Different and special fair Vijayapura someshwara jatre Vijayapura news
Different and special fair Vijayapura someshwara jatre Vijayapura news
ಬಿಂಗಿಯರು ಅಂದ್ರೆ ಒಂದು ರೀತಿ ದೇವರ ಮಾಲೆಯಾಕಿದವಂತೆ ಇರ್ತಾರೆ. ಕಾರ್ತಿಕ ಮಾಸದ ಆರಂಭದಿಂದ ಅಂತ್ಯದವರೆಗೂ ಎಲ್ಲಾ ದುಶ್ಟಟಗಳನ್ನ ಬಿಟ್ಟು ಕಠಿಣ ವ್ರತ ಆಚರಿಸ್ತಾರೆ.
ಅದೇ ಬಿಂಗಿಗಳನ್ನ ಜಾತ್ರೆ ದಿನದಂದು ಅದ್ಧೂರಿಯಾಗಿ ಮೆರವಣಿಗೆ ಮೂಲಕ ಕರೆತರಲಾಗುತ್ತೆ. ಹೀಗೆ ವ್ರತ ಆಚರಿಸಿದವರೇ ಸೋಮೇಶ್ವರನನ್ನ ಆರಾಧಿಸುತ್ತಾರೆ.
ದೇಗುಲದ ಬಳಿಯ ಕಲ್ಲಿಗೆ ತಲೆ ಜಜ್ಜಿಕೊಂಡು ದೇವರಿಗೆ ಭಕ್ತಿ ಸಮರ್ಪಿಸ್ತಾರೆ. ಈ ರೀತಿ ಪ್ರತಿಯೊಬ್ಬ ಬಿಂಗಿಯೂ ಕೂಡಾ ಮೂರು ಬಾರಿ ಕಲ್ಲಿಗೆ ತಲೆಯನ್ನು ಜಜ್ಜುವುದು ಸಂಪ್ರದಾಯವಾಗಿದೆ.
ಇನ್ನು ಜಾತ್ರೆಯಲ್ಲಿ ಪ್ರಸಾದ ಸೇವೆಯೂ ಇರುತ್ತೆ . ಗ್ರಾಮದ ಭಕ್ತರೆಲ್ಲಾ ಮಡಿಯಿಂದ ಮಾಡಿದ ನೈವೃದ್ಯವನ್ನು ಬಿಂಗಿಗಳಿಗೆ ಅರ್ಪಿಸ್ತಾರೆ.
ಅದ್ರಲ್ಲೂ ಉತ್ತರ ಕರ್ನಾಟಕ ಶೈಲಿಯ ರೊಟ್ಟಿ, ಪಲ್ಯ, ಅನ್ನ, ಹುಗ್ಗಿ, ಹೋಳಿಗೆ ಸೇರಿದಂತೆ ಇತರೆ ಸಿಹಿ ಭಕ್ಷಗಳನ್ನ ಬಡಿಸುತ್ತಾರೆ. ವಿಷ್ಯ ಅಂದ್ರೆ ಊಟವನ್ನೂ ಪುರುಷರೇ ಬಡಿಸುತ್ತಾರೆ.
ವಿವಿಧ ಬೇಡಿಕೆ ಬೇಡಿಕೊಂಡವರ ಬೇಡಿಕೆ ಈಡೇರಿದವರು ಬಿಂಗಿಗಳಾಗಿ ವೃತಾರಚಣೆ ಮಾಡು ಜಾತ್ರೆಯಲ್ಲಿ ಭಾಗಿಯಾಗುತ್ತಾರೆ. ಗ್ರಾಮದ ಸೋಮೇಶ್ವರ ದೇವರು ಬೇಡಿದ ವರವನ್ನು ನೀಡುವ ದೇವರೆಂದು ಪ್ರಸಿದ್ದಿ ಪಡೆದಿರೋ ದೇವರು. ಯಾವುದೇ ಕಷ್ಟವನ್ನು ಹೇಳಿಕೊಂಡು ಬರುವ ಭಕ್ತರಿಗೆ ಸೋಮೇಶ್ವರ ದೇವರು ಒಳಿತನ್ನು ಮಾಡುತ್ತಾನೆ ಎಂಬ ನಂಬಿಕೆ ಭಕ್ತರದ್ದು.
ಹಲವಾರು ತಲೆಮಾರುಗಳಿಂದ ಸಕಲ ಪದ್ದತಿ ಸಂಪ್ರದಾಯದ ಮೂಲಕ ಸೋಮೇಶ್ವರ ದೇವಸ್ಥಾನದ ಜಾತ್ರೆ ನಡೆದುಕೊಂಡು ಬಂದಿದೆ. ಸೊಮೇಶ್ವರ ಜಾತ್ರೆಗೆ ಜಿಲ್ಲೆಯ ಜನರಷ್ಟೇ ಅಲ್ಲಾ ಸುತ್ತಮುತ್ತಲ ಜಿಲ್ಲೆಗಳ ಜನರು ಸಹ ಭಕ್ತಿಭಾವದಿಂದ ಭಾಗಿಯಾಗುತ್ತಾರೆ.
Published On - 8:22 am, Tue, 29 November 22