ಶೃಂಗೇರಿ ಶಂಕರಾಚಾರ್ಯರ ಪುತ್ಥಳಿ ಮೇಲೆ ಮುಸ್ಲಿಂ ಧ್ವಜ ಹಾರಿಸಿದ್ದ ಕಿರಾತಕ ಅರೆಸ್ಟ್

ಚಿಕ್ಕಮಗಳೂರು: ಪೊಲೀಸರ ಮೇಲಿನ ಸೇಡಿಗೆ ಶೃಂಗೇರಿಯ ಶಂಕರಾಚಾರ್ಯರ ಪುತ್ಥಳಿ ಮೇಲೆ ಮುಸ್ಲಿಂ ಬಾವುಟ ಹಾರಿಸಿ ಕೋಮುಜ್ವಾಲೆ ಹೊತ್ತಿಸಲು ಯತ್ನಿಸಿದ್ದ ಕಿರಾತಕನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಮಿಲಿಂದ್‌ ಅಲಿಯಾಸ್‌ ಮನೋಹರ್‌ ಎಂಬ ವ್ಯಕ್ತಿಯನ್ನು ಚಿನ್ನದ ಅಂಗಡಿಯ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸಿದ್ದರು. ಇದರಿಂದ ಪೊಲೀಸರ ಮೇಲೆ ಅಸಮಾಧಾನಗೊಂಡಿದ್ದ ಯುವಕ, ಅವರ ಮೇಲೆ ಸೇಡಿಗಾಗಿ ಹಾತೊರೆಯುತ್ತಿದ್ದ.

ಬೆಂಗಳೂರಿನ ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣ ಆಗುತ್ತಿದ್ದಂತೆ, ಶೃಂಗೇರಿಯಲ್ಲೂ ಅದೇ ತೆರನಾದ ಗಲಭೆ ಸೃಷ್ಟಿಸಲು ಪ್ಲಾನ್‌ ಮಾಡಿದ್ದ. ಇದರಂತೆ ಆರೋಪಿ ಮಿಲಿಂದ್‌ ಶೃಂಗೇರಿಯಲ್ಲಿ ಅಶಾಂತಿ ಮೂಡಿಸಲು ಶಂಕರಾಚಾರ್ಯರ ಪುತ್ಥಳಿ ಮೇಲೆ ಮುಸ್ಲಿಂ ಸಂಘಟನೆಯ ಬಾವುಟ ಹಾರಿಸಿದ್ದ.

ಆದ್ರೆ ದುಷ್ಟನ ಈ ಕುಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದರ ಸುಳಿವು ಬೆನ್ನತ್ತಿ ಪೊಲೀಸರು ಆರೋಪಿ ಮಿಲಿಂದ್‌ ಅಲಿಯಾಸ್‌ ಮನೋಹರ್‌ ನನ್ನು ವಶಕ್ಕೆ ಪಡೆದಿದ್ದಾರೆ.

ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಶೃಂಗೇರಿ ಶಾಸಕ ರಾಜೆಗೌಡ, ಬಾವುಟ ಹಾಕಿದವರ ಮೇಲೆ ನಿರ್ದಾಕ್ಷಣ್ಯ ಕ್ರಮವಾಗಲಿ. ಶೃಂಗೇರಿ ಪೀಠಕ್ಕೆ ಪುರಾತನ ಇತಿಹಾಸವಿದೆ. ಅದು ರಾಜಕೀಯೇತರ ಮಠ. ಆರೋಪಿ ಯಾವುದೇ ಪಕ್ಷದ ಕಾರ್ಯಕರ್ತನಾಗಿದ್ದರೂ ಪ್ರಕರಣದ ಸಂಪೂರ್ಣ ತನಿಖೆಯಾಗಿ ತಪ್ಪು ಮಾಡಿದ್ದವರಿಗೆ ಶಿಕ್ಷೆಯಾಗಬೇಕು. ಆಗ ಮಾತ್ರ ಮುಂದೆ ಈ ರೀತಿಯ ಪ್ರಕರಣಗಳು ತಪ್ಪುತ್ತವೆ. ಧರ್ಮದ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ.

ಮಚ್ಚು ತೋರಿಸಿ ದರೋಡೆ ಯತ್ನ, ದಿಟ್ಟ ಮಹಿಳೆ ಮಾಡಿದ್ದೇನು ಗೊತ್ತಾ?

Related Tags:

Related Posts :

Category: