
ಸಾಮಾನ್ಯವಾಗಿ ನಾವು ಖರೀದಿಸುವ ಹೆಚ್ಚಿನ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಎಕ್ಸ್‌ಪೈರಿ ಡೇಟ್ ಅನ್ನು ಬರೆದಿರುವುದಿಲ್ಲ. ಆದರೆ, ಇದಕ್ಕೂ ಮುಕ್ತಾಯದ ದಿನಾಂಕ ಎಂಬುದು ಇರುತ್ತದೆ. ನಾವು ಕೆಲವು ರೀತಿಯ ಭಾವನಾತ್ಮಕ ಬಾಂಧವ್ಯದ ಕಾರಣದಿಂದಾಗಿ ಮನೆಯ ಯಾವುದೋ ಮೂಲೆಯಲ್ಲಿ ಮೊಬೈಲ್, ಸ್ಪೀಕರ್ ಹೀಗೆ ಹಳೆಯ ಎಲೆಕ್ಟ್ರಾನಿಕ್ಸ್‌ಗಳನ್ನು ಇಟ್ಟುಕೊಳ್ಳುತ್ತೇವೆ. ಆದರೆ, ಈ ಹಳೆಯ ಎಲೆಕ್ಟ್ರಾನಿಕ್ ವಸ್ತುಗಳು ನಮ್ಮ ಜೀವಕ್ಕೆ ಅಪಾಯವನ್ನು ಉಂಟುಮಾಡುತ್ತವೆ ಎಂದರೆ ನಂಬುತ್ತೀರ?.

ಹೌದು, ಆ ವಸ್ತುಗಳನ್ನು ಇಟ್ಟ ಜಾಗದಲ್ಲಿ ಹಾಗೇ ಬಿಟ್ಟುಬಿಟ್ಟರೆ ದೊಡ್ಡ ಹಾನಿಯನ್ನು ಉಂಟುಮಾಡಬಹುದು. ಹಳೆಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಾಧ್ಯವಾದಷ್ಟು ನಿಮ್ಮಿಂದ ದೂರದಲ್ಲೇ ಇಡಬೇಕು. ಮುಖ್ಯವಾಗಿ ನೀವು ನಿಮ್ಮ ಮನೆಯಲ್ಲಿ ತಪ್ಪಿಯೂ ಕೆಳ ಸೂಚಿಸುವ ಅಪಾಯಕರಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡಲೇಬೇಡಿ.

ಡ್ರಾಯರ್ನಲ್ಲಿ ಇದೆಯೇ ಹಳೆಯ ಮೊಬೈಲ್?: ಸ್ಮಾರ್ಟ್‌ಫೋನ್‌ಗಳು ಮತ್ತು ಫೀಚರ್ ಫೋನ್‌ಗಳು ಸೇರಿದಂತೆ ಮೊಬೈಲ್‌ಗಳು ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಹೊಂದಿವೆ. ಈ ಬ್ಯಾಟರಿಗಳೇ ಹೆಚ್ಚು ಹಾನಿಯುಂಟು ಮಾಡುತ್ತದೆ. ಫೋನ್‌ಗಳ ಬ್ಯಾಟರಿಗಳು ಊದಿಕೊಂಡು ಬೆಂಕಿ ಹೊತ್ತಿಕೊಂಡ ಘಟನೆಗಳು ನಾವು ಅನೇಕ ಬಾರಿ ಕೇಳಿದ್ದೇವೆ. ಹೀಗೆ ನಿಮ್ಮ ಮನೆಯ ಡ್ರಾಯರ್ನಲ್ಲಿ ಹಳೆಯ ಫೋನ್ಗಳನ್ನು ಇಡುವುದು ಅಷ್ಟೊಂದು ಸೇಫ್ ಅಲ್ಲ.

ಹಳೆಯ ಬಲ್ಬ್‌ಗಳು ಮತ್ತು ಟ್ಯೂಬ್‌ಲೈಟ್‌ಗಳು: ಭಾರತೀಯ ಮನೆಗಳಲ್ಲಿ ಹಳೆಯ ಬಲ್ಬ್‌ಗಳು/ಟ್ಯೂಬ್ ಲೈಟ್‌ಗಳನ್ನು ಹೆಚ್ಚಾಗಿ ನೋಡಬಹುದು. ಅವುಗಳು ಟಂಗ್ಸ್ಟನ್ ಫಿಲಾಮೆಂಟ್ಸ್, ರಾಸಾಯನಿಕ ಮತ್ತು ಅನಿಲಗಳಂತಹ ಸಣ್ಣ ಭಾಗಗಳನ್ನು ಹೊಂದಿರುತ್ತವೆ. ಅವುಗಳು ಒಡೆದರೆ ದೊಡ್ಡ ಪ್ರಮಾಣದ ಗಾಯವಾಗುತ್ತದೆ. ಹೀಗಾಗಿ ಎಚ್ಚರದಿಂದ ಇರಿ.

ಹಳೆಯ ಚಾರ್ಜರ್‌ಗಳು: ಹಳೆಯ ಚಾರ್ಜರ್‌ಗಳು ಹೆಚ್ಚಿನ ಆಣ್ವಿಕ ಪಾಲಿಮರ್, ಗ್ಲಾಸ್ ಫೈಬರ್, ತಾಮ್ರದ ಹಾಳೆ ಸರ್ಕ್ಯೂಟ್ ಬೋರ್ಡ್‌ಗಳನ್ನು ಹೊಂದಿರುತ್ತವೆ. ಹಳೆಯ ಸರ್ಕ್ಯೂಟ್ ಬೋರ್ಡ್‌ಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸ್ಫೋಟವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಹಳೆಯ ವಿದ್ಯುತ್ ಕೇಬಲ್ಗಳು: ಹಳೆಯ ವಿದ್ಯುತ್ ಕೇಬಲ್ಗಳು ತಮ್ಮ ಶಕ್ತಿಯ ಗುಣಲಕ್ಷಣಗಳನ್ನು ಕಳೆದುಕೊಳುತ್ತಿದೆ. ಇದರಲ್ಲಿನ ತಂತಿಗಳನ್ನು ಪರಿಶೀಲಿಸದೆ ಬಿಟ್ಟರೆ ಬೆಂಕಿಗೆ ಕಾರಣವಾಗಬಹುದು. ಬಳಕೆಯಲ್ಲಿಲ್ಲದ ಹಳೆಯ ತಂತಿಗಳು ಸಹ ಜೀವಕ್ಕೆ ಅಪಾಯವನ್ನುಂಟುಮಾಡುತ್ತವೆ.

ಹಳೆಯ ಹಾರ್ಡ್ ಡ್ರೈವ್: ಹಳೆಯ ಹಾರ್ಡ್ ಡ್ರೈವ್‌ಗಳು ಮೇಲ್ನೋಟಕ್ಕೆ ಸುರಕ್ಷಿತವಾಗಿ ಕಾಣಿಸಬಹುದು ಆದರೆ ಇದು ಡ್ರಾಯರ್‌ಗಳ ಒಳಗೆ ಇದ್ದರೆ ಅಪಾಯ ಹೆಚ್ಚು. ಹಾರ್ಡ್ ಡ್ರೈವ್‌ಗಳು ಅಲ್ಯೂಮಿನಿಯಂ, ಪಾಲಿಮರ್‌ಗಳು, ಪ್ಲಾಸ್ಟಿಕ್ ಮತ್ತು ಮ್ಯಾಗ್ನೆಟ್‌ಗಳಂತಹ ವಸ್ತುಗಳನ್ನು ಒಳಗೊಂಡಿರುತ್ತವೆ. ಇವು ಸಮಯ ಕಳೆದಂತೆ ಹೆಚ್ಚಿನ ಹಾನಿಯುಂಟು ಮಾಡುತ್ತದೆ.

ಹಳೆಯ ರೂಟರ್‌ಗಳು: ಇಂದು ಚಾಲ್ತಿಯಲ್ಲಿರುವ ಸೈಬರ್ ಪ್ರಕರಣಗಳಿಗೆ ಮುಖ್ಯ ಕಾರಣ ಹಳೆಯ ರೂಟರ್‌ಗಳು. ಹ್ಯಾಕಿಂಗ್ ಸಂಭವಿಸುತ್ತಿರುವುದೇ ಈರೀತಿಯ ಸಾಧನಗಳಿಂದ. ಇದಲ್ಲದೆ, ಎಲೆಕ್ಟ್ರಾನಿಕ್ಸ್ ಶಾರ್ಟ್ ಸರ್ಕ್ಯೂಟ್ಗೆ ಕೂಡ ಇದು ಕಾರಣವಾಗಬಹುದು.

ಹಳೆಯ ಇಯರ್‌ಫೋನ್‌ಗಳು: ಹೌದು, ಹಳೆಯ ಇಯರ್‌ಫೋನ್‌ಗಳು ಕೂಡ ಮನೆಯಲ್ಲಿ ಇಟ್ಟುಕೊಳ್ಳುವುದು ಅಪಾಯಕಾರಿ. ಇಯರ್‌ಫೋನ್‌ಗಳು ಮತ್ತು ಸ್ಪೀಕರ್‌ಗಳಲ್ಲಿ ಬಹಳಷ್ಟು ವಿಷಕಾರಿ ವಸ್ತುಗಳುರುತ್ತದೆ. ಉದಾಹರಣೆಗೆ, ಆಯಸ್ಕಾಂತಗಳು (ಲೋಹ), ತಾಮ್ರದ ಸುರುಳಿಗಳು, ಪ್ಲಾಸ್ಟಿಕ್ ಮತ್ತು ಬ್ಯಾಟರಿಗಳ ಸಮಯ ಕಳೆದಂತೆ ಅಪಾಯ ಹೆಚ್ಚು. ಬ್ಯಾಟರಿಯಲ್ಲಿನ ಲೀಕೆಜ್ ನಿಮ್ಮ ಡ್ರಾಯರ್‌ನಲ್ಲಿರುವ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಹ ಹಾಳುಮಾಡುತ್ತದೆ.