ಕೆರೆಗಳ ಹರಿಕಾರ ಕನ್ನಡಿಗ ಕಾಮೇಗೌಡರ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ

ಮಂಡ್ಯ: ಕೆರೆಗಳ ಹರಿಕಾರ ಕನ್ನಡಿಗ ಕಾಮೇಗೌಡರ ಬಗ್ಗೆ ಮನ್​ ಕಿ ಬಾತ್ ಕಾರ್ಯಕ್ರಮದಲ್ಲಿ ಕಾಮೇಗೌಡರ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕಾಮೇಗೌಡ ಅವರು ಇದುವರೆಗೂ 16 ಕೆರೆ ನಿರ್ಮಿಸಿದ್ದಾರೆ. ಈ ಹಿಂದೆ ಅವರ ಸಾಧನೆಯನ್ನ ಗುರುತಿಸಿದ್ದ ಟಿವಿ9 ಕಾಮೇಗೌಡರಿಗೆ ಟಿವಿ9 ಕರುನಾಡ ನಕ್ಷತ್ರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಪ್ರಾಣ ಇರೋವರೆಗೂ ಕಾಯಕ ಮುಂದುವರಿಸುತ್ತೇನೆ
ಮೋದಿ ಸಾಹೇಬರು ನನ್ನಂಥ ಬಡವನ ಬಗ್ಗೆ ಮಾತನಾಡಿರುವುದು ಸಂತಸ ತಂದಿದೆ. ನಾನು ಭಾರತದಲ್ಲಿ ಹುಟ್ಟಿರುವುದಕ್ಕೂ ಸಾರ್ಥಕವಾಯಿತು. ಪ್ರಾಣ ಇರೋವರೆಗೂ ನನ್ನ ಕಾಯಕ ಮುಂದುವರಿಸುತ್ತೇನೆ ಎಂದು ದಾಸನದೊಡ್ಡಿ ಗ್ರಾಮದಲ್ಲಿ ಕಾಮೇಗೌಡ ಹರ್ಷ ವ್ಯಕ್ತಪಡಿಸಿದ್ದಾರೆ.

ಮೋದಿ ಸಾಹೇಬರು ಭಾರತವನ್ನೇ ಮನೆ, ಜನರನ್ನ ತಮ್ಮ ಕುಟುಂಬ ಎಂದು ಭಾವಿಸಿದ್ದಾರೆ. ಪ್ರಧಾನಿ ಅವರು ಜನಾಗಂವನ್ನು ಹಂಚಿ ಹಾಕುವ ಕೆಲಸ ಮಾಡುತ್ತಿಲ್ಲ. ಬೇರೆಯವರು ಪ್ರಧಾನಿ ಆಗಿದ್ರೆ ಈ ರೀತಿಯ ಕೆಲಸಗಳು ಆಗುತ್ತಿರಲಿಲ್ಲ. ಮೋದಿ ಅವರು ದೇಶವನ್ನು ಹೇಗೆ ರಕ್ಷಣೆ ಮಾಡಬೇಕು ಎಂಬುದರ ಬಗ್ಗೆ ಯಾವಾಗಲೂ ಯೋಚನೆ ಮಾಡ್ತಾರೆ.

ನನ್ನಂತ ಬಡವನ ಮೇಲೆ ಅವರಿಗೆ ಇಷ್ಟು ಕರುಣೆ ಇದೆ. ಇನ್ನು ದೇಶದ ಮೇಲೆ ಎಷ್ಟು ಕರುಣೆ ಇದೆ ಎನ್ನೋದನ್ನು ನೋಡಬೇಕು. ಮೋದಿ ಅವರು ಸೈನ್ಯಕ್ಕೆ ತೊಂದರೆ ಆದಾಗ ಸುಮ್ಮನೆ ಕೂರಲಿಲ್ಲ, ಹೋರಾಡೋಣಾ ಎಂದು ಹೇಳಿದವರು. ಮೋದಿ ಅವರಿಗೆ ದಶರಥ ಮಹಾರಾಜರಷ್ಟೇ ಧೈರ್ಯ ಸಾಹಸ ಇದೆ ಎಂದರು.

Related Posts :

Category:

error: Content is protected !!

This website uses cookies to ensure you get the best experience on our website. Learn more