ಹುಚ್ಚನಂತೆ ನಟಿಸಿ ಬೈಕ್ ಕಳ್ಳತನ ಮಾಡ್ತಿದ್ದ ಖದೀಮ ಲಾಕ್, ಎಲ್ಲಿ?

ರಾಯಚೂರು: ಹುಚ್ಚನಂತೆ ನಟಿಸಿ ಮನೆ ಮುಂದೆ ನಿಂತಿದ್ದ ಬೈಕ್ ಕಳ್ಳತನಕ್ಕೆ ಯತ್ನಿಸಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ತಾಯಪ್ಪ ಬಂಧಿತ ಆರೋಪಿ. ಈತ ಬೈಕ್​ಗಳನ್ನು ಕದ್ದು ಹಣ ಮಾಡುತ್ತಿದ್ದ.

ರಾಯಚೂರಿನ ನೇತಾಜಿನಗರ ಠಾಣೆ ಪೊಲೀಸರು ದಾಳಿ ನಡೆಸಿ ಬಂಧಿತನಿಂದ 3.40 ಲಕ್ಷ ರೂಪಾಯಿ ಮೌಲ್ಯದ 15 ಬೈಕ್ ಜಪ್ತಿ ಮಾಡಿದ್ದಾರೆ. ರಾಯಚೂರು ನಗರದ ಮಾಣಿಕ್ ಪ್ರಭು ಲೇಔಟ್​ನ ವಿದ್ಯಾನಿಧಿ ಕಾಲೇಜು ಬಳಿ ಹುಚ್ಚನಂತೆ ನಟಿಸಿ ಬೈಕ್ ಕಳ್ಳತನ‌ ಮಾಡಲು ಯತ್ನಿಸಿದ್ದಾಗ ಪೊಲೀಸರು ತಾಯಪ್ಪನನ್ನು ವಶಕ್ಕೆ ಪಡೆದಿದ್ದಾರೆ. ನಂತರ ದಾಳಿ ನಡೆಸಿ ಆತನ ಕದ್ದ ಬೈಕ್​ಗಳನ್ನು ಜಪ್ತಿ ಮಾಡಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more