- Kannada News Photo gallery India's Chandrayaan-3 On Its Way To The Moon Expects To Land August 23rd at around 5.47pm
Chandrayaan-3: ನಭಕ್ಕೆ ಚಿಮ್ಮಿದ ರಾಕೆಟ್: ಚಂದ್ರಯಾನ 3 ಉಡಾವಣೆಯ ಐತಿಹಾಸಿಕ ಕ್ಷಣದ ಚಿತ್ರಗಳು
ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಹೊತ್ತ ಬಾಹ್ಯಾಕಾಶ ನೌಕೆ ಇಂದು ಮಧ್ಯಾಹ್ನ 2.35ಕ್ಕೆ ನಭಕ್ಕೆ ಚಿಮ್ಮಿದೆ. ಸುಮಾರು 16 ನಿಮಿಷಗಳ ಹಾರಾಟದ ನಂತರ ಉಪಗ್ರಹವು ರಾಕೆಟ್‌ನಿಂದ ಬೇರ್ಪಟ್ಟ ನಿಮಿಷಗಳ ನಂತರ "ಚಂದ್ರಯಾನ 3 ಚಂದ್ರನತ್ತ ಸಾಗುತ್ತಿದೆ" ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ. ಎಲ್ಲವೂ ಸರಿಯಾಗಿ ನಡೆದರೆ ಆಗಸ್ಟ್ 23 ರಂದು ಸಂಜೆ 5.47 ಕ್ಕೆ ಇದು ಚಂದ್ರನಲ್ಲಿ ಇಳಿಯಲಿದೆ
Updated on: Jul 14, 2023 | 4:53 PM

ಇಡೀ ರಾಷ್ಟ್ರದ ಭರವಸೆಯನ್ನು ಹೊತ್ತು ಭಾರತದ ಚಂದ್ರಯಾನ-3 ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಆಗಿದೆ

GSLV ಮಾರ್ಕ್ 3 (LVM 3) ಹೆವಿ-ಲಿಫ್ಟ್ ಉಡಾವಣಾ ವಾಹನದಲ್ಲಿ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಯಿತು

ಚಂದ್ರಯಾನ-3 ಕಾರ್ಯಾಚರಣೆಯು ಯಶಸ್ವಿಯಾದರೆ, ರಷ್ಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾದ ನಂತರ ಚಂದ್ರನ ಮೇಲೆ ನಿಯಂತ್ರಿತ ಲ್ಯಾಂಡಿಂಗ್ ಸಾಧಿಸಿದ ನಾಲ್ಕನೇ ದೇಶವಾಗಲಿದೆ ಭಾರತ

ಎಲ್ಲವೂ ಸರಿಯಾಗಿ ನಡೆದರೆ ಆಗಸ್ಟ್ 23 ರಂದು ಸಂಜೆ 5.47 ಕ್ಕೆ ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದ್ದಾರೆ

ಲ್ಯಾಂಡಿಂಗ್ ನಂತರ, ಇದು ಒಂದು ಚಂದ್ರನ ದಿನಕ್ಕೆ ಕಾರ್ಯನಿರ್ವಹಿಸುತ್ತದೆ. ಅಂದರೆ ಸರಿಸುಮಾರು 14 ಭೂಮಿಯ ದಿನಗಳು. ಚಂದ್ರನ ಮೇಲಿನ ಒಂದು ದಿನವು ಭೂಮಿಯ ಮೇಲಿನ 14 ದಿನಗಳಿಗೆ ಸಮಾನವಾಗಿರುತ್ತದೆ.

ಚಂದ್ರಯಾನ-3 ಮೂರು ಪ್ರಮುಖ ಘಟಕಗಳನ್ನು ಹೊಂದಿರುತ್ತದೆ - ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾದರಿ. ಇದು ಚಂದ್ರನ ವಾತಾವರಣದಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಚಂದ್ರಯಾನ-2 ರ ಆರ್ಬಿಟರ್ ಅನ್ನು ಬಳಸುತ್ತದೆ.

ಮೊದಲ ಬಾರಿಗೆ, ಭಾರತದ ಚಂದ್ರನೌಕೆ 'ವಿಕ್ರಮ್' ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ, ಅಲ್ಲಿ ನೀರಿನ ಕಣ ಕಂಡುಬಂದಿವೆ. 2008 ರಲ್ಲಿ ಭಾರತದ ಮೊದಲ ಚಂದ್ರಯಾನದ ಸಮಯದಲ್ಲಿ ಕಂಡುಬಂದ ಈ ಸಂಶೋಧನೆಯು ಜಗತ್ತನ್ನು ಬೆಚ್ಚಿ ಬೀಳಿಸಿತ್ತು.

ವಿಕ್ರಮ್ ಸುರಕ್ಷಿತ, ಮೃದುವಾದ ಲ್ಯಾಂಡಿಂಗ್ ಮಾಡಿದ ನಂತರ ರೋವರ್ ಪ್ರಗ್ಯಾನ್ ಅನ್ನು ಬಿಡುಗಡೆ ಮಾಡುತ್ತದೆ, ಇದು ಚಂದ್ರನ ಮೇಲ್ಮೈಯಲ್ಲಿ ಸಂಚರಿಸುತ್ತದೆ.



















