ್ನು ಪರಿಚಯಿಸಲಾಗಿದೆ. ಹೀಗಾಗಿ ಈ ಬಾರಿಯ ಮೆಗಾ ಹರಾಜಿನಲ್ಲಿ ಕೋಟಿ ರೂ. ಪೈಪೋಟಿ ಕಂಡು ಬಂದರೂ ವಿದೇಶಿ ಆಟಗಾರರು ಟೀಮ್ ಇಂಡಿಯಾ ಪ್ಲೇಯರ್ಸ್​ಗಿಂತ ಹೆಚ್ಚಿನ ಮೊತ್ತ ಪಡೆಯುವುದಿಲ್ಲ.