Harihareshwara Brahma Rathotsava: ಹರಿಹರದಲ್ಲಿ ಹರಿಹರೇಶ್ವರ ಬ್ರಹ್ಮರಥೋತ್ಸವ, ಎತ್ತ ನೋಡಿದರೂ ಜನವೋ ಜನ

| Updated By: ಆಯೇಷಾ ಬಾನು

Updated on: Feb 24, 2024 | 2:51 PM

ದಾವಣಗೆರೆ ಜಿಲ್ಲೆಯ ಹರಿಹರದ ಹರಿಹರೇಶ್ವರ ದೇವಸ್ಥಾನದ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ಜರುಗಿತು. ಬ್ರಹ್ಮರಥೋತ್ಸವಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಈ ದೇವಸ್ಥಾನದಲ್ಲಿ ಒಂದೇ ಶಿಲೆಯಲ್ಲಿ ಅರ್ಧ ಹರ ಮತ್ತು ಅರ್ಧ ಹರಿಯನ್ನು ಕಾಣಬಹುದು. ಇದೊಂದು ಅಪರೂಪದ ದೇವಸ್ಥಾನ.

1 / 8
ವರ್ಷಕ್ಕೊಮ್ಮೆ ನಡೆಯುವ ಹರಿಹರದ ಹರಿಹರೇಶ್ವರ ಬ್ರಹ್ಮರಥೋತ್ಸವಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಇಲ್ಲಿನ ವಿಶೇಷ ಅಂದ್ರೆ ಸಮಯಕ್ಕೆ ಸರಿಯಾಗಿ ಈ ರಥೋತ್ಸವ ನಡೆಯುತ್ತೆ. ಒಂದು ನಿಮಿಷವೂ ಬದಾವಣೆ ಆಗುವಂತಿಲ್ಲ. ಇದು ಶಿವ ಮತ್ತು ವಿಷ್ಣುವಿಗೆ ಒಂದೇ  ದೇವಸ್ಥಾನದಲ್ಲಿ ಪೂಜೆ ನಡೆಯುವ ಜಗತ್ತಿನ ಏಕೈಕ ಪುಣ್ಯಕ್ಷೇತ್ರ.

2 / 8
ದಾವಣಗೆರೆ ಜಿಲ್ಲೆಯ ಹರಿಹರದ ಹರಿಹರೇಶ್ವರ ದೇವಸ್ಥಾನದಲ್ಲಿ ಒಂದೇ  ಶಿಲೆಯಲ್ಲಿ  ಅರ್ಧ ಹರ ಮತ್ತು ಅರ್ಧ ಹರಿಯನ್ನು ಕಾಣಬಹುದು. ಇದೊಂದು ಅಪರೂಪದ ದೇವಸ್ಥಾನ. ಇಂತಹ ಕ್ಷೇತ್ರದಲ್ಲಿ ಭಾರತ ಹುಣ್ಣಿಮೆಯ ಹಿಂದೆ ಮುಂದೆ ಮೇಷ ಲಗ್ನದಲ್ಲಿ ಬೆಳಿಗ್ಗೆ 11.45ಕ್ಕೆ ಬ್ರಹ್ಮರಥೋತ್ಸವ ನಡೆಯಿತು.

3 / 8
ಇದಕ್ಕೂ  ಮೊದಲು ಸಪ್ತ ರಾತ್ರೋತ್ಸವ ಎಂಬ ಆಚರಣೆ ಇಲ್ಲಿ ನಡೆಯುತ್ತದೆ. ಸತತ ಏಳು ದಿನಗಳ ಕಾಲ ಹೋಮ ಹವನ, ಮಹಾರುದ್ರಾಭಿಷೇಕ ಜೊತೆಗೆ ಪೂರ್ಣಾಹುತಿ ನಡೆಯುತ್ತದೆ. ಇದರಲ್ಲಿ ಬರುವ ಆರನೇ ದಿನಕ್ಕೆ ರಥೋತ್ಸವ ನಡೆಯುತ್ತದೆ. ಇಲ್ಲಿ ಹರಕೆ ತಿಸಿದರೆ ಜೀವನ ಪಾವನವೆಂಬ ಮಾತಿದೆ.

4 / 8
ವಿಜಯನಗರ ಜಿಲ್ಲೆಯ ಮೈಲಾರ ಲಿಂಗನ ಜಾತ್ರೆಗೆ  ಹೋಗಬೇಕಾದರೆ ಹರಿಹರನ ದರ್ಶನ ಕಡ್ಡಾಯವಂತೆ.  ಈಗ ಭಾಗದ ನವ ವಿವಾಹಿತೆಯರಿಗೆ ರಥೋತ್ಸವಕ್ಕೆ  ಹಾಜರಾಗುವುದು ಒಂದು ರೀತಿ ಕಡ್ಡಾಯ. ಸುಮಾರು 12ನೇ ಶತಮಾನದಲ್ಲಿ ಅದ್ಭುತವಾದ ಶಿಲ್ಪ ಕಲೆ ಇರುವ ದೇವಸ್ಥಾನ ನಿರ್ಮಾಣವಾಗಿದೆ.

5 / 8
ಪುರಾಣಗಳಲ್ಲಿ ಉಲ್ಲೇಖವಾದಂತೆ  ದೇವಸ್ಥಾನದ ಪಕ್ಕದಲ್ಲಿಯೇ ತುಂಗಭದ್ರ ನದಿ ಹರಿದಿದೆ. ಹೀಗಾಗಿ ಹಿಂದೆ ಇದೊಂದು ತಪಸ್ವಿಗಳ ತಾಣವಾಗಿತ್ತು. ಸುತ್ತಲು ಗಿಡ ಮರಗಳು ಪ್ರಶಾಂತವಾದ ಸ್ಥಳ.  ರಾಜ್ಯದ ಬಹುತೇಕ ಕಡೆ ಸಂಪರ್ಕಕ್ಕೆ ರಸ್ತೆಗಳು ಆಗಿನ ಕಾಲದಲ್ಲಿ ಇದ್ದವು. ಇಲ್ಲೊಬ್ಬ ಗುಹಾರಣ್ಯ ಎಂಬ  ಮಹಾತಪಸ್ವಿ ಇದ್ದ.  ಇತ ತಪಸ್ಸಿನ ಫಲದಿಂದ ಬೇಕಾದನ್ನ ಸಾಧಿಸುವ ಶಕ್ತಿ ಗಳಿಸಿದ್ದ.

6 / 8
ಜೊತೆಗೆ ಶಿವ ಮತ್ತು ವಿಷ್ಣುವಿನಿಂದಲೂ ಸಾವಿಲ್ಲ ಎಂಬ ವರ ಪಡೆದಿದ್ದ.  ಇತನ ಉಪಟಳ ಜಾಸ್ತಿಯಾಗಿತ್ತು. ಗುಹಾರಣ್ಯನಿಗೆ ಗೊತ್ತಿತ್ತು ಹರಿ ಮತ್ತು ಹರ ಒಂದಾಗಲು ಸಾಧ್ಯವೆ ಇಲ್ಲವೆಂದು. ತನ್ನ ಸಾವು ಆಗಲ್ಲ ಎಂದು ಕೊಂಡಿದ್ದ. ಇದೇ ಕಾರಣಕ್ಕೆ ಹರಿ ಮತ್ತು ಹರ ಒಂದು    ರೂಪ ತಾಳಿ  ಆ ತಪಸ್ವಿಯನ್ನ ನಿರ್ನಾಮ ಮಾಡಿದರು.  ಅಲ್ಲಿಂದ ಇದಕ್ಕೆ ಹರಿಹರ ಎಂದು ಹೆಸರು ಬಂತು.

7 / 8
ಇಲ್ಲಿನ  ದೇವರಿಗೆ ಪಾದುಕೆಗಳಲ್ಲ. ಆ ಪಾದುಕೆಗಳು ತುಂಗಭದ್ರ ನದಿಯ ಮಧ್ಯಭಾಗದ ಮಂಟಪದಲ್ಲಿ ಪೂಜೆ ಆಗುತ್ತಿವೆ. ಅದಕ್ಕೂ ಒಂದು ಇತಿಹಾಸವಿದೆ. ಹೀಗೆ ಹರಿ ಹರರು ಸೇರಿ  ಜನರಿಗೆ ತೀವ್ರ ತೊಂದರೆ ಕೂಡುತ್ತಿದ್ದ ಗುಹಾರಣ್ಯನ ಸಂವಾರ ಮಾಡಿದರು. ಹೀಗೆ ಸಂವಾರ ಆಗುವ ವೇಳೆ ಆತ ಹಾಗೆ ಸಾವನ್ನಪ್ಪಲ್ಲಿಲ್ಲ.  ದೇವರ ಕಡೆ ಮೂರು ವರ ಕೇಳಿದ. ಒಂದು ಈ ಪ್ರದೇಶಕ್ಕೆ ಗುಹಾರಣ್ಯ ಪ್ರದೇಶವೆಂದು ಹೆಸರಿಡಬೇಕು. ಈ ಕ್ಷೇತ್ರದಲ್ಲಿ ಸಾವನ್ನಪ್ಪಿದವರಿಗೆ ಮೋಕ್ಷ ಪ್ರಾಪ್ತಿಯಾಗಬೇಕು.

8 / 8
ಜೊತೆಗೆ ಹರಿ ಮತ್ತು ಹರನ ಪಾದುಕೆಗಳು ಸದಾ ನನ್ನ ಎದೆಯ ಮೇಲೆ ಇರಬೇಕು. ಹೀಗಾಗಿ ದೇವಸ್ಥಾನದಲ್ಲಿ ದೇವರಿಗೆ ಪಾದುಕೆಗಳಿಲ್ಲ. ಆ ಪಾದುಕೆಗಳು ತುಂಗಭದ್ರಾ ನದಿಯ ನಡುವೆ  ಮಂಟಪದಲ್ಲಿವೆ. ಇಂತಹ ಅಪರೂಪದ  ಕ್ಷೇತ್ರಕ್ಕೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ರಥೋತ್ಸವಕ್ಕಾಗಿಯೇ ಹರಿಹರ ಪಟ್ಟಣದಲ್ಲಿ ರಥಬೀದಿ ಅಂತಿದೆ. ಆ ಬೀದಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ರಥೋತ್ಸವ ನಡೆಯಿತು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ನಾನಾ ಹರಕೆಗಳನ್ನ ತಿರಿಸಿದರು.