Jr NTR Birthday: ಟಾಲಿವುಡ್ ನಟನಾದರೂ ಕನ್ನಡದ ಮೇಲೆ ವಿಶೇಷ ಪ್ರೀತಿ ಹೊಂದಿರುವ ಜ್ಯೂ. ಎನ್‌ಟಿಆರ್

Happy Birthday Jr NTR: ತೆಲುಗು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಜ್ಯೂ.‌ ಎನ್‌ಟಿಆರ್ ಸಕ್ರಿಯರಾಗಿದ್ದಾರೆ. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಟಾಲಿವುಡ್‌ನಲ್ಲಿ ಬ್ಯುಸಿ ಆಗಿದ್ದರೂ ಕೂಡ ಅವರಿಗೆ ಕನ್ನಡದ ಮೇಲೆ ವಿಶೇಷ ಗೌರವ ಇದೆ.

May 20, 2022 | 7:26 AM
TV9kannada Web Team

| Edited By: shivaprasad.hs

May 20, 2022 | 7:26 AM

ದಕ್ಷಿಣ ಭಾರತದಲ್ಲಿ ಸ್ಟಾರ್ ನಟನಾಗಿ ಮಿಂಚುತ್ತಿದ್ದಾರೆ ಜ್ಯೂ.‌ ಎನ್‌ಟಿಆರ್. ಟಾಲಿವುಡ್‌ನ ಬಹುಬೇಡಿಕೆಯ ಈ ಕಲಾವಿದನಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಇಂದು (ಮೇ 20) ಬರ್ತ್‌ಡೇ ಆಚರಿಸಿಕೊಳ್ಳುತ್ತಿರುವ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ ಆಗುತ್ತಿದೆ. ಕನ್ನಡಿಗರು ಕೂಡ ಅವರಿಗೆ ವಿಶ್ ಮಾಡುತ್ತಿದ್ದಾರೆ.

1 / 5
ತೆಲುಗು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಜ್ಯೂ.‌ ಎನ್‌ಟಿಆರ್ ಸಕ್ರಿಯರಾಗಿದ್ದಾರೆ. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಟಾಲಿವುಡ್‌ನಲ್ಲಿ ಬ್ಯುಸಿ ಆಗಿದ್ದರೂ ಕೂಡ ಅವರಿಗೆ ಕನ್ನಡದ ಮೇಲೆ ವಿಶೇಷ ಗೌರವ ಇದೆ. ಹಾಗಾಗಿ ಕನ್ನಡದ ಸಿನಿಪ್ರಿಯರಿಗೂ ಜ್ಯೂ.‌ ಎನ್‌ಟಿಆರ್ ಎಂದರೆ ಅಚ್ಚುಮೆಚ್ಚು.

2 / 5
ಅನೇಕ ವೇದಿಕೆಗಳಲ್ಲಿ ಜ್ಯೂ.‌ ಎನ್‌ಟಿಆರ್ ಅವರು ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಅವರು ಕನ್ನಡ ಬಳಸುತ್ತಾರೆ. ಕರ್ನಾಟಕದ ಮಾಧ್ಯಮದವರು ಪ್ರಶ್ನೆ ಕೇಳಿದಾಗ ಕನ್ನಡದಲ್ಲಿಯೇ ಉತ್ತರ ನೀಡುವ ಮೂಲಕ ಇಲ್ಲಿನ ಜನರ ಮನ ಗೆದ್ದಿದ್ದಾರೆ. ಕನ್ನಡದ ಮೇಲೆ ಅವರು ಹೊಂದಿರುವ ಪ್ರೀತಿಗೆ ಹಲವು ನಿದರ್ಶನ ಸಿಗುತ್ತದೆ.

3 / 5
ಜ್ಯೂ.‌ ಎನ್‌ಟಿಆರ್ ಅವರ ತಾಯಿ ಶಾಲಿನಿ ಕನ್ನಡದವರು. ಅವರ ಮೂಲ ಊರು ಕುಂದಾಪುರ. ಹಾಗಾಗಿ ಜ್ಯೂ.‌ ಎನ್‌ಟಿಆರ್ ಅವರಿಗೆ ಮನೆಯಲ್ಲಿ ಕನ್ನಡ ಮಾತನಾಡಿ ಅಭ್ಯಾಸ ಇದೆ. ಕನ್ನಡವನ್ನು ಅವರು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಆರ್‌ಆರ್‌ಆರ್ ಸಿನಿಮಾದ ಕನ್ನಡ ಅವತರಣಿಕೆಗೆ ಸ್ವತಃ ಡಬ್ ಮಾಡಿದ್ದಾರೆ.

4 / 5
'ಆರ್‌ಆರ್‌ಆರ್‌' ಸಿನಿಮಾ ಸೂಪರ್ ಹಿಟ್ ಆದ ಬಳಿಕ ಜ್ಯೂ.‌ ಎನ್‌ಟಿಆರ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರ ಮುಂದಿನ ಚಿತ್ರಕ್ಕಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ‌. 'ಕೆಜಿಎಫ್ 2' ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಜ್ಯೂ.‌ ಎನ್‌ಟಿಆರ್ ಒಂದು ಸಿನಿಮಾ ಮಾಡಬೇಕಿದೆ. ಆ ಬಗ್ಗೆ ಅಪ್‌ಡೇಟ್ ತಿಳಿಯಲು ಅಭಿಮಾನಿಗಳ ಹಂಬಲ ಹೆಚ್ಚಿದೆ.

5 / 5

Follow us on

Most Read Stories

Click on your DTH Provider to Add TV9 Kannada