ವೇಸ್ಟ್ ಬಾಟಲಿಗಳಲ್ಲಿ ಅರಳಿದ ಕೈತೋಟ: ದಂಪತಿ ಕಲಾತ್ಮಕ ಟಚ್​ಗೆ ಜನ ಫಿದಾ!

ಉಡುಪಿ: ಪರಿಸರದ ಹಿತದೃಷ್ಟಿಯಿಂದ ಪ್ಲಾಸ್ಟಿಕ್ ಬಳಸಬಾರದು ನಿಜ. ಆದ್ರೆ ಈಗಾಗ್ಲೇ ಬಳಕೆಯಾಗಿ ಬಿಟ್ಟ ತ್ಯಾಜ್ಯವನ್ನ ಮಾಯಾ ಮಾಡೋಕಾಗಲ್ಲ. ಹೀಗಾಗಿ ಕಸ ಅಂತಾ ಎಸೆಯೋ ಬದ್ಲು ಪ್ಲಾಸ್ಟಿಕ್​ಗೆ ಇಲ್ಲೊಂದು ದಂಪತಿ ಕಲಾತ್ಮಕ ಟಚ್ ನೀಡಿದ್ದಾರೆ. ಅವ್ರ ಕ್ರಿಯೇಟಿವಿಟಿ ನೋಡಿದ್ರೆ ನೀವು ಕೂಡ ಫಿದಾ ಆಗ್ತೀರಿ.

ಅದೇನ್ ಅಂದ.. ಅದೇನ್ ಚೆಂದ.. ಬಳುಕೋ ಬಳ್ಳಿಯೇನು.. ಕಣ್ಣು ಕುಕ್ಕೋ ಸೌಂದರ್ಯವೇನು.. ಎತ್ತ ನೋಡಿದ್ರೂ ಹಚ್ಚ ಹಸಿರೇ.. ಮನಸ್ಸಿಗೆ ಖುಷಿ ಕೊಡೋ ಹೂಗಳೇ.. ಅಬ್ಬಬ್ಬಾ.. ನೋಡೋಕೆ ಎರಡು ಕಣ್ಣು ಸಾಲಲ್ಲ.. ಖುಷಿಗಂತೂ ಪಾರವೇ ಇಲ್ಲ.

ಮನೆಯಂಗಳಲ್ಲಿ ಅರಳಿದ ಕೈತೋಟ:
ಅಂದ್ಹಾಗೇ, ಉಡುಪಿ ಜಿಲ್ಲೆ ಕಿದಯೂರಿನ ಯತೀಶ್ ಅನ್ನೋರು ಮನೆಯಂಗಳಲ್ಲಿ ಅರಳಿರೋ ಕೈತೋಟದ ಸೊಬಗು ಇದು. ಪ್ಲಾಸ್ಟಿಕ್​​ನಿಂದ ಪರಿಸರಕ್ಕೆ ಹಾನಿಯಾಗೋದನ್ನ ತಡೀಬೇಕು ಅಂತಾ ಇಷ್ಟಪಟ್ಟು ಮಾಡಿರೋ ಕೈಚಳಕ ಇದು. ವೇಸ್ಟ್ ಬಾಟಲಿಗಳನ್ನ ಸಂಗ್ರಹಿಸಿ ಕೈತೋಟ ಮಾಡಿ ಮನೆಯ ಸೌಂದರ್ಯವನ್ನ ಹೆಚ್ಚಿಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಬಾಟಲಿಗಳಲ್ಲಿ ವಿವಿಧ ಗಿಡಗಳನ್ನ ನೆಟ್ಟು ಅದಕ್ಕೆ ‘ನೆರಳು’ ಅಂತಾ ಹೆಸರಿಟ್ಟಿದ್ದಾರೆ.

ಇನ್ನು ಯತೀಶ್ ಉಡುಪಿಯ ಡಿಸಿ ಕಚೇರಿಯಲ್ಲಿ ಕೆಲ್ಸ ಮಾಡ್ತಿದ್ರೆ, ಅವ್ರ ಪತ್ನಿ ಹರ್ಷಿತಾ ಶಿಕ್ಷಕಿಯಾಗಿದ್ದಾರೆ. ಪ್ರತಿನಿತ್ಯ ಕೆಲಸದಿಂದ ಬಂದ ಬಳಿಕ ಕೈತೋಟಕ್ಕಾಗಿ ಸಮಯ ಮೀಸಲಿಡ್ತಾರಂತೆ. ಅದ್ರಲ್ಲೂ, ಹರ್ಷಿತಾ ಮಕ್ಕಳಿಗೆ ಪಾಠ ಮಾಡೋ ನಾವು ಇತರರಿಗೆ ಮಾದರಿಯಾಗಿರಬೇಕು. ಹೀಗಾಗಿಯೇ, ವೇಸ್ಟ್ ಬಾಟಲಿಗಳನ್ನ ಮರುಬಳಕೆ ಮಾಡ್ತಿದ್ದೀವಿ ಅಂತಿದ್ದಾರೆ.

ಒಟ್ನಲ್ಲಿ ಪ್ಲಾಸ್ಟಿಕ್ ಮರುಬಳಕೆ ಹಾಗೂ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು ಮೂಡಿಸಲು ವಿಭಿನ್ನವಾಗಿ ಮಾಡಿರೋ ಇವ್ರ ಕೆಲ್ಸಕ್ಕೆ ಎಲ್ರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಟಲಿಗಳಲ್ಲಿ ಅರಳಿರೋ ತೋಟವನ್ನ ನೋಡಿ ದಿಲ್​ಖುಷ್ ಆಗ್ತಿದ್ದಾರೆ.


Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!