‘ಸಿದ್ದರಾಮಯ್ಯ ಕಾನೂನು ಪದವೀಧರರು, ಕರಿ ಕೋಟು ಧರಿಸಿ ಅವರೇ ನಳಿನಿ ಪರ ವಕಾಲತ್ತು ವಹಿಸಲಿ’

ಮೈಸೂರು: ಫ್ರೀ ಕಾಶ್ಮೀರ ಫಲಕ ಪ್ರದರ್ಶನ ಮಾಡಿದ್ದ ನಳಿನಿ ಪರ ಬ್ಯಾಟಿಂಗ್ ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮೈಸೂರಿನ ಹಿರಿಯ ನ್ಯಾಯವಾದಿ ಪಿ.ಜೆ.ರಾಘವೇಂದ್ರ ಬಹಿರಂಗ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯ ಕಾನೂನು ಪದವೀಧರರು ಅವರೇ ಆಪಾದಿತೆ ನಳಿನಿ ಪರ ವಾದ ಮಂಡಿಸಲಿ ಎಂದು ಬಹಿರಂಗ ಆಹ್ವಾನ ಮಾಡಿದ್ದಾರೆ.

ಮೈಸೂರು ವಿವಿಯಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಫ್ರೀ ಕಾಶ್ಮೀರ ಫಲಕ ಪ್ರದರ್ಶನ ಮಾಡಿದ್ದ ನಳಿನಿ ನಿಲುವನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದರು. ಫಲಕ ಹಿಡಿದ್ರೆ ದೇಶ ದ್ರೋಹವಲ್ಲ ಎಂದಿದ್ದರು. ಹೀಗಾಗಿ ಪಿ.ಜೆ.ರಾಘವೇಂದ್ರ ಸಿದ್ದರಾಮಯ್ಯಗೆ ಆಹ್ವಾನ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಸಿದ್ದರಾಮಯ್ಯನವರ ಗಮನಕ್ಕೆ ಎಂದು ಬರೆದು ಸಿದ್ದರಾಮಯ್ಯ ಕಾನೂನು ಪದವೀಧರರು. ವಕೀಲರಾಗಿದ್ದವರು ಈಗಲೂ ವಕೀಲರಾಗಿ ಕಾರ್ಯ ನಿರ್ವಹಿಸಬಲ್ಲರು. ಅವರ ಹೇಳಿಕೆಯನ್ನು ಮಾಧ್ಯಮದ ಮುಂದೆ ಹೇಳುವ ಬದಲು ಅವರೇ ಕರಿಕೋಟು ಧರಿಸಿ ಆಪಾದಿತೆ ನಳಿನ ಪರ ವಕಾಲತ್ತು ವಹಿಸಲಿ. ಆಕೆಯ ವಿರುದ್ದ ಪ್ರಕರಣ ರದ್ದುಗೊಳಿಸುವಂತೆ ವಾದ ಮಂಡಿಸಲಿ. ಪ್ರಕರಣ ದಾಖಲಿಸಿದ ಪೊಲೀಸರು ರಾಜ್ಯ ಸರ್ಕಾರಕ್ಕೆ ದಂಡ ವಿಧಿಸಲಿ. ಆ ದಂಡದ ಮೊತ್ತವನ್ನು ಪರಿಹಾರ ರೂಪದಲ್ಲಿ ಆಪಾದಿತೆ ನಳಿನಿಗೆ ನೀಡಿ, ಸಂವಿಧಾನಬದ್ದವಾಗಿ ಹೋರಾಟ ನಡೆಸಿ ಎಂದು ಮೈಸೂರಿನ ಹಿರಿಯ ನ್ಯಾಯವಾದಿ ಪಿ ಜೆ ರಾಘವೇಂದ್ರ ಸಿದ್ದರಾಮಯ್ಯಗೆ ಬಹಿರಂಗ ಆಹ್ವಾನ ನಿಡಿದ್ದಾರೆ.

ನಳಿನಿ ಪರ 150ಕ್ಕೂ ಹೆಚ್ಚು ವಕೀಲರ ವಕಾಲತ್ತು:
ನಳಿನಿ ಹಾಕಿದ್ದ ಮುಖ್ಯ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲದಲ್ಲಿ ಅರ್ಜಿ ವಿಚಾರಣೆಯನ್ನು ಇಂದು ಮಧ್ಯಾಹ್ನ 3 ಕ್ಕೆ ಮುಂದೂಡಿದ್ದು. ನಳಿನಿ ಪರ ವಕಾಲತ್ತು ವಹಿಸಲು ಬೆಂಗಳೂರು ಮೂಲದ 150ಕ್ಕೂ ಹೆಚ್ಚು ವಕೀಲರು ಆಗಮಿಸಿದ್ದಾರೆ. ಸದ್ಯ ಈಗ ನಳಿನಿ ಮಧ್ಯಂತರ ಜಾಮೀನು ಪಡೆದು ಹೊರಗಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!