74ನೇ ಸ್ವಾತಂತ್ರ್ಯ ದಿನೋತ್ಸವ: ನಾಳೆ ಪ್ರಧಾನಿ ಮೋದಿ ಕಾರ್ಯಕ್ರಮ ಹೀಗಿದೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಾಳೆ ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನಾಚರಣೆಯಂಗವಾಗಿ ಕೆಂಪುಕೋಟೆಯಿಂದ ದೇಶವನ್ನುದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನಿ ಮೋದಿಯ ನಾಳಿನ ಕಾರ್ಯಕ್ರಮಗಳ ವಿವರ ಹೀಗಿದೆ: ಬೆಳಿಗ್ಗೆ 7 ಗಂಟೆಗೆ ರಾಜಘಾಟ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಮೋದಿ ಸುಮಾರು 8 ರಿಂದ 10 ನಿಮಿಷ ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸುತ್ತಾರೆ.

ಇದಾದ ಬಳಿಕ ರಾಜಘಾಟ್ ದಿಂದ ಕೆಂಪುಕೋಟೆಯತ್ತ ಪ್ರಯಾಣ ಬೆಳೆಸಿ 7:18ಕ್ಕೆ ಕೆಂಪುಕೋಟೆಗೆ ಆಗಮಿಸುತ್ತಾರೆ. ಅಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಧಾನಿ ಮೋದಿಯವರನ್ನು ಸ್ವಾಗತಿಸಲಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಧ್ವಜವಂದನೆ ಸ್ವೀಕರಿಸಲಿದ್ದಾರೆ.

ಇದಾದ ಬಳಿಕ 7:30ಕ್ಕೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸುತ್ತಾರೆ. ಧ್ವಜಾರೋಹಣದ ಬಳಿಕ 21 ಫಿರಂಗಿ ಗುಂಡುಗಳನ್ನು ಸಿಡಿಸಲಾಗುತ್ತದೆ. ಅದಾದ ಮೇಲೆ 7:32ಕ್ಕೆ ಮೋದಿ ದೇಶವನ್ನು ಉದ್ದೇಶೀಸಿ ಭಾಷಣ ಮಾಡಲಿದ್ದಾರೆ.

ಧ್ವಜಾರೋಹಣದ ನಂತರ ಎನ್‌ಸಿಸಿ ಬಟಾಲಿಯನ್ ರಾಷ್ಟ್ರಗೀತೆ ಗಾಯನ ಮಾಡಲಿದೆ. ರಾಷ್ಟ್ರಗೀತೆ ಬಳಿಕ‌ ಪ್ರಧಾನಿ ಮೋದಿ ಅವರನ್ನು ರಕ್ಷಣಾ ಸಚಿವ, ಸೇನೆಯ ಮುಖ್ಯಸ್ಥ ಮತ್ತು ಮೂರು ಸೇನೆಯ ಮುಖ್ಯಸ್ಥರು ಕೆಂಪು ಕೋಟೆಯಿಂದ ಬೀಳ್ಕೊಡಲಿದ್ದಾರೆ.

Related Tags:

Related Posts :

Category: