ಕಡಲತಡಿಯ ಯಕ್ಷಗಾನದಲ್ಲಿ ಪ್ರಧಾನಿ ಮೋದಿಯ ಜೀವನ ಚರಿತ್ರೆ!

ಮಂಗಳೂರು: ಗಂಡುಕಲೆ ಯಕ್ಷಗಾನಕ್ಕೆ ತನ್ನದೇ ಆದ ಗತ್ತಿದೆ, ಗೈರತ್ತಿದೆ, ಇತಿಹಾಸವಿದೆ. ಯಕ್ಷಗಾನದಲ್ಲಿ ರಾಮಾಯಣ, ಮಹಾಭಾರತದಂತಹ ಪುರಾಣಗಳ ತುಣುಕುಗಳನ್ನ ಪ್ರದರ್ಶಿಸಲಾಗುತ್ತೆ. ಆದ್ರೆ ಕಡಲತಡಿ ಮಂಗಳೂರಿನಲ್ಲಿ ನಡೆದ ಯಕ್ಷಗಾನವೊಂದು ಇಡೀ ಯಕ್ಷಗಾನದ ಇತಿಹಾಸವನ್ನೇ ಬದಲಿಸಿದೆ. ಮೊದಲ ಬಾರಿ ಒಬ್ಬ ಮನುಷ್ಯನ ಜೀವನ ಚರಿತ್ರೆಯನ್ನ ಕಥೆಯನ್ನಾಗಿಸಿ ಯಕ್ಷಗಾನ ನಡೆಸಲಾಗಿದೆ. ಅಷ್ಟಕ್ಕೂ ಈ ಯಕ್ಷಗಾನದ ಕಥಾವಸ್ತು ಬೇರಾರು ಅಲ್ಲ. ಪ್ರಧಾನಿ ನರೇಂದ್ರ ಮೋದಿ.

ನರೇಂದ್ರ ವಿಜಯ ಹೆಸರಿನ ಯಕ್ಷಗಾನ: 
ಅಂದ್ಹಾಗೆ ಇದು ಮಂಗಳೂರಿನ ಟಿ.ವಿ.ರಮಣ ಪೈ ಹಾಲ್​ನಲ್ಲಿ ಪಂಚಾಯತ್ ಕನ್ನಡ ಆಯೋಜಿಸಿದ್ದ ಯಕ್ಷಗಾನ. ‘ನರೇಂದ್ರ ವಿಜಯ’ ಅನ್ನೋ ಹೆಸರಿನ ಈ ಯಕ್ಷಗಾನವನ್ನ ತೀರ್ಥಹಳ್ಳಿಯ ಗಾಯಿತ್ರಿ ಯಕ್ಷಗಾನ ಮಂಡಳಿ ನಡೆಸಿಕೊಡ್ತು. ಯಕ್ಷಗಾನದುದ್ದಕ್ಕೂ ಪ್ರಧಾನಿ ಮೋದಿಯ ಜೀವನ ಚರಿತ್ರೆ ವಿವರಿಸಲಾಯ್ತು. ಜೈಲಿನಲ್ಲಿದ್ದ ಅಮಿತ್ ಶಾರನ್ನ ಬಿಡಿಸುವ ಮೂಲಕ ಆರಂಭವಾಗಿ, ಮೋದಿ ಗುಜರಾತ್ ಸಿಎಂ ಆಗಿದ್ದು, ನಂತ್ರ ಪ್ರಧಾನಿ ಆಗಿದ್ದನ್ನ ಯಕ್ಷಗಾನ ಮೂಲಕ ತೋರಿಸಲಾಯ್ತು. ಮೋದಿ ತಾಯಿಯ ಕನಸಿನಲ್ಲಿ ಬರುವ ಸಾಕ್ಷಾತ್ ಪರಮೇಶ್ವರ ನರೇಂದ್ರ ಎಂಬ ಮಗ ಇಡೀ ಭರತ ಖಂಡವನ್ನೇ ಬೆಳಗುತ್ತಾನೆ ಅಂತ ಹೇಳುವುದು ವಿಶೇಷವಾಗಿತ್ತು.

ಪ್ರಧಾನಿ ಮೋದಿಯ ಜೀವನ ಚರಿತ್ರೆ:
ಇನ್ನು ತ್ರಿವಳಿ ತಲಾಖ್​ಗೆ ಗುರಿಯಾದ ಮಹಿಳೆಯೊಬ್ಬಳು ಮೋದಿ ಬಳಿ ಬಂದು ಅವಲತ್ತುಕೊಳ್ಳೋದು, ಆಗ ಮೋದಿ ತ್ರಿವಳಿ ತಲಾಕ್ ರದ್ದುಗೊಳಿಸೋದನ್ನ ಪ್ರದರ್ಶಿಸಲಾಯ್ತು. ಇನ್ನು ಪುಲ್ವಾಮಾ ದಾಳಿ, ಚಂದ್ರಯಾನ, ಆರ್ಟಿಕಲ್ 370 ರದ್ದು, ಪೌರತ್ವ ತಿದ್ದುಪಡಿ ಕಾಯ್ದೆ ರದ್ದು ಮುಂತಾದವುಗಳನ್ನ ಯಕ್ಷಗಾನ ಮೂಲಕ ತೋರಿಸಲಾಯ್ತು. ಕೇದಾರನಾಥದಲ್ಲಿ ಮೋದಿ ಧ್ಯಾನಕ್ಕೆ ಕುಳಿತ ಪ್ರಸಂಗ ಎಲ್ಲರ ಗಮನ ಸೆಳೀತು. ಒಟ್ನಲ್ಲಿ, ಮೊದಲ ಬಾರಿ ಮನುಷ್ಯನೊಬ್ಬನ ಅದ್ರಲ್ಲೂ ಪ್ರಧಾನಿ ಮೋದಿಯ ಜೀವನ ಚರಿತ್ರೆಯನ್ನ ಕಥೆಯನ್ನಾಗಿಸಿ ಯಕ್ಷಗಾನ ಪ್ರದರ್ಶಿಸಿದ್ದು ವಿಶೇಷವಾಗಿತ್ತು.Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!