Sanju Samson: ಸಂಜು ಸ್ಯಾಮ್ಸನ್​ಗೆ ಚಾನ್ಸ್ ಸಿಗಬೇಕು ಅನ್ನೋರಿಗೆ… ಇಲ್ಲಿದೆ ಅಚ್ಚರಿಯ ಅಂಕಿ ಅಂಶಗಳು

Sanju Samson: ಸಂಜು ಸ್ಯಾಮ್ಸನ್​ ಟೀಮ್ ಇಂಡಿಯಾ ಪರ 30 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 26 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಅವರು 338 ಎಸೆತಗಳಲ್ಲಿ 444 ರನ್ ಕಲೆಹಾಕಿದ್ದಾರೆ. ಅಂದರೆ ಅವರ ಅವರೇಜ್ ಸ್ಕೋರ್ ಕೇವಲ 19.3 ರನ್​ಗಳು ಮಾತ್ರ. ಇನ್ನು ಈ 26 ಇನಿಂಗ್ಸ್​ಗಳಲ್ಲಿ ಕೇವಲ 2 ಅರ್ಧಶತಕಗಳನ್ನು ಮಾತ್ರ ಬಾರಿಸಿದ್ದಾರೆ.

ಝಾಹಿರ್ ಯೂಸುಫ್
|

Updated on:Aug 01, 2024 | 10:23 AM

ಟೀಮ್ ಇಂಡಿಯಾದ ನತದೃಷ್ಟ ಆಟಗಾರ ಯಾರೆಂದರೆ ಕೇಳಿದರೆ ಥಟ್ಟನೆ ಬರುವ ಉತ್ತರ ಸಂಜು ಸ್ಯಾಮ್ಸನ್ (Sanju Samson). ಏಕೆಂದರೆ 2015 ರಲ್ಲಿ ಟಿ20 ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಸ್ಯಾಮ್ಸನ್​ಗೆ ಸಿಕ್ಕಿದ್ದು ವಿರಳ ಅವಕಾಶ. ಆದರೆ ಹೀಗೆ ಸಿಕ್ಕ ಅವಕಾಶದಲ್ಲಿ ಸಾಧಿಸಿದ್ದಾದರೂ ಏನು? ಎಂಬುದನ್ನು ಪ್ರಶ್ನಿಸಿಕೊಳ್ಳಲು ಇದು ಸ್ಯಾಮ್ಸನ್​ಗೆ ಸಕಾಲ.

1 / 7
ಏಕೆಂದರೆ ಟಿ20 ವಿಶ್ವಕಪ್ ವೇಳೆ ಬೆಂಚ್ ಕಾದಿದ್ದ ಸಂಜು ಸ್ಯಾಮ್ಸನ್​ಗೆ ಶ್ರೀಲಂಕಾ ವಿರುದ್ಧದ 2 ಪಂದ್ಯಗಳಲ್ಲಿ ಅವಕಾಶ ನೀಡಲಾಗಿದೆ. ಈ ಅವಕಾಶದಲ್ಲಿ ಸ್ಯಾಮ್ಸನ್ ಸೊನ್ನೆಯೊಂದಿಗೆ ಹಿಂತಿರುಗಿದ್ದರು. ಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ಪಡೆದ ಸ್ಯಾಮ್ಸನ್ ಮೊದಲ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿದ್ದರು.

2 / 7
ಇನ್ನು ಮೂರನೇ ಟಿ20 ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ತಂಡದಲ್ಲಿ ಕಾಣಿಸಿಕೊಂಡ ಸ್ಯಾಮ್ಸನ್​ಗೆ 3ನೇ ಓವರ್​ ವೇಳೆಗ ಕ್ರೀಸ್​ಗೆ ಆಗಮಿಸಿದ್ದರು. ಆದರೆ 4 ಎಸೆತಗಳನ್ನು ಎದುರಿಸಿದ ಅವರು ಕ್ಯಾಚ್ ನೀಡಿ ಶೂನ್ಯದೊಂದಿಗೆ ಹಿಂತಿರುಗಿದ್ದರು. ಇದರೊಂದಿಗೆ ಸಂಜು ಸ್ಯಾಮ್ಸನ್ ಅವರ​ ಟಿ20 ಕೆರಿಯರ್​ನ ಸೊನ್ನೆಗಳ ಸಂಖ್ಯೆ ನಾಲ್ಕಕ್ಕೇರಿದೆ.

3 / 7
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ, ಸಂಜು ಸ್ಯಾಮ್ಸನ್ ಕಳೆದ 26 ಟಿ20 ಇನಿಂಗ್ಸ್​ಗಳಿಂದ ಎಷ್ಟು ರನ್ ಕಲೆಹಾಕಿದ್ದಾರೆ ಎಂಬುದು. ಏಕೆಂದರೆ ಟೀಮ್ ಇಂಡಿಯಾ ಪರ 26 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಸ್ಯಾಮ್ಸನ್ ಇದುವರೆಗೆ ಬಾರಿಸಿದ್ದು ಕೇವಲ 444 ರನ್​ಗಳು ಮಾತ್ರ.

4 / 7
ಅಂದರೆ ಅವರ ಪ್ರತಿ ಪಂದ್ಯಗಳ ಸರಾಸರಿ ಸ್ಕೋರ್​ ಕೇವಲ 19.3 ರನ್​ಗಳು ಮಾತ್ರ. ಇನ್ನು 26 ಇನಿಂಗ್ಸ್​ಗಳಲ್ಲಿ ಅವರ ಬ್ಯಾಟ್​ನಿಂದ ಮೂಡಿಬಂದಿರುವುದು ಕೇವಲ 2 ಅರ್ಧಶತಕಗಳು ಎಂದರೆ ನಂಬಲೇಬೇಕು. ಅದು ಕೂಡ ಝಿಂಬಾಬ್ವೆ ಮತ್ತು ಐರ್ಲೆಂಡ್ ವಿರುದ್ಧ ಎಂಬುದು ಇಲ್ಲಿ ಉಲ್ಲೇಖಾರ್ಹ.

5 / 7
ಇನ್ನು ಆಸ್ಟ್ರೇಲಿಯಾ ವಿರುದ್ಧ ಆಡಿದ 3 ಇನಿಂಗ್ಸ್​ಗಳಲ್ಲಿ ಕಲೆಹಾಕಿದ ಗರಿಷ್ಠ ಸ್ಕೋರ್ ಕೇವಲ 23 ರನ್​. ನ್ಯೂಝಿಲೆಂಡ್ ವಿರುದ್ಧದ 2 ಪಂದ್ಯಗಳಲ್ಲಿ ಬಾರಿಸಿದ್ದು 8 ರನ್ ಮಾತ್ರ. ಶ್ರೀಲಂಕಾ ವಿರುದ್ಧ 6 ಇನಿಂಗ್ಸ್​ಗಳಲ್ಲಿ ಬಾರಿಸಿದ ಗರಿಷ್ಠ ಸ್ಕೋರ್ 27 ರನ್​. ವೆಸ್ಟ್ ಇಂಡೀಸ್ ವಿರುದ್ಧ ಕೂಡ 2 ಪಂದ್ಯಗಳನ್ನಾಡಿದ್ದು, ಈ ವೇಳೆ ಬಾರಿಸಿದ ಗರಿಷ್ಠ ಸ್ಕೋರ್ 12 ರನ್​. ಅಂದರೆ ಬಲಿಷ್ಠ ತಂಡಗಳ ವಿರುದ್ಧ ಸ್ಯಾಮ್ಸನ್ ಅವರ ಸರಾಸರಿ 15 ಕ್ಕಿಂತ ಕಡಿಮೆ ಇರುವುದು ಸ್ಪಷ್ಟ.

6 / 7
ಇನ್ನು ಕೊನೆಯ 6 ಇನಿಂಗ್ಸ್​ಗಳಲ್ಲಿ ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಇನ್ನೆರಡು ಪಂದ್ಯಗಳಲ್ಲಿ ಕ್ರಮವಾಗಿ 1 ಮತ್ತು 12 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದರು. ಅಂದರೆ 2024 ರಲ್ಲಿ ಸಿಕ್ಕ 6 ಅವಕಾಶಗಳಲ್ಲಿ ಸ್ಯಾಮ್ಸನ್ ಕಲೆಹಾಕಿರುವುದು ಕೇವಲ 71 ರನ್​ಗಳು ಮಾತ್ರ. ಅಂದರೆ ಸಿಕ್ಕ ಅವಕಾಶ ಬಳಸಿಕೊಳ್ಳಲಾಗದಿರುವ ಸಂಜು ಸ್ಯಾಮ್ಸನ್​​ಗೆ ಇನ್ನೆಷ್ಟು ಚಾನ್ಸ್ ಸಿಗಬೇಕು? ಎಂಬುದೇ ಪ್ರಶ್ನೆ.

7 / 7

Published On - 10:23 am, Thu, 1 August 24

Follow us
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ

ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್

ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ

ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು

ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ

29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್

ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು

ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ