- Kannada News Photo gallery Ganesh chaturthi 2024: Afghanistan to Japan and China how god Ganesha is celebrated outside India
ಗಣೇಶ ಚತುರ್ಥಿ 2024: ಥಾಯ್ಲೆಂಡ್‌ನ ಲಾಂಛನದಲ್ಲಿ ಗಣೇಶನ ಚಿತ್ರ ಇದೆ, ಚೀನಾದಲ್ಲಿ ವಿನಾಯಕನನ್ನು ನಕಾರಾತ್ಮಕ ಶಕ್ತಿಯಾಗಿ ಕಾಣುತ್ತಾರೆ!
ಹಿಂದೂ ದೇವತೆಗಳಲ್ಲಿ ಒಬ್ಬನಾದ ಗಣೇಶ ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಹಿಂದೂ ಪಂಥಕ್ಕೆ ಸೇರಿದ ಇತರ ಅನೇಕ ದೇವರುಗಳಂತೆ ಗಣೇಶನು ಭಾರತದ ಹೊರಗಿನ ಪ್ರಪಂಚದ ಅನೇಕ ದೇಶಗಳಲ್ಲಿಯೂ ಸಹ ಇದ್ದಾನೆ. ಏಷ್ಯಾ ಖಂಡ, ಟಿಬೆಟ್, ಚೀನಾ, ಜಪಾನ್, ಏಷ್ಯಾದ ಹಲವು ಭಾಗಗಳಲ್ಲಿ, ಅಫ್ಘಾನಿಸ್ತಾನದಲ್ಲಿ ದೈವಿಕ ಆರಾಧನೆಯನ್ನು ಪಡೆಯುವುದು ವಿನಾಯಕನ ವಿಶೇಷತೆಯಾಗಿದೆ.
Updated on:Aug 30, 2024 | 1:28 PM

ರಾಬರ್ಟ್ ಎಲ್ ಬ್ರೌನ್, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ, ಲಾಸ್ ಏಂಜಲೀಸ್ (UCLA) ನಲ್ಲಿ ಇಂಡೋ-ಏಷ್ಯನ್ ಕಲಾ ಇತಿಹಾಸದ ಪ್ರಾಧ್ಯಾಪಕ ಅವರು ಗಣೇಶನ ಕುರಿತಾದ ತಮ್ಮ ಸಂಶೋಧನೆ ವಿಷಯವಾಗಿ ಮಾತನಾಡುತ್ತಾ ಶಾಸನಗಳು ಮತ್ತು ಚಿತ್ರಗಳ ರೂಪದಲ್ಲಿ ಗಣೇಶನ ಪ್ರಸ್ತಾವನೆಗಳು ಕಂಡುಬಂದಿವೆ ಎಂದು ಹೇಳಿದ್ದಾರೆ. ಅವು 5 ಮತ್ತು 6 ನೇ ಶತಮಾನಕ್ಕೆ ಸೇರಿದ್ದಾವೆ ಎಂದಿದ್ದಾರೆ.

ಕಾಂಬೋಡಿಯಾ: 7ನೇ ಶತಮಾನದಿಂದಲೂ ಕಾಂಬೋಡಿಯಾದಲ್ಲಿ ಗಣಪತಿಯನ್ನು ಮುಖ್ಯ ದೇವರಾಗಿ ಪೂಜಿಸಲಾಗುತ್ತಿದೆ. ಈ ದೇಶದಲ್ಲಿ ಗಣೇಶನಿಗೆ ಮುಡಿಪಾದ ದೇವಾಲಯಗಳಿವೆ. ಕುತೂಹಲಕಾರಿ ಸಂಗತಿಯೆಂದರೆ, ಭಾರತದಲ್ಲಿ ಗಣೇಶನ ಆರಾಧನೆಯು ವ್ಯಾಪಕವಾಗಿ ಜನಪ್ರಿಯವಾಗುವುದಕ್ಕೂ ಮೊದಲು, ಈ ದೇಶದಲ್ಲಿ ಅದಾಗಲೇ ಗಣಪತಿಯನ್ನು ಆರಾಧಿಸಲಾಗುತ್ತಿತ್ತು. ಸಂಸ್ಕೃತಿಯ ಬದಲಾವಣೆಗಳ ಜೊತೆಗೆ ಗಣಪತಿಯ ಸ್ವರೂಪವೂ ಬದಲಾಯಿತು. ಉದಾಹರಣೆಗೆ, ಕಾಂಬೋಡಿಯಾದಲ್ಲಿ ವಿನಾಯಕನು ತನ್ನ ಆನೆಯ ತಲೆಯನ್ನು ಮಾನವ ದೇಹಕ್ಕೆ ಜೋಡಿಸಿ ಚಲನರಹಿತವಾಗಿ ನಿಂತಿರುವಂತೆ ಚಿತ್ರಿಸಲಾಗಿದೆ.

ಥೈಲ್ಯಾಂಡ್: ಈ ದೇಶದಲ್ಲಿ ಗಣೇಶನನ್ನು ಫ್ರಾ ಫಿಕಾನೆಟ್ ಅಥವಾ ಫ್ರಾ ಫಿಕಾನೆಸುವಾನ್ ಎಂದು ಪೂಜಿಸಲಾಗುತ್ತದೆ. ಪುರಾತನ ಸ್ಮಾರಕಗಳಲ್ಲಿ ತಮಿಳು ಮತ್ತು ಥಾಯ್ ಶಾಸನಗಳನ್ನು ಒಳಗೊಂಡಿರುವ ಫಂಗ್-ನಾ 10 ನೇ ಶತಮಾನದ ಕಂಚಿನ ಚಿತ್ರವಾಗಿದೆ. ಆದ್ದರಿಂದ ಹಿಂದೂಗಳಲ್ಲಿ, ವಿನಾಯಕ ವಿಘ್ನಗಳನ್ನು ನಿವಾರಿಸುವ ಮತ್ತು ಅದೃಷ್ಟ ಮತ್ತು ಯಶಸ್ಸನ್ನು ನೀಡುವ ದೇವ ಎಂದು ಪರಿಗಣಿಸಲಾಗುತ್ತದೆ. ಕಲೆ, ಶಿಕ್ಷಣ ಮತ್ತು ವ್ಯಾಪಾರಕ್ಕೂ ಸಂಬಂಧಿಸಿದ್ದಾನೆ ನಮ್ಮ ಗಣಪ. ವರ್ತಕರು ವಿನಾಯಕನಿಗೆ ಚಿನ್ನ, ಮೋದಕ, ಮಿಠಾಯಿ, ಹಣ್ಣುಗಳನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ. ಉದ್ಯಮಿಗಳಿಗೆ ವಿನಾಯಕ ಅಂದರೆ ಅತ್ಯಂತ ಗೌರವಾನ್ವಿತ ದೇವ. ವ್ಯಾಪಾರ ಕಡಿಮೆಯಾದಾಗ ವಿನಾಯಕನ ಆಕೃತಿ ಅಥವಾ ವಿಗ್ರಹಗಳನ್ನು ತಲೆಗೆ ಹಾಕಿಕೊಂಡು ಮಾರುವ ವಾಡಿಕೆಯೂ ಇದೆ.

ಥಾಯ್ಲೆಂಡ್‌ನ ಲಾಂಛನದಲ್ಲಿ ಗಣೇಶನ ಚಿತ್ರವೂ ಇದೆ: ಥಾಯ್ಲೆಂಡ್‌ನ ಚಾಚೋಂಗ್ಸಾವೊ ಸಾಂಸ್ಕೃತಿಕ ನಗರವನ್ನು "ಗಣೇಶ ನಗರ" ಎಂದು ಕರೆಯಲಾಗುತ್ತದೆ. ಏಕೆಂದರೆ ಚಾಚೋಂಗ್ಸಾವೊ ಸುತ್ತಮುತ್ತಲಿನ ಮೂರು ವಿಭಿನ್ನ ದೇವಾಲಯಗಳಲ್ಲಿ ಮೂರು ಬೃಹತ್ ಗಣೇಶ (ಫ್ರಾ ಫಿಕ್ನೆಟ್) ವಿಗ್ರಹಗಳಿವೆ. ಫ್ರಾಂಕ್ ಅಕತ್ ದೇವಸ್ಥಾನದಲ್ಲಿ 49 ಮೀಟರ್ ಎತ್ತರದ ಗಣೇಶನ ಪ್ರತಿಮೆ, ಖ್ಲೋಂಗ್ ಖುಯಾನ್ ಗಣೇಶ ಅಂತರಾಷ್ಟ್ರೀಯ ಉದ್ಯಾನವನದಲ್ಲಿ 39 ಮೀಟರ್ ಎತ್ತರದ ಗಣೇಶನ ಪ್ರತಿಮೆಯಿದೆ. ಸಮನ್ ವತ್ತನಾರಾಮ ದೇವಸ್ಥಾನದಲ್ಲಿ 16 ಮೀಟರ್ ಎತ್ತರ, 22 ಮೀಟರ್ ಉದ್ದದ ವಿನಾಯಕ ವಿಗ್ರಹ ಇದೆ. ಗಣೇಶನು ಬ್ಯಾಂಕಾಕ್ ಸೆಂಟ್ರಲ್ ವರ್ಲ್ಡ್ (ಹಿಂದೆ ವಿಶ್ವ ವ್ಯಾಪಾರ ಕೇಂದ್ರ) ಹೊರಗೆ ಎತ್ತರದ ಪೀಠದ ಮೇಲೆ ನಿಂತಿದ್ದಾನೆ. ಸರ್ಕಾರದ ಲಲಿತಕಲಾ ಇಲಾಖೆಯ ಲಾಂಛನದಲ್ಲಿ ವಿನಾಯಕ ಕೂಡು ಒಂದು ಭಾಗವಾಗಿದೆ.

ಚೀನಾ: ಉತ್ತರ ಚೀನಾದಲ್ಲಿರುವ ಅತ್ಯಂತ ಹಳೆಯ ವಿನಾಯಕನ ಪ್ರತಿಮೆಯು 531 CE ಕಾಲದ ಶಾಸನವನ್ನು ಹೊಂದಿದೆ. ಟುನ್-ಹುವಾಂಗ್‌ನಲ್ಲಿರುವ ಬಂಡೆಯಲ್ಲಿ ಕತ್ತರಿಸಿದ (ರಾಕ್ ಕಟ್) ದೇವಾಲಯದಲ್ಲಿ ವಿನಾಯಕನ ವಿಗ್ರಹವಿದೆ. ಆದರೆ, ಚೀನಾದಲ್ಲಿ ವಿನಾಯಕನನ್ನು ನಕಾರಾತ್ಮಕ ಶಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಜಪಾನ್: ಭಾರತದಿಂದ ಚೀನಾಕ್ಕೆ ಮತ್ತು ಆಗ್ನೇಯ ಏಷ್ಯಾದಾದ್ಯಂತ ಪ್ರಯಾಣಿಸಿದ ಗಣೇಶ 8 ನೇ ಶತಮಾನದಲ್ಲಿ ಜಪಾನ್ ತಲುಪಿದರು. ಇಲ್ಲಿ ಅವರನ್ನು ಕಾಂಗೀಟೆನ್ ಎಂದು ಗೌರವಿಸಲಾಗುತ್ತದೆ. ಜಪಾನೀಸ್ ಬೌದ್ಧಧರ್ಮದೊಂದಿಗೆ ಸಂಬಂಧ ಹೊಂದಿದ್ದಾನೆ. ಕಾಂಗೀಟೆನ್ ವಿವಿಧ ವಿವರಣೆಗಳಲ್ಲಿ ಅತ್ಯಂತ ಜನಪ್ರಿಯ ದ್ವಿ ಶರೀರದ ಡ್ಯುಯಲ್ ಕಾಂಗೀತೆನ್ ಅನ್ನು ತೋರಿಸಲಾಗಿದೆ. ಈ ಎರಡು ಗಣೇಶನ ವಿಗ್ರಹಗಳು ತಬ್ಬಿಕೊಂಡ ರೂಪದಲ್ಲಿವೆ. ಕಾಂಗೀಟೆನ್ ಅನ್ನು ಅದೃಷ್ಟವನ್ನು ನೀಡುವ ಶಕ್ತಿಶಾಲಿ ದೇವ ಎಂದು ಪರಿಗಣಿಸಲಾಗಿದೆ. ಉದ್ಯಮಿಗಳು, ಜೂಜುಕೋರರು, ನಟರು ಸೇರಿದಂತೆ ಅನೇಕರು ಕಾಂಗೀಟೆನ್ ಗೆ ಪೂಜೆ ಮಾಡುತ್ತಾರೆ.

ಅಫ್ಘಾನಿಸ್ತಾನ: ಖಿಂಗಲ್ ಎಂಬ ರಾಜನಿಂದ ಪ್ರತಿಷ್ಠಾಪಿಸಲ್ಪಟ್ಟ ವಿನಾಯಕನ ವಿಗ್ರಹವು ಆಫ್ಘಾನಿಸ್ತಾನದ ಕಾಬೂಲ್ ಬಳಿಯ ಗಾರ್ಡೆಜ್‌ನಲ್ಲಿ ಪತ್ತೆಯಾಗಿದೆ. ಪುರಾತತ್ವಶಾಸ್ತ್ರಜ್ಞರು ಮತ್ತು ಇತಿಹಾಸಕಾರರು ಈ ಗಣೇಶನನ್ನು ಇಂಡೋ-ಆಫ್ಘನ್ ಶಾಲೆಯ ವಿಚಿತ್ರ ಉತ್ಪನ್ನ ಎಂದು ಪರಿಗಣಿಸುತ್ತಾರೆ. ಇದು 7-8ನೇ CE ಕಾಲದ ಟರ್ಕಿಶ್ ಸಾಮ್ರಾಜ್ಯಶಾಹಿ ಅವಧಿಗೆ ಸೇರಿದೆ ಎಂದು ನಂಬಲಾಗಿದೆ.

ಟಿಬೆಟ್: ಟಿಬೆಟಿಯನ್ ಬೌದ್ಧಧರ್ಮದ ಅತ್ಯಂತ ಗೌರವಾನ್ವಿತ ದೇವರುಗಳಲ್ಲಿ ಒಂದಾದ ಗಣೇಶನನ್ನು 11 ನೇ ಶತಮಾನದಲ್ಲಿ ಭಾರತೀಯ ಬೌದ್ಧ ಪಂಥದ ಹಿರಿಯ ಅತಿಶ ದೀಪಂಕರ ಸೃಜ್ಞಾ ಪರಿಚಯಿಸಿದರು. ಟಿಬೆಟ್‌ನಲ್ಲಿ ಗಣೇಶನ ಆರಾಧನೆಯ ಸಂಸ್ಥಾಪಕ, ಅನೇಕ ಭಾರತೀಯ ತಾಂತ್ರಿಕ ಗುರುಗಳು ಗಣೇಶನ ಕುರಿತು ಅನೇಕ ಭಾರತೀಯ ಗ್ರಂಥಗಳನ್ನು ಅನುವಾದಿಸಿದ್ದಾರೆ. ಟಿಬೆಟಿಯನ್ ಪುರಾಣದಲ್ಲಿನ ದಂತಕಥೆಯೊಂದು ಲಾಮಿಸ್ಟ್ ಸಂಘಟನೆಯನ್ನು ಸ್ಥಾಪಿಸುವಲ್ಲಿ ಗಣೇಶನ ಪಾತ್ರವಿದೆ ಎನ್ನುತ್ತದೆ. 11 ಅಥವಾ 12 ನೇ ಶತಮಾನದ ಈ ದಂತಕಥೆಯ ಪ್ರಕಾರ, ಗಣಪತಿಯು ಶಾಕ್ಯ ವಿದ್ವಾಂಸನ ( Sakya Pandita) ಸಹೋದರನನ್ನು ತನ್ನ ಸೊಂಡಿಲಿನಲ್ಲಿ ಹಿಡಿದಿಟ್ಟು, ಮೇರು ಪರ್ವತದ ಶಿಖರಾಗ್ರದ ಮೇಲೆ (Meru mountain) ಕೊಂಡೊಯ್ದು, ಟಿಬೆಟ್‌ನ ಎಲ್ಲಾ ಪ್ರಾಂತ್ಯಗಳು ತನ್ನ ಅನುಯಾಯಿಗಳ ಅಧೀನಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದನು.
Published On - 1:11 pm, Fri, 30 August 24



















