Kannada News Photo gallery up rooted old tamarind tree due to termites, weather rerooted successfully in kalmath premises in savanur in haveri district
ಸವಣೂರಿನ ಅಪರೂಪದ ತ್ರಿವಳಿ ಹುಣಸೆ ಮರಗಳು: ನೆಲಕ್ಕುರುಳಿದ ಸಾವಿರಾರು ವರ್ಷಗಳ ಮರಕ್ಕೆ ಮರು ಜೀವ ತುಂಬಿದ ಸ್ಥಳೀಯರು, ಜಿಲ್ಲಾಡಳಿತ
savanur tamarind tree: ಹಾವೇರಿಯ ಸವಣೂರು ಕಲ್ಮಠದ ಆವರಣದಲ್ಲಿ ಸಾವಿರಾರು ವರ್ಷಗಳ ಹಳೆಯ ಮೂರು ದೊಡ್ಡ ಹುಣಸೆ ಮರಗಳಿವೆ. ಜುಲೈ 7 ರಂದು ಒಂದು ಮರ ನೆಲಕ್ಕುರುಳಿತ್ತು. ಘೋರಕನಾಥ ತಪಸ್ವಿಗಳು ಆ ಮೂರು ಮರಗಳನ್ನ ನೆಟ್ಟಿದ್ದರು ಎಂಬ ಇತಿಹಾಸವಿದೆ.
1 / 10
ಯಾವುದೋ ಗತಕಾಲದಿಂದ (baobab) ಧರೆಯ ಮೇಲೆ ನೆಲೆ ನಿಂತಿದ್ದ ಕಲ್ಪ ವೃಕ್ಷವದು. ಭಕ್ತರ ಪಾಲಿನ ಆರಾಧ್ಯ ದೈವವಾಗಿತ್ತು ಆ ಮರ. ಇದ್ದಕ್ಕಿದ್ದಂತೆ ಕೆಲ ದಿನಗಳ ಹಿಂದೆ ಧರೆಗುರುಳಿದ್ದ ದೈವಿ ಸ್ವರೂಪಿ ಮರವನ್ನು (tamarind tree) ಮತ್ತೆ ನೆಡಲಾಗಿದೆ. ಅದು ಅಂತಿಂತಹ ವೃಕ್ಷ ಅಲ್ಲವೇ ಅಲ್ಲ. ಬೃಹತ್ ಕ್ರೈನ್ ತರಿಸಿದರೂ ಕೂಡಾ ಆ ಮರ ಎತ್ತೋಕೆ ಒದ್ದಾಡಬೇಕಾಯ್ತು. ಮರ ಪುನಃ ನೆಡುವ ಆ ಕಸರತ್ತು ಹೇಗಿತ್ತು ಗೊತ್ತಾ? ನೋಡೋಣ ಬನ್ನಿ.
2 / 10
ಹಾವೇರಿ ಜಿಲ್ಲೆ ಸವಣೂರು ನವಾಬರಾಳಿದ್ದ ನೆಲ. ಐತಿಹಾಸಿಕ ಪುಣ್ಯ ನೆಲ. ಸವಣೂರು (kalmath premises in savanur in haveri) ಅಂತ ಅಂದ್ರೆ ಮತ್ತೆ ನೆನಪಾಗೋದು ಅಪರೂಪದ ದೊಡ್ಡ ಹುಣಸೆ ಮರಗಳು. ಜುಲೈ 7 ರಂದು ಧರೆಗುರುಳಿದ್ದ ಐತಿಹಾಸಿಕ ಸವಣೂರಿನ ದೊಡ್ಡ ಹುಣಸೆಮರಗಳು
3 / 10
ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಕಲ್ಮಠದ ಆವರಣದಲ್ಲಿ ಸಾವಿರಾರು ವರ್ಷಗಳ ಹಳೆಯ ಮೂರು ದೊಡ್ಡ ಹುಣಸೆ ಮರಗಳಿವೆ. ಕಳೆದ ಜುಲೈ 7 ರಂದು ಮೂರು ಮರಗಳಲ್ಲಿ ಒಂದು ಮರ ನೆಲಕ್ಕುರುಳಿತ್ತು.
4 / 10
ಸಾವಿರಾರು ವರ್ಷಗಳ ಹಿಂದೆ ಘೋರಕನಾಥ ತಪಸ್ವಿಗಳು ಮೂರು ಮರಗಳನ್ನ ನೆಟ್ಟಿದ್ದರು ಎಂಬ ಇತಿಹಾಸ ಈ ಮರಕ್ಕಿದೆ.
5 / 10
18 ಮೀಟರ್ ಎತ್ತರ 12 ಮೀಟರ್ ಅಗಲವಿರೋ ಈ ಮರ ಅಪರೂಪದ ಸಸ್ಯ ಸಂಕುಲ. ಕಲ್ಮಠದ ಆವರಣದಲ್ಲಿರುವ ಈ ಮರಕ್ಕೆ ಸಾವಿರಾರು ಭಕ್ತರಿದ್ದಾರೆ. ಮರವನ್ನು ದೈವಿ ಸ್ವರೂಪವಾಗಿ ಕಾಣ್ತಾರೆ. ಆದರೆ ಇದ್ದಕ್ಕಿದ್ದ ಹಾಗೆ ಗೆದ್ದಲು ಹತ್ತಿ ಶಕ್ತಿ ಕಳೆದುಕೊಂಡಿದ್ದ ಮರ ಜಿಟಿ ಜಿಟಿ ಮಳೆಗೆ ಧರೆಗುರುಳಿತ್ತು. ಇದರಿಂದ ಸಹಜವಾಗೇ ಭಕ್ತರು ಬೇಸರಗೊಂಡಿದ್ರು.
6 / 10
ಕಲ್ಮಠದ ಚೆನ್ನಬಸವ ಮಹಾಸ್ವಾಮಿಗಳು ಕೂಡಾ ತೀವ್ರ ಬೇಸರಗೊಂಡಿದ್ರು. ಬಿದ್ದ ಮರವನ್ನೇ ಪುನಃ ನೆಡುವಂತೆ ಜಿಲ್ಲಾಡಳಿತಕ್ಕೂ ಸ್ವಾಮೀಜಿ ಮನವಿ ಮಾಡಿದ್ರು. ಹೀಗಾಗಿ ಕಳೆದೊಂದು ವಾರದಿಂದ ಮರವನ್ನ ಮತ್ತೆ ನೆಡುವ ಕಸರತ್ತು ನಡೆದೇ ಇತ್ತು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಸತತವಾಗಿ ಪರಿಶ್ರಮ ಹಾಕಿ ಮರವನ್ನ ಅದೇ ಸ್ಥಳದಲ್ಲಿ ನೆಟ್ಟಿದ್ದಾರೆ.
7 / 10
ಮರದ ಬುಡದಲ್ಲಿ ಗೆದ್ದಿಲು ಹಿಡಿದಿತ್ತು. ಹಾಗೂ ಬೇರುಗಳು ಸಂಪೂರ್ಣವಾಗಿ ಕೊಳೆತ ಪರಿಣಾಮ ಮರ ಬಿದ್ದಿತ್ತು. ಇದೆ ಕಾರಣಕ್ಕೆ ಮರದ ಬುಡದಲ್ಲಿ ಕೊಳೆತ ಭಾಗವನ್ನ ಶುಚಿ ಮಾಡಿ ರಾಸಾಯನಿಕಗಳನ್ನು ಸಿಂಪಡಣೆ ಮಾಡಿ ಶುಚಿ ಮಾಡಲಾಗಿತ್ತು. ಬಳಿಕ ಔಷಧಿಗಳನ್ನು ಸಿಂಪಡಿಸಿ ಮತ ಪುನಃ ಚಿಗುರಿ ಮರದ ಬೇರುಗಳು ಮತ್ತೆ ಬೆಳೆಯುವಂತೆ ಪೋಷಕಾಂಶಗಳನ್ನು ಸಿಂಪಡನೆ ಮಾಡಲಾಗಿತ್ತು. ಮರದ ಗಾತ್ರಕ್ಕನುಗುಣವಾಗಿ ಗುಣಿ ತೆಗೆದು ಮರ ನೆಡಲಾಯ್ತು.
8 / 10
ಮರದ ಟೊಂಗೆಗಳನ್ನ ಕತ್ತರಿಸಿ ಸಗಣಿಯನ್ನ ಸಿಂಪಡಣೆ ಮಾಡಲಾಗಿದೆ. ಇದೆಲ್ಲ ಆದ ಬಳಿಕ ಬೃಹತ್ ಗಾತ್ರದ ಕ್ರೇನ್ ಹಾಗೂ ಜೆಸಿಬಿಗಳನ್ನ ಬಳಸಿಕೊಂಡು ಮರವನ್ನ ಅದೆ ಸ್ಥಳದಲ್ಲಿ ನೆಡಲಾಯ್ತು ಎಂದು ಬಾಲಕೃಷ್ಣ, ಡಿಎಫ್ಓ ಮಾಹಿತಿ ನೀಡಿದ್ದಾರೆ.
9 / 10
ಕಳೆದ ವಾರದ ಬಿದ್ದಿದ್ದ ಸವಣೂರಿನ ದೊಡ್ಡ ಹುಣಸೆ ಮರವನ್ನ ಮತ್ತೆ ನೆಡಲಾಗಿದೆ. ಮರವನ್ನ ನೆಡುವಲ್ಲಿ ಹಗಲಿರುಳು ಶ್ರಮಿಸಿದ ಅರಣ್ಯ ಇಲಾಖೆ ಹಾಗೂ ಕೃಷಿ ವಿಜ್ಞಾನಿಗಳಿಗೆ ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಅಭಿನಂಧನೆ ಸಲ್ಲಿಸಿದ್ದಾರೆ
10 / 10
ಸಾವಿರಾರು ವರ್ಷಗಳ ಹಿಂದೆ ಘೋರಕನಾಥ ತಪಸ್ವಿಗಳು ಮೂರು ಮರಗಳನ್ನ ನೆಟ್ಟಿದ್ದರು ಎಂಬ ಇತಿಹಾಸ ಈ ಮರಕ್ಕಿದೆ.