ದೇಶದ ಯುವ ಪ್ರತಿಭೆಗಳ ಜೊತೆ ಪ್ರಧಾನಿ ಮೋದಿ ಸಂವಾದ, ಲೈಫ್‌ ಸ್ಕಿಲ್ಸ್‌ಗೆ ಒತ್ತು ನೀಡಿದ ಪ್ರಧಾನಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ವಿವಿಧ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸುತ್ತಿದ್ದಾರೆ.

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಗ್ರ್ಯಾಂಡ್ ಫಿನಾಲೆಯ ಅಂಗವಾಗಿ ನಡೆಯತ್ತಿರುವ ಈ ಸಂವಾದಲ್ಲಿ ಮೋದಿ ವಿದ್ಯಾರ್ಥಿಗಳೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ಯುವಕರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ತಂತ್ರಜ್ಞಾನವನ್ನ ಯುವಕರು ಸಮರ್ಪಕವಾಗಿ ಬಳಸುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ತಂತ್ರಜ್ಞಾನವನ್ನ ಬಳಸಬೇಕು. ದೇಶದ ಹಳ್ಳಿ ಹಳ್ಳಿಗಳಲ್ಲೂ ತಂತ್ರಜ್ಞಾನ ಬಳಕೆಯಾಗಬೇಕು ಎಂದು ಮೋದಿ ಹೇಳಿದ್ದಾರೆ.

ಆರೋಗ್ಯ ಕ್ಷೇತ್ರದ ಬಗ್ಗೆ ಮಾತನಾಡಿದ ಮೋದಿ ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿದೆ. ದೇಶದ ಪ್ರತಿ ಹಳ್ಳಿ ಹಳ್ಳಿಗೂ ಆರೋಗ್ಯ ಸೇವೆ ಲಭ್ಯವಾಗಬೇಕು. ಇದಕ್ಕಾಗಿ ತಂತ್ರಜ್ಞಾನವನ್ನ ಎಲ್ಲರೂ ಬಳಸುವಂತಾಗಬೇಕು ಎಂದು ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.

ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ 2020
ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ 2020ಯಲ್ಲಿ ದೇಶದ ವಿವಿಧ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಧಾನಿ ಮೋದಿ ನಡೆಸಿದ ಸಂವಾದ ಕುತೂಹಲಕಾರಿಯಾಗಿತ್ತು. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಎಐಸಿಟಿಯು, 4ಸಿ ಕಂಪನಿ ಜಂಟಿಯಾಗಿ ನಡೆಸಲಿರುವ ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ 2020ಆಗಷ್ಟ್‌ 1ರಿಂದ 3ರವರೆಗೆ ನಡೆಲಿದೆ. ಇದರಲ್ಲಿ ತಮಿಳುನಾಡು, ತೆಲಂಗಾಣ, ರಾಜಸ್ಥಾನ, ಉತ್ತರಖಂಡ್‌ ಮತ್ತು ಚಂಡಿಗಢ್‌ನಿಂದ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದು ಇವರೆಲ್ಲಾ ಪ್ರಧಾನಿ ಜೊತೆ ಸಂವಾದ ನಡೆಸಿದರು.

ಮರುಬಳಕೆ ಸ್ಯಾನಿಟರಿ ಪ್ಯಾಡ್‌ ಅಭಿವೃದ್ಧಿ
ಸಂವಾದಲ್ಲಿ ಮತಾನಾಡಿದ ವಿದ್ಯಾರ್ಥಿನಿಯೊಬ್ಬಳು ತಮ್ಮ ತಂಡ ಮಹಿಳೆಯರಿಗೆ ಸಹಾಯಕವಾಗಲು ಮರು ಬಳಕೆ ಮಾಡಬಹುದಾದ ಸ್ಯಾನಿಟರಿ ನ್ಯಾಪಕಿನ್‌ ಅನ್ನು ಅಭಿವೃದ್ಧಿ ಪಡಿಸುತ್ತಿರೋದನ್ನು ಪ್ರದಾನಿಗೆ ವಿವರಿಸಿದಳುತಮಿಳು ನಾಡಿನ ವಿದ್ಯಾರ್ಥಿನಿಯೊಬ್ಬಳು ತಮ್ಮ ತಂಡ ರೈತರಿಗೆ ಮತ್ತು ಗ್ರಾಮೀಣ ಭಾಗದ ಜನರಿಗೆ ನೆರವಾಗಲು ಹಾಗೂ ಮಳೆಗಾಲದಲ್ಲಿ ಸಂಭವಿಸಬಹುದಾದ ಕೆರೆ ಕೋಡಿಗಳು ಒಡೆದು ಆಗುವ ದುರುಂತಗಳನ್ನ ತಪ್ಪಿಸುವ ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿರುವುದನ್ನು ವಿವರಿಸಿದಳು.

ರಿಯಲ್‌ ಟೈಮ್‌ ಟ್ರ್ಯಾಕಿಂಗ್‌ ಅಭಿವೃದ್ಧಿ
ಮತ್ತೊಬ್ಬ ಕಾಲೆಜ್‌ ವಿದ್ಯಾರ್ಥಿ ಮಾತನಾಡಿ ತಮ್ಮ ತಂಡ ರಿಯಲ್‌ ಟೈಮ್‌ ಫೇಸ್‌ ರೆಕಗ್ನಿಶನ್‌ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿದ್ದು ಇದು ಭವಿಷ್ಯದಲ್ಲಿ ಭಾರೀಯ ಸಹಾಯಕವಾಗಲಿದೆ ಎಂದು ಮೋದಿಗೆ ವಿವರಿಸಿದರುಮಧ್ಯ ಪ್ರವೇಶಿಸಿದ ಮೋದಿ, ಶಾಲೆ ಕಾಲೇಜುಗಳಿಗೆ ಸಹಾಯಕವಾಗಲಿ ರಿಯಲ್‌ ಟೈಮ್‌ ಟ್ರ್ಯಾಕಿಂಗ್‌ ಸಿಸ್ಟಮ್ಸ್‌ ಕಂಡು ಹಿಡಿಯುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಅಷ್ಟೇ ಅಲ್ಲ ಐಪಿಎಸ್‌ ತರಭೇತಿ ಸಂಸ್ಥೆಗೆ ರಿಯಲ್‌ ಟೈಮ್‌ ಟ್ರ್ಯಾಕ್‌ ತಂತ್ರಜ್ಞಾನ ವಿನಿಮಯಕ್ಕೆ ಸಲಹೆ ನೀಡಿದರು.

ನೂತನ ಶಿಕ್ಷಣ ನೀತಿ ಐದು ವರ್ಷಗಳ ಪರಿಶ್ರಮ
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ರೂಪಿಸಿರುವ ನೂತನ ಶಿಕ್ಷಣ ನೀತಿಯನ್ನು ವಿವರಿಸಿದ ಮೋದಿ, ಅದರ ಹಿಂದೆ ಅಡಗಿದ ಶ್ರಮವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಹೊಸ ಶಿಕ್ಷಣ ನೀತಿ ರೂಪಿಸಲು ಐದು ವರ್ಷಗಳ ಸಮಯ ಹಿಡಿಯಿತು. ಇದಕ್ಕಾಗಿ ಪಟ್ಟ ಶ್ರಮ ಅಷ್ಟಿಷ್ಟಲ್ಲ ಎಂದು ವಿವರಿಸಿದರು. ಅಷ್ಟೇ ಅಲ್ಲ 21ನೇ ಶತಮಾನದಲ್ಲಿ ಭಾರತದ ಶಿಕ್ಷಣ ಲೈಫ್‌ ಸ್ಕಿಲ್ಸ್‌ ನತ್ತ ಪೋಕಸ್‌ ಮಾಡಬೇಕು ಎಂದು ಸಲಹೆ ಮಾಡಿದರು.

 

Related Tags:

Related Posts :

Category:

error: Content is protected !!