ಪೊಲೀಸ್ ನೇಮಕಾತಿ ಪರೀಕ್ಷೆ: ಅಭ್ಯರ್ಥಿ ಬದಲು ಎಕ್ಸಾಂ ಬರೆಯಲು ಬಂದ ಪೇದೆ ಲಾಕ್​

  • KUSHAL V
  • Published On - 17:34 PM, 22 Nov 2020

ಬೆಂಗಳೂರು: ರಾಜ್ಯದ ವಿವಿಧೆಡೆ 17,940 ಪೊಲೀಸ್ ಕಾನ್​ಸ್ಟೇಬಲ್​ ಹುದ್ದೆಗಳಿಗೆ ಇಂದು ನಡೆದ ಪ್ರವೇಶ ಪರೀಕ್ಷೆಯಲ್ಲಿ ಕೆಲವಡೆ ಅಕ್ರಮ ನಡೆದಿರುವ ಪ್ರಕರಣಗಳು ವರದಿಯಾಗಿದೆ. ತಪಾಸಣೆ ವೇಳೆ 36 ಕೇಂದ್ರಗಳಲ್ಲಿ ನಕಲಿ ಅಭ್ಯರ್ಥಿಗಳಿದ್ದ ಸಂಗತಿ ಬೆಳಕಿಗೆ ಬಂದಿದೆ.

ಮತ್ತೊಬ್ಬರ ಹೆಸರಿನಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ಚಿಕ್ಕಮಗಳೂರಿನ ಶೃಂಗೇರಿ ಪೊಲೀಸ್​ ಠಾಣೆಯ ಕಾನ್​ಸ್ಟೇಬಲ್​ ಸೇರಿ ಇಬ್ಬರನ್ನು ನಗರದ ದಕ್ಷಿಣ ವಿಭಾಗದ ಪೊಲೀಸರು ವಶಕ್ಕೆ ಪಡೆದರು. ಇದಲ್ಲದೆ, ನಗರದ ವಿವಿಧೆಡೆ 6ಕ್ಕೂ ಹೆಚ್ಚು ನಕಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿರುವುದು ಬೆಳಕಿಗೆ ಬಂದಿದೆ.