ಕೊಪ್ಪಳ ಗವಿಮಠದ ಜಾತ್ರೆಯಲ್ಲಿ ಟೆರೇಸ್ ಕಿಚನ್ ಅನಾವರಣ: ಸ್ವಾವಲಂಬಿ ಬದುಕಿಗೆ ಪ್ರೇರಣೆ
ಕೊಪ್ಪಳದ ಗವಿಮಠದ ಜಾತ್ರೆ ಕೇವಲ ಸಂಭ್ರಮಕ್ಕೆ ಮಾತ್ರ ಸೀಮಿತವಾಗಿಲ್ಲ. ಸಂಭ್ರಮದ ಜೊತೆಗೆ ಅರಿವು ಮತ್ತು ಜ್ಞಾನ ಸಂಪಾಧನೆ, ಸ್ವಯಂ ಉದ್ಯೋಗ, ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡುತ್ತಿದೆ. ಜಾತ್ರೆಯಲ್ಲಿ ಈ ಬಾರಿ ಟೆರೇಸ್ ಕಿಚನ್ ಪರಿಚಯ ಮಾಡಿದ್ದು, ಮಹಿಳೆಯರು ಮನೆಯಲ್ಲಿಯೇ ಹೇಗೆ ತರಕಾರಿ, ಸೊಪ್ಪು ಬೆಳೆದುಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಡಲಾಗಿದೆ.
1 / 6
ಕೊಪ್ಪಳದ ಗವಿಮಠದ ಜಾತ್ರೆ ಸಂಭ್ರಮದ ಜೊತೆಗೆ ಅರಿವು ಮತ್ತು ಜ್ಞಾನ ಸಂಪದಾನೆ, ಸ್ವಯಂ ಉದ್ಯೋಗ, ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡುತ್ತಿದೆ. ಜಾತ್ರೆಯಲ್ಲಿ ಈ ಬಾರಿ ಟೆರೇಸ್ ಕಿಚನ್ ಪರಿಚಯ ಮಾಡಿದ್ದು, ಮಹಿಳೆಯರು ಮನೆಯಲ್ಲಿಯೇ ಹೇಗೆ ತರಕಾರಿ, ಸೊಪ್ಪು ಬೆಳೆದುಕೊಳ್ಳಬಹುದು ಎಂಬುವುದನ್ನು ತೋರಿಸಿಕೊಡಲಾಗಿದೆ.
2 / 6
ಈ ವರ್ಷ ಮಠದ ಜಾತ್ರೆಯಲ್ಲಿ ತೋಟಗಾರಿಕೆ ಇಲಾಖೆಯ ಮೂಲಕ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಪ್ರಮುಖವಾಗಿ ಟೆರೇಸ್ ಕಿಚನ್ ನನ್ನು ಹೇಗೆ ಜನರು ಮಾಡಿಕೊಳ್ಳಬಹುದು, ಅದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಲಾಗಿದೆ.
3 / 6
ಇತ್ತೀಚೆಗೆ ತರಕಾರಿ ಸೇರಿದಂತೆ ಆಹಾರ ಪದಾರ್ಥಗಳು ಕಲುಷಿತಗೊಳ್ಳುತ್ತಿವೆ. ಇದರಿಂದ ನಮ್ಮ ಆರೋಗ್ಯ ಹದಗೆಡುತ್ತಿದೆ. ಹೀಗಾಗಿ ನಾವು ಸುಲಭವಾಗಿ ನಿರುಪಯೋಗಿ ವಸ್ತುಗಳನ್ನು ಬಳಸಿಕೊಂಡು, ಮನೆಯ ಟೆರೇಸ್ ಮೇಲೆ ತರಕಾರಿ, ಹಣ್ಣುಗಳನ್ನು ಬೆಳೆಯಬಹುದಾಗಿದೆ.
4 / 6
ಟೆರೇಸ್ ಕಿಚನ್ನಿಂದ ಕಲುಷಿತ ಮುಕ್ತ, ತಾಜಾ ತರಕಾರಿಯನ್ನು ಪಡೆಯಬಹುದು, ಜೊತೆಗೆ ದೈಹಿಕವಾಗಿ ಕೆಲಸ ಮಾಡುವದರಿಂದ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತೆ. ಮೈ ಟೆರೇಸ್ ಈಸ್ ಮೈ ಜಿಮ್ ಅಂತ ಹೇಳಿರುವ ಗವಿಮಠದ ಸ್ವಾಮೀಜಿ, ನೀವು ಟೆರಸ್ ಕಿಚನ್ ಮೂಲಕ ದೈಹಿಕವಾಗಿಯೂ ಚಟುವಟಿಕೆಯಿಂದ ಇರಬಹುದು. ಜೊತೆಗೆ ಉತ್ತಮ ಮತ್ತು ತಾಜಾ ತರಕಾರಿ ಹಣ್ಣುಗಳನ್ನು ಕೂಡ ಪಡೆಯಬಹುದು. ಕಡಿಮೆ ಖರ್ಚಿನಲ್ಲಿ ಟೆರೇಸ್ ಕಿಚನ್ ಮಾಡಿಕೊಳ್ಳಿ ಅಂತ ಭಕ್ತರಿಗೆ ಸೂಚನೆ ನೀಡಿದ್ದಾರೆ.
5 / 6
ಮಧ್ಯಮ ವರ್ಗದವರು ಕೂಡ ಸುಲಭವಾಗಿ ಮಣ್ಣಿನ ಪ್ಯಾಕೇಟ್, ಪ್ಲಾಸ್ಟಿಕ್ ಕುಂಡಗಳಲ್ಲಿ ಹೇಗೆ ತರಕಾರಿ, ಹೂ, ಹಣ್ಣು ಬೆಳೆಸಬಹುದು ಎನ್ನುವುದಕ್ಕೆ ಮಾದರಿ ಕೂಡ ಇದೆ. ಮನೆಯಲ್ಲಿರುವ ನಿರುಪಯೋಗಿ ಪ್ಲಾಸ್ಟಿಕ್ ಬಾಟಲ್, ಟೈರ್ ಸೇರಿದಂತೆ ಅನೇಕ ವಸ್ತುಗಳನ್ನು ಹೇಗೆ ಟೆರೇಸ್ ಕಿಚನ್ಗೆ ಬಳಸಿಕೊಳ್ಳಬಹುದು ಅನ್ನೋದನ್ನು ತೋರಿಸಲಾಗಿದೆ.
6 / 6
ಕೊಪ್ಪಳ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಳೆದ ಜನವರಿ 27 ರಿಂದ ಜಾತ್ರೆಯಲ್ಲಿ ಮುಂಜಾನೆಯಿಂದ ರಾತ್ರಿವರಗೆ ಬೀಡುಬಿಟ್ಟು, ಟೆರೇಸ್ ಕಿಚನ್ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದಾರೆ. ಇನ್ನು ಯಾರಾದ್ರು ತರಬೇತಿ ಬೇಕು ಅಂದರೆ ನೀಡಲು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.
Published On - 7:20 pm, Thu, 1 February 24