ಟಾಟಾ ಮೋಟಾರ್ಸ್ ಕಂಪನಿಯು 2023ರ ಆಟೋ ಎಕ್ಸ್ಪೋದಲ್ಲಿ ತನ್ನ ಬಹುನೀರಿಕ್ಷಿತ ಹಲವು ಹೊಸ ಕಾರು ಮಾದರಿಗಳನ್ನ ಅನಾವರಣಗೊಳಿಸಿದ್ದು, ಹೊಸ ಕಾರುಗಳ ಪಟ್ಟಿಯಲ್ಲಿ ಸಫಾರಿ ಮತ್ತು ಹ್ಯಾರಿಯರ್ ರೆಡ್ ಡಾರ್ಕ್ ಎಡಿಷನ್ ಗಳು ಗಮನಸೆಳೆದವು. ಹೊಸ ಕಾರುಗಳು ಶೀಘ್ರದಲ್ಲಿಯೇ ಬಿಡುಗಡೆಯಾಗಲಿದ್ದು, ಹೊಸ ಕಾರುಗಳ ಮತ್ತಷ್ಟು ಮಾಹಿತಿ ಇಲ್ಲಿದೆ.
Jan 14, 2023 | 4:24 PM
ಹೊಸ ಎಸ್ ಯುವಿ ಕಾರುಗಳಲ್ಲಿ ಐಷಾರಾಮಿ ಲುಕ್ ಬಯಸುವ ಗ್ರಾಹಕರಿಗಾಗಿ ವಿನೂತನ ಫೀಚರ್ಸ್ ಹೊಂದಿರುವ ಟಾಟಾ ಸಫಾರಿ ಮತ್ತು ಹ್ಯಾರಿಯರ್ ರೆಡ್ ಡಾರ್ಕ್ ಎಡಿಷನ್ ಅನಾವರಣ ಮಾಡಲಾಗಿದೆ.
1 / 8
ದೆಹಲಿಯಲ್ಲಿ ನಡೆಯುತ್ತಿರುವ 2023ರ ಆಟೋ ಎಕ್ಸ್ಪೋದಲ್ಲಿ ಹೊಸ ಕಾರುಗಳನ್ನು ಅಧಿಕೃತವಾಗಿ ಅನಾವರಣಗೊಳಿಸಿ ಬುಕಿಂಗ್ ಪ್ರಕ್ರಿಯೆ ಚಾಲನೆ ನೀಡಲಾಗಿದೆ.
2 / 8
ಕಪ್ಪು ಬಣ್ಣದೊಂದಿಗೆ ಕೆಂಪು ಆಕ್ಸೆಂಟ್ ಹೊಂದಿರುವ ಸಫಾರಿ ಮತ್ತು ಹ್ಯಾರಿಯರ್ ವಿಶೇಷ ಆವೃತ್ತಿಗಳು ಸ್ಟ್ಯಾಂಡರ್ಡ್ ಫೀಚರ್ಸ್ ಜೊತೆಗೆ ವಿಶೇಷ ಬಣ್ಣದ ಆಯ್ಕೆಯೊಂದಿಗೆ ಐಷಾರಾಮಿ ಲುಕ್ ಪಡೆದುಕೊಂಡಿವೆ.
3 / 8
ವಿಶೇಷ ಬಣ್ಣದ ಆಯ್ಕೆಯೊಂದಿಗೆ ಅತ್ಯುತ್ತಮ ಕ್ಯಾಬಿನ್ ಸೌಲಭ್ಯಗಳನ್ನು ಹೊಂದಿರುವ ಹೊಸ ಕಾರುಗಳು ಐಷಾರಾಮಿ ಲುಕ್ ಹೊಂದಿದ್ದು, ವಿಶೇಷ ಮಾದರಿಗಳಿಗಾಗಿ ಟಾಟಾ ಮೋಟಾರ್ಸ್ ಕಂಪನಿಯು ಎಡಿಎಎಸ್ ಸೇಫ್ಟಿ ಸೂಟ್ ಜೋಡಣೆ ಮಾಡಿದೆ.
4 / 8
ಎಡಿಎಎಸ್(ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ) ಸೂಟ್ ನಲ್ಲಿ ಆಟೋನಮಸ್ ಎಮರ್ಜೆನ್ಸಿ ಬ್ರೇಕಿಂಗ್, ಫಾರ್ವರ್ಡ್ ಕೂಲಿಷನ್ ಅಲರ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಲೇನ್ ಡಿಪಾರ್ಚರ್ ವಾರ್ನಿಂಗ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಸೇರಿ ಹಲವು ಹೊಸ ಸುರಕ್ಷಾ ಸೌಲಭ್ಯಗಳಿವೆ.
5 / 8
ಹ್ಯಾರಿಯರ್ ಮತ್ತು ಸಫಾರಿ ರೆಡ್ ಡಾರ್ಕ್ ಎಡಿಷನ್ ಗಳು ಸಾಮಾನ್ಯ ಆವೃತ್ತಿಗಳಿಂತಲೂ ತುಸು ದುಬಾರಿ ಬೆಲೆ ಹೊಂದಿರಲಿದ್ದು, ರೂ. 1 ಲಕ್ಷದಿಂದ ರೂ. 1.50 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.
6 / 8
ಹ್ಯಾರಿಯರ್ ಮತ್ತು ಸಫಾರಿ ರೆಡ್ ಡಾರ್ಕ್ ಎಡಿಷನ್ ಗಳಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ 2.0-ಲೀಟರ್ ಡೀಸೆಲ್ ಎಂಜಿನ್ ಎಂಜಿನ್ ಆಯ್ಕೆ ಮುಂದುವರಿಸಲಾಗಿದೆ. ಇವು 6-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ ಜೋಡಣೆ ಹೊಂದಿದ್ದು, ಶೀಘ್ರದಲ್ಲಿಯೇ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ.
7 / 8
ಹ್ಯಾರಿಯರ್ ಮತ್ತು ಸಫಾರಿ ಕಾರುಗಳಲ್ಲಿ ಹೊಸದಾಗಿ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡುವುದಕ್ಕಾಗಿ ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗಿದೆ.