ದೇಶದ ಜನ್ರ ಮುಂದೆ ಮತ್ತೆ ಬರ್ತಿದ್ದಾರೆ ಮೋದಿ, ಇಂದು ಸಂಜೆ 4 ಗಂಟೆಗೆ ನಮೋ ಭಾಷಣ!

ದೆಹಲಿ: ಡ್ರ್ಯಾಗನ್ ನಾಡಿನ ವಿರುದ್ಧ ಗುಡುಗಿದ್ದಾಯ್ತು. ಕುತಂತ್ರಿ ಚೀನಾಗೆ ಮುಟ್ಟಿಕೊಳ್ಳುವಂತೆ ವಾರ್ನಿಂಗ್ ಕೊಟ್ಟಾಯ್ತು. ಕೊರೊನಾದ ಪಿತೃ ರಾಷ್ಟ್ರದ ವಿರುದ್ಧ ತೊಡೆತಟ್ಟಿದ್ದಾಯ್ತು. ಚೀನಾ ಌಪ್​ಗಳನ್ನ ಬ್ಯಾನ್ ಮಾಡೋ ಮೂಲಕ ಸಮರ ಸಾರಿದ್ದಾಯ್ತು. ಹೀಗೆ ಪ್ರಧಾನಿ ನರೇಂದ್ರ ಮೋದಿ ಚೀನಾಗೆ ತಕ್ಕಪಾಠ ಕಲಿಸೋಕೆ ಸಜ್ಜಾಗಿದ್ದಾರೆ. ಇದ್ರ ಬೆನ್ನಲ್ಲೇ ಇಂದು ಪ್ರಧಾನಿ ದೇಶದ ಜನರನ್ನುದ್ದೇಶಿಸಿ ಮಾತನಾಡೋಕೆ ಸಜ್ಜಾಗಿದ್ದಾರೆ.

ಕೊರೊನಾ ಸಮರದ ಬಗ್ಗೆ ಕರೆ ಕೊಡ್ತಾರಾ ‘ನಮೋ’?
ಹೌದು, ಇಡೀ ಪ್ರಪಂಚಕ್ಕೆ ಕೊರೊನಾ ಹಬ್ಬಿಸಿರೋ ಪಾಪಿ ಚೀನಾದ ವಿರುದ್ಧ ಮೋದಿ ಕೆಂಡಾಮಂಡಲರಾಗಿದ್ದಾರೆ. ಕೊರೊನಾ ಜೀವ ಹಿಂಡ್ತಿರೋ ಬೆನ್ನಲ್ಲೇ ಗಡಿಯಲ್ಲಿ 20 ಯೋಧರು ಹುತಾತ್ಮರಾಗಿರೋ ಕಿಚ್ಚು ಹೊತ್ತಿ ಉರೀತಾನೇ ಇದೆ. ಹೀಗಾಗಿಯೇ ಚೀನಾದ ವಿರುದ್ಧ ಆರ್ಥಿಕ ಸಮರ ಆರಂಭಿಸಿದ ಮೋದಿ ಮೊದಲ ಹೆಜ್ಜೆ ಎಂಬಂತೆ ಬರೋಬ್ಬರಿ 59 ಌಪ್​ಗಳನ್ನ ಬ್ಯಾನ್ ಮಾಡಿದ್ದಾರೆ.

ಇದ್ರ ಬಳಿಕ ಇಂದು ಸಂಜೆ 4 ಗಂಟೆಗೆ ದೇಶದ ಜನರನ್ನುದ್ದೇಶಿಸಿ ಮೋದಿ ಮಾತ್ನಾಡ್ತಿದ್ದಾರೆ. ಚೀನಾದ ಌಪ್​​ಗಳನ್ನ ನಿಷೇಧಿಸಿದ ಬೆನ್ನಲ್ಲೇ ಮೋದಿ ಭಾಷಣ ಮಾಡೋಕೆ ಮುಂದಾಗಿರೋದು ದೇಶದ ಜನರಿಗೆ ಕುತೂಹಲವನ್ನುಂಟು ಮಾಡಿದೆ. ಚೀನಾದ ವಿರುದ್ಧ ತೆಗೆದುಕೊಳ್ತಿರೋ ಕಠಿಣ ನಿರ್ಧಾರಗಳ ಬಗ್ಗೆ ಮೋದಿ ಮಾಹಿತಿ ನೀಡುವ ಸಾಧ್ಯತೆಯಿದೆ. ಇದ್ರ ಜೊತೆಗೆ ಯಾವೆಲ್ಲಾ ವಿಷಯಗಳನ್ನ ಭಾಷಣದಲ್ಲಿ ಪ್ರಸ್ತಾಪಿಸೋ ಸಾಧ್ಯತೆಯಿದೆ ಅನ್ನೋದನ್ನ ನೋಡೋದಾದ್ರೆ.

ಚೀನಾದ ವಿರುದ್ಧ ಸಮರ!
ಇನ್ನು ನಾಳೆಯಿಂದ ದೇಶಾದ್ಯಂತ ಅನ್​ಲಾಕ್ 2.0 ಶುರುವಾಗಲಿದೆ, ಹೀಗಾಗಿ ಅನ್​ಲಾಕ್ 2.0 ಬಗ್ಗೆ ಮೋದಿ ಮಾತನಾಡುವ ಸಾಧ್ಯತೆಯಿದೆ. ಜೊತೆಗೆ ಕೊರೊನಾ ಸಮರ ಹೇಗೆ ಮುಂದುವರಿಸಬೇಕು ಅನ್ನೋದ್ರ ಬಗ್ಗೆ ಭಾಷಣ ಮಾಡ್ಬಹುದು. ಅಷ್ಟೇ ಅಲ್ಲದೆ ಕೊರೊನಾ ನಿಯಂತ್ರಣದ ಕ್ರಮಗಳ ಬಗ್ಗೆ ಮಾಹಿತಿ ನೀಡಬಹುದು. ಕೊನೆಯದಾಗಿ ಚೀನಾ ಌಪ್​ಗಳ ನಿಷೇಧದ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸೋ ಸಾಧ್ಯತೆಯಿದೆ.

ಒಟ್ನಲ್ಲಿ ಇಂದು ಮೋದಿ ಮಾಡಲಿರೋ ಭಾಷಣದ ಬಗ್ಗೆ ಇಡೀ ದೇಶದ ಜನರು ಕಾತರದಿಂದ ಕಾಯ್ತಿದ್ದಾರೆ. ಕೊರೊನಾ ಅಟ್ಟಹಾಸ ಹೆಚ್ಚಾಗಿರೋ ಬೆನ್ನಲ್ಲೇ ಮೋದಿ ಭಾಷಣ ಕುತೂಹಲ ಕೆರಳಿಸಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more