Neeraj Chopra: ಒಲಿಂಪಿಕ್ಸ್​ ಇತಿಹಾಸದಲ್ಲಿ ಭಾರತಕ್ಕಿದು 2ನೇ ಚಿನ್ನದ ಪದಕ

Tokyo Olympics 2020: ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಫೈನಲ್​ನಲ್ಲಿ ಒಟ್ಟು 12 ಸ್ಪರ್ಧಿಗಳು ಭಾಗವಹಿಸಿದ್ದರು. ಭರ್ಜರಿ ಪೈಪೋಟಿಗೆ ಕಾರಣವಾಗಿದ್ದ ಈ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಪ್ರಥಮ ಸುತ್ತಿನಲ್ಲಿ 87.03 ಮೀಟರ್ ದೂರ ಎಸೆಯುವ ಮೂಲಕ ಮುನ್ನಡೆ ಸಾಧಿಸಿದರು.

Aug 07, 2021 | 7:13 PM
TV9kannada Web Team

| Edited By: Zahir PY

Aug 07, 2021 | 7:13 PM

ಒಲಿಂಪಿಕ್ಸ್ ( Olympics) ಕ್ರೀಡಾಕೂಟ ಆರಂಭವಾಗಿ 124 ವರ್ಷಗಳು ಕಳೆದಿವೆ. ಕಳೆದ ಒಂದು ಶತಮಾನದಿಂದಲೂ ಒಲಿಂಪಿಕ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದರೂ, ಪ್ರಶಸ್ತಿ ಪಟ್ಟಿಯಲ್ಲಿ ಮಹತ್ವದ ಸಾಧನೆ ಮೆರೆಯಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ವೈಯುಕ್ತಿಕ ವಿಭಾಗದಲ್ಲಿ ಇದುವೆರೆಗೆ ಭಾರತ ಗೆದ್ದ ಚಿನ್ನದ ಪದಕ ಸಂಖ್ಯೆ ಕೇವಲ ಒಂದು ಆಗಿತ್ತು.

1 / 6
ಆದರೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಥ್ರೋ ಮೂಲಕ ನೀರಜ್ ಚೋಪ್ರಾ ಭಾರತಕ್ಕೆ ಮತ್ತೊಮ್ಮೆ ಸ್ವರ್ಣ ಪದಕ ತಂದುಕೊಟ್ಟಿದ್ದಾರೆ. ಈ ಪದಕದೊಂದಿಗೆ ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಭಾರತದ ಪದಕದ ಸಂಖ್ಯೆ 7ಕ್ಕೇರಿದೆ. ಇದರೊಂದಿಗೆ ಭಾರತ ಒಲಿಂಪಿಕ್ಸ್​ನಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡಿದಂತಾಗಿದೆ.

2 / 6
 ಈ ಹಿಂದೆ 2008ರಲ್ಲಿ ಅಭಿನವ್ ಬಿಂದ್ರಾ 19ಎಂ ರೈಫಲ್ಸ್ ಶೂಟಿಂಗ್​ನಲ್ಲಿ ಭಾರತಕ್ಕೆ ಚೊಚ್ಚಲ ಸ್ವರ್ಣ ಪದಕ ತಂದುಕೊಟ್ಟಿದ್ದರು. ಇದಾಗಿ 2 ಒಲಿಂಪಿಕ್ಸ್ ಕಳೆದರೂ ಮತ್ತೆ ಭಾರತ ಚಿನ್ನದ ಪದಕವನ್ನು ಗೆದ್ದುಕೊಂಡಿರಲಿಲ್ಲ. ಇದೀಗ ನೀರಜ್ ಚೋಪ್ರಾ ಚಿನ್ನದ ಬೇಟೆಯೊಂದಿಗೆ ಪದಕ ಪಟ್ಟಿಯಲ್ಲಿ ಭಾರತದ ಸ್ವರ್ಣ ಪದಕದ ಖಾತೆ ತೆರೆದಿದ್ದಾರೆ.

3 / 6
ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಫೈನಲ್​ನಲ್ಲಿ ಒಟ್ಟು 12 ಸ್ಪರ್ಧಿಗಳು ಭಾಗವಹಿಸಿದ್ದರು. ಭರ್ಜರಿ ಪೈಪೋಟಿಗೆ ಕಾರಣವಾಗಿದ್ದ ಈ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಪ್ರಥಮ ಸುತ್ತಿನಲ್ಲಿ 87.03 ಮೀಟರ್ ದೂರ ಎಸೆಯುವ ಮೂಲಕ ಮುನ್ನಡೆ ಸಾಧಿಸಿದರು. ಹಾಗೆಯೇ 2ನೇ ಸುತ್ತಿನಲ್ಲಿ ನೀರಜ್ ಎಸೆದ ಥ್ರೋ 87.58 ಮೀಟರ್ ತಲುಪುತ್ತಿದ್ದಂತೆ ಚಿನ್ನದ ಪದಕ ನಿರೀಕ್ಷಿಸಲಾಗಿತ್ತು. ಇನ್ನು 3ನೇ ಸುತ್ತಿನಲ್ಲಿ 76.79 ಮೀಟರ್ ದೂರ ಎಸೆದರು. 4ನೇ ಮತ್ತು  5ನೇ ಸುತ್ತಿನಲ್ಲಿ ಫೌಲ್‌ ಆದ ಕಾರಣ ಆತಂಕ ಎದುರಾಗಿತ್ತು. ಇದಾಗ್ಯೂ 6ನೇ ಸುತ್ತಿನಲ್ಲಿ 84.24 ದೂರ ಎಸೆಯುವ ಮೂಲಕ ತಮ್ಮ ರೌಂಡ್ ಮುಗಿಸಿದರು.

ಆದರೆ ನೀರಜ್ ಎಸೆದ 2ನೇ ಸುತ್ತಿನ 87.58 ಮೀಟರ್ ಥ್ರೋವನ್ನು ದಾಟಲು ಯಾವೊಬ್ಬ ಸ್ಪರ್ಧಿಗಳಿಗೂ ಸಾಧ್ಯವಾಗಿಲ್ಲ. ಇದರೊಂದಿಗೆ ನೀರಜ್ ಚೋಪ್ರಾ ಅವರ ಚಿನ್ನದ ಪದಕ ಖಚಿತವಾಯಿತು. 86.67 ಮೀಟರ್ ಎಸೆದ ಜೆಕ್​ ರಿಪಬ್ಲಿಕ್​ನ ಜಾಕೋಬ್ ವಡ್ಲೇಜ್ ದ್ವಿತೀಯ ಸ್ಥಾನ ಅಲಂಕರಿಸಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡರು. ಇನ್ನು ಮತ್ತೊರ್ವ ಜೆಕ್ ರಿಪಬ್ಲಿಕ್ ಸ್ಪರ್ಧಿ ವಿಟೆಜ್ಸ್ಲಾವ್ 85.44 ಮೀಟರ್ ಎಸೆಯುವ ಮೂಲಕ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.

4 / 6

5 / 6
ಇದೀಗ ಜಾವೆಲಿನ್ ವಿಭಾಗದಲ್ಲಿ ಭಾರತಕ್ಕೆ ಮೊತ್ತ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟ ಹೆಗ್ಗಳಿಕೆ ಹಾಗೂ ಭಾರತಕ್ಕಾಗಿ ಒಲಿಂಪಿಕ್ಸ್ ಇತಿಹಾಸದಲ್ಲಿ 2ನೇ ಬಾರಿ ಸ್ವರ್ಣ ಪದಕವನ್ನು ಗೆಲ್ಲಿಸಿಕೊಟ್ಟ ಕೀರ್ತಿ ನೀರಜ್ ಚೋಪ್ರಾಗೆ ಸಲ್ಲುತ್ತದೆ. ಇದಾಗ್ಯೂ ಭಾರತ ಹಾಕಿ ತಂಡವು 8 ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಅದೊಂದು ಟೀಮ್ ಪ್ರದರ್ಶನವಾಗಿರುವುದರಿಂದ ವೈಯುಕ್ತಿಕ ಪದಕ ಪಟ್ಟಿಯಲ್ಲಿ ಅದನ್ನು ಪರಿಗಣಿಸಲಾಗುವುದಿಲ್ಲ.

6 / 6

Follow us on

Most Read Stories

Click on your DTH Provider to Add TV9 Kannada