ಧಾರವಾಡ: ಪ್ರಧಾನಿ ಮೋದಿಗೆ ಕಸೂತಿಯ ರೇಷ್ಮೆ ಶಾಲು, ಕಲಘಟಗಿಯ ಕೈಕುಸುರಿ ತೊಟ್ಟಿಲನ್ನು ಕಾಣಿಕೆಯಾಗಿ ನೀಡಲಿದೆ ಜಿಲ್ಲಾಡಳಿತ

ಐಐಟಿ ಉದ್ಘಾಟನೆಗೆ ಧಾರವಾಡಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಜಿಲ್ಲಾಡಳಿತ ಜಿಲ್ಲೆಯ ಕಸೂತಿ ಶಾಲು ಮತ್ತು ಕಲಘಟಗಿಯ ವಿಶ್ವ ಪ್ರಸಿದ್ಧ ಕಸೂರಿ ತೊಟ್ಟಿಲನ್ನು ನೀಡಲಾಗುವುದು.

ವಿವೇಕ ಬಿರಾದಾರ
|

Updated on:Mar 12, 2023 | 12:50 PM

Dharwad Dirtsct officals given Dharwad kasuti shawl and tottilu to PM Narendra Modi

ಐಐಟಿ ಉದ್ಘಾಟನೆಗೆ ಧಾರವಾಡಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಜಿಲ್ಲಾಡಳಿತ ವಿಶೇಷವಾದ ಕೊಡುಗೆ ನೀಡಲು ಸಜ್ಜಾಗಿದೆ. ಧಾರವಾಡದ ಸಖಿ ಸಾಫಲ್ಯ ಮಹಿಳಾ ಸಮೂಹ ರಚಿಸಿದ ಸುಂದರ ಕರಕುಶಲ ಧಾರವಾಡ ಕಸೂತಿ ಶಾಲು ನೀಡಲಿದೆ.

1 / 9
Dharwad District officers given Dharwad kasuti shawl and tottilu to PM Narendra Modi

ಕಸೂತಿ ಒಂದು ಪರಂಪರೆಯ ಕುಶಲಕರ್ಮಿ ಕೌಶಲ್ಯ. ಧಾರವಾಡ ಮೂಲದ ಈ ಸೂಜಿ ಕರಕುಶಲತೆಯು ಆ ಪ್ರದೇಶದ ಸಂಪ್ರದಾಯಗಳು, ಪದ್ದತಿಗಳು ಮತ್ತು ವೃತ್ತಿಯ ಅಭಿವ್ಯಕ್ತಿಯಾಗಿದೆ. ಕಸೂತಿಯ ಬೇರುಗಳು ಚಾಲುಕ್ಯರ ಆಳ್ವಿಕೆಯಲ್ಲಿ ಅಂದರೆ ಆರನೇ ಶತಮಾನಕ್ಕೆ ಪ್ರವರ್ಧಮಾನಕ್ಕೆ ಬಂದ ಕಲೆ.

2 / 9
Dharwad Dirtsct officals given Dharwad kasuti shawl and tottilu to PM Narendra Modi

ತರಬೇತಿ ಮತ್ತು ಕಸೂತಿಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿರುವ ಯೊಜನೆಯು ಪ್ರಾರಂಭವಾಗುವವರೆಗೂ ಕೈಕ್ರಾಫ್ಟ್ ನಿಧಾನವಾಗಿ ಕ್ಷೀಣಿಸುತ್ತಿತ್ತು. ಅಂತಿಮವಾಗಿ ಕಸೂತಿ ಕುಶಲಕರ್ಮಿಗಳು ನಬಾರ್ಡ್ ಬೆಂಬಲದೊಂದಿಗೆ ಸಖಿ ಸಾಫಲ್ಯ ಕ್ರಾಫ್ಟ್ ಪ್ರೊಡ್ಯುಸರ್ ಕಂಪನಿ ಲಿಮಿಟೆಡ್ ಎಂಬ ಹೆಸರಿನ ನಿರ್ಮಾಪಕ ಕಂಪನಿಯನ್ನು ರಚಿಸಲು ಒಟ್ಟುಗೂಡಿದರು.

3 / 9
Dharwad Dirtsct officals given Dharwad kasuti shawl and tottilu to PM Narendra Modi

ಪ್ರಸ್ತುತ ಧಾರವಾಡದ ಗ್ರಾಮೀಣ ಭಾಗದ 467 ಮಹಿಳಾ ಕುಶಲ ಕರ್ಮಿಗಳು ಕಂಪನಿಯ ಭಾಗವಾಗಿದ್ದಾರೆ. ಸಾಂಪ್ರದಾಯಿಕ ಸೀರೆಗಳು, ದುಪಟ್ಟಾಗಳು ಮತ್ತು ಸ್ಟೋಲ್​ಗಳ ಹೊರತಾಗಿ, ಈ ಕುಶಲಕರ್ಮಿಗಳು ಗೃಹೋಪಯೋಗಿ ವಸ್ತುಗಳು ಮತ್ತು ಪೀಠೋಪಕರಣಗಳು, ಅಲಂಕಾರಗಳು, ಸ್ಟೇಷನರಿಗಳು ಇತ್ಯಾದಿಗಳನ್ನು ಒಳಗೊಂಡಿರುವ ಜೀವನ ಶೈಲಿಯ ಉತ್ಪನ್ನಗಳನ್ನು ಉತ್ಪಾದಿಸುತ್ತಾರೆ. ಸಖಿಸಾಫಲ್ಯ ಉತ್ಪನ್ನಗಳು ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ. ಕಂಪನಿಯು ಭಾರತದಲ್ಲಿ ಮಾತ್ರವಲ್ಲದೆ ಆಸ್ಟ್ರೇಲಿಯಾ, ಇಟಲಿ ದೇಶಗಳಲ್ಲಿಯೂ ಗ್ರಾಹಕರನ್ನು ಹೊಂದಿದೆ.

4 / 9
Dharwad Dirtsct officals given Dharwad kasuti shawl and tottilu to PM Narendra Modi

ಕಲಘಟಗಿಯ ತೊಟ್ಟಿಲು ಕಾಣಿಕೆ ನೀಡಲಾಗುತ್ತಿದೆ. ಸಂಪ್ರದಾಯಿಕ ಹಿನ್ನೆಲೆ ಹೊಂದಿರುವ ಕಲಘಟಗಿ ತೊಟ್ಟಿಲು ಇದಾಗಿದ್ದು, ಇದಕ್ಕೆ 200 ವರ್ಷಗಳ ಇತಿಹಾಸ ಇದೆ. ಈ ಕೆಲಸದಲ್ಲಿ ಕೈಕುಸುರಿ ವಿನ್ಯಾಸವಿದೆ. ಇಂದಿಗೂ ಕೈ ಕುಸುರಿಯಲ್ಲಿಯೇ ತೊಟ್ಟಿಲು ತಯಾರಿ ಮಾಡಲಾಗುತ್ತಿದೆ.

5 / 9
Dharwad Dirtsct officals given Dharwad kasuti shawl and tottilu to PM Narendra Modi

ಅಂತರಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ತೊಟ್ಟಿಲು ಇದಾಗಿದ್ದು, ತೊಟ್ಟಿಲಿನ ಪುಟ್ಟ ಮಾದರಿ ಕಾಣಿಕೆಯಾಗಿ ನೀಡಲು ನಿರ್ಧರಿಸಲಾಗಿದೆ. 9 ಇಂಚು ಉದ್ದ, 6 ಇಂಚು ಅಗಲ ಹಾಗೂ 4.5 ಇಂಚು ಎತ್ತರದ ತೊಟ್ಟಿಲು ಇದಾಗಿದೆ.

6 / 9
Dharwad Dirtsct officals given Dharwad kasuti shawl and tottilu to PM Narendra Modi

ತೊಟ್ಟಿಲಿನಲ್ಲಿ ಶ್ರೀಕೃಷ್ಣನ ಬಾಲಲೀಲೆ, ಲವ-ಕುಶ ಮತ್ತು ಶ್ರವಣಕುಮಾರನ ಕಲಾಕೃತಿ ಇದೆ. ನೈಸರ್ಗಿಕ ಬಣ್ಣದಿಂದ ತಯಾರಾಗುವ ತೊಟ್ಟಿಲು ತೇಗಿನ ಕಟ್ಟಿಗೆಯಿಂದ ತಯಾರಾಗಿದೆ.

7 / 9
Dharwad Dirtsct officals given Dharwad kasuti shawl and tottilu to PM Narendra Modi

ಹುಣಸೆ ಬೀಜದ ಅಂಟು, ಅರಗು ಮತ್ತು ರಾಳದಿಂದ ತಯಾರಿಸಿದ ಬಣ್ಣ ಬಳಕೆ ಮಾಡಲಾಗಿದೆ.

8 / 9
Dharwad Dirtsct officals given Dharwad kasuti shawl and tottilu to PM Narendra Modi

ಕಲಘಟಗಿಯ ಮಾರುತಿ ಬಡಿಗೇರ ತಯಾರಿಸಿರುವ ತೊಟ್ಟಿಲು ಇದು.

9 / 9

Published On - 12:48 pm, Sun, 12 March 23

Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ