ನಕಲಿ ವಿವಿ ಹೆಸರಲ್ಲಿ ಡಾಕ್ಟರೇಟ್ ಪ್ರದಾನ.. ವೇದಿಕೆಯಲ್ಲೇ ಮೂವರ ಅರೆಸ್ಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಕಲಿ ಯುನಿವರ್ಸಿಟಿ ಹೆಸರಲ್ಲಿ ಡಾಕ್ಟರೇಟ್ ಪದವಿ ನೀಡುವ ದಂಧೆ ನಡೆಯುತ್ತಿದೆ. ಖಾಸಗಿ ಹೋಟೆಲ್​ನಲ್ಲಿ ನಡೆಯುತ್ತಿದ್ದ ಇಂಟರ್​ನ್ಯಾಷನಲ್ ಗ್ಲೋಬಲ್ ಪೀಸ್ ಯುನಿವರ್ಸಿಟಿ ಹೆಸರಲ್ಲಿ ನಕಲಿ ಡಾಕ್ಟರೇಟ್ ಪದವಿ ಪ್ರದಾನ ಕಾರ್ಯಕ್ರಮಕ್ಕೆ ಡಿಸಿಪಿ ಪ್ರಕಾಶ್ ಗೌಡ ನೇತೃತ್ವದ ತಂಡ ದಾಳಿ ನಡೆಸಿದೆ.

ಕಾರ್ಯಕ್ರಮದ ಅತಿಥಿಯಾಗಿ ಹರಿಹರ ಶಾಸಕ ರಾಮಪ್ಪ ಭಾಗಿ:
ನಿಖರ ಮಾಹಿತಿ ಮೇರೆಗೆ ದಾಳಿ ನಡೆಸುತ್ತಿದ್ದಂತೆ ಕಾರ್ಯಕ್ರಮದ ಆಯೋಜಕರು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಮೂರಕ್ಕೂ ಹೆಚ್ಚು ಆಯೋಜಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹರಿಹರ ಶಾಸಕ ರಾಮಪ್ಪ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜನರಿಂದ ಹಣ ಪಡೆದು ಡಾಕ್ಟರೇಟ್ ಪದವಿ ನೀಡಲು ಈ ನಕಲಿ ಯುನಿವರ್ಸಿಟಿ ಮುಂದಾಗಿತ್ತು.

ಕರ್ನಾಟಕ ಸೇರಿದಂತೆ ದೇಶದ ಇತರ ಭಾಗಗಳಲ್ಲೂ ಡಾಕ್ಟರೇಟ್ ಹೆಸರಲ್ಲಿ ಪಂಗನಾಮ ಹಾಕಲು ಮುಂದಾಗಿದ್ದ ನಕಲಿ ಯುನಿವರ್ಸಿಟಿಯ ಪ್ರಶಸ್ತಿ ಪತ್ರ, ಮೂಮೆಂಟೋಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Tags:

Related Posts :

Category:

error: Content is protected !!