ಮಗ ಶಿಲಾನ್ಯಾಸ ಮಾಡೋದನ್ನು ಟಿವಿಯಲ್ಲಿಯೇ ನೋಡಿ ಹೆಮ್ಮೆ ಪಟ್ಟ ಮೋದಿ ತಾಯಿ

ಗುಜರಾತ್‌: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಇವತ್ತು ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸುತ್ತಿದ್ರೆ, ಗುಜರಾತ್‌ನಲ್ಲಿ ಅವರ ತಾಯಿ ಹೀರಾಬಾ ಮನೆಯಲ್ಲಿಯೇ ಕುಳಿತು ಟಿವಿಯಲ್ಲಿ ಮಗನ ಕಾರ್ಯಕ್ರಮವನ್ನು ನೋಡಿ ಕಣ್ತುಂಬಿಕೊಂಡರು.

ಹೌದು, ವಿಶ್ವಾದ್ಯಂತ ರಾಮ ಭಕ್ತರು ಈ ಘಳಿಗೆಗಾಗಿ ನೋಡುತ್ತಿದ್ದ ಐತಿಹಾಸಿಕ ಕ್ಷಣವದು. ಕೋಟ್ಯಂತರ ಜನರು ಟಿವಿಯಲ್ಲಿ ಶಿಲಾನ್ಯಾಸ ಕಾರ್ಯಕ್ರಮನ್ನು ನೋಡಿ ಸಂತಸ ಪಟ್ಟರು. ಹಾಗೇನೆ ಮೋದಿಯವರ ತಾಯಿ ಹೀರಾಬಾ ಕೂಡಾ ಮಗ ಶ್ರೀರಾಮಚಂದ್ರನ ಮಂದಿರ ಕಟ್ಟಲು ಶಿಲಾನ್ಯಾಸ ನೆರವೇರಿಸುತ್ತಿದ್ದನ್ನು ಟಿವಿಯಲ್ಲಿ ನೋಡಿ ಹೆಮ್ಮೆಪಟ್ಟರು. ಅಷ್ಟೇ ಅಲ್ಲ ಶ್ರೀರಾಮಚಂದ್ರನಿಗೆ ಕುಳಿತಲ್ಲಿಯೇ ಕೈಮುಗಿದು ನಮಸ್ಕರಿಸಿದ್ದಾರೆ.

ಕೋಟ್ಯಂತರ ತಾಯಿಂದರೇ ಈ ಕಾರ್ಯಕ್ರಮ ನೋಡಿ ಪುಣಿತರಾಗಿದ್ದಾರೆ. ಹಾಗೇ ಹೆಮ್ಮೆ ಕೂಡಾ ಪಟ್ಟಿದ್ದಾರೆ. ಅಂಥಾದ್ರಲ್ಲಿ ಸ್ವತಃ ಮಗನೇ ಇಂಥ ಅಭೂತಪೂರ್ವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಮಾತ್ರವಲ್ಲ, ಕಾರಣಿಭೂತ ಕೂಡಾ. ಹೀಗಿರುವಾಗ ಆ ತಾಯಿ ಹೀರಾಬಾ ಹೆಮ್ಮೆ ಪಟ್ಟಿದ್ದರಲ್ಲಿ ಆಶ್ಚರ್ಯವೇನಿಲ್ಲ ಅಲ್ಲವೇ.

Related Tags:

Related Posts :

Category: