‘ಬಾಂಬ್’ ರಾಜಶೇಖರ್​ ಅಸಲಿ ಚರಿತ್ರೆ: ಮಾವನ ಕುಟುಂಬಸ್ಥರಿಗೆ 10 ವರ್ಷದಿಂದ ನೀಡ್ತಿದ್ದ ಚಿತ್ರಹಿಂಸೆ

  • KUSHAL V
  • Published On - 13:24 PM, 20 Oct 2020

ತುಮಕೂರು: CCB, ಸಿಟಿ ಸಿವಿಲ್ ಕೋರ್ಟ್​ಗೆ ಬೆದರಿಕೆ ಪತ್ರ ರವಾನಿಸಿ ಸದ್ಯ ಅರೆಸ್ಟ್​ ಆಗಿರುವ ರಾಜಶೇಖರ್​ಅಲಿಯಾಸ್​ ಬಾಂಬ್​ ರಾಜಶೇಖರ್​ ಅಸಲಿ ಚರಿತ್ರೆ ಪೊಲೀಸ್​ ವಿಚಾರಣೆ ವೇಳೆ ಬಯಲಾಗಿದೆ.

ಅತ್ತೆಯ ಆಸ್ತಿಗಾಗಿ ಹವಣಿಸುತ್ತಿದ್ದ ರಾಜಶೇಖರ್​ ಕಳೆದ ಹತ್ತು ವರ್ಷಗಳಿಂದ ಅದಕ್ಕಾಗಿ ಎಲ್ಲಿಲ್ಲದ ನಾಟಕ ಮಾಡಿಕೊಂಡು ಬಂದಿದ್ದನಂತೆ. ಆಸ್ತಿಯನ್ನು ಕಬಳಿಸಲು ತನ್ನ ಅತ್ತೆ, ಹೆಂಡತಿ, ಮಾವ ಮತ್ತು ನಾದಿನಿಗೆ ಇನ್ನಿಲ್ಲದ ಚಿತ್ರಹಿಂಸೆ ನೀಡುತ್ತಿದ್ದ ಎಂದು ಸಹ ತಿಳಿದುಬಂದಿದೆ.

ನಾಲ್ಕು ಎಕರೆ ಜಮೀನಿಗಾಗಿ ಷಡ್ಯಂತ್ರ ನಡೆಸಿದ್ದ ರಾಜಶೇಖರ್​ 2019ರಲ್ಲಿ ನಕಲಿ ಛಾಪಾ ಕಾಗದ ಸೃಷ್ಟಿಸಿ ರಮೇಶ್​ ಹಾಗೂ ತನ್ನ ಮಾವ ಬಸವಲಿಂಗಯ್ಯ ಮೇಲೆ ಆರೋಪ ಹೊರಿಸಿದ್ದನಂತೆ.

ಬಸವಲಿಂಗಯ್ಯ ತನ್ನ ಮಗಳು ಭೂಮಿಕಾಳನ್ನ ಒಂದೂವರೆ ಲಕ್ಷಕ್ಕೆ ಮಾರಟ ಮಾಡಿದ್ದಾರೆಂದು ಆರೋಪ ಮಾಡಿದ್ದನಂತೆ. ತನ್ನ ಮಾವ ಬಸವಲಿಂಗಯ್ಯ ಹಾಗೂ ರಮೇಶ್​ನ ಮೇಲೆ ಆರೋಪ ಹೊರಿಸಲು ನಾದಿನಿ ಮಾರಾಟದ ನಾಟಕವಾಡಿದ್ದ.

ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಈ ಸುಳ್ಳು ಸುದ್ದಿಯನ್ನ ಸಹ ಹಬ್ಬಿಸಿದ್ದನಂತೆ. ಸುದ್ದಿ ಬಳಿಕ ಭೂಮಿಕಾ ಹೇಳಿಕೆ ದಾಖಲು ಮಾಡಿಕೊಂಡಿದ್ದ ಪೊಲೀಸರು ಮತ್ತು ಮಕ್ಕಳ ಸಂರಕ್ಷಣೆ ಅಧಿಕಾರಿಗಳಿಗೆ ರಾಜಶೇಖರ್​ ಸ್ವತಃ ಭೂಮಿಕಾಗೆ ಲೈಂಗಿಕ ಕಿರುಕುಳ ನೀಡಿದ್ದ ಎಂಬ ಮಾಹಿತಿ ಸಿಕ್ಕಿದೆ. ಆಗ, ಭೂಮಿಕಾ ಮತ್ತು ಬಸವಲಿಂಗಪ್ಪ ನೀಡಿದ್ದ ದೂರಿನನ್ವಯ ಚೇಳೂರು ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದರು.

ರಾಜಶೇಖರ್ ಆಗ ಚೇಳೂರು ಪೊಲೀಸರಿಗೂ ತಲೆ ಬಿಸಿ ತಂದಿದ್ದ ಎಂದು ಹೇಳಲಾಗಿದೆ. ಈ ನಡುವೆ ಪ್ರಕರಣದ ತನಿಖೆ‌ ನಡೆಸಿದ್ದ ಪೊಲೀಸರಿಗೆ ರಾಜಶೇಖರ್​ನ ಷಡ್ಯಂತ್ರ ಗೊತ್ತಾಗಿತ್ತು. ಆಗ, ರಾಜಶೇಖರ್​ಗೆ ಎಚ್ಚರಿಕೆ ನೀಡಿದ್ದರಂತೆ. ಆದರೆ, ಪೊಲೀಸರ‌ ಎಚ್ಚರಿಕೆಯನ್ನ ಲಘುವಾಗಿ ಪರಿಗಣಿಸಿದ ರಾಜಶೇಖರ್​ ಇದೀಗ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬರೆದು ಬಾಂಬ್​ ರಾಜಶೇಖರ್​ ಆಗಿ ಪರಿಣಮಿಸಿದ್ದಾನೆ.

CCB, ಸಿವಿಲ್ ಕೋರ್ಟ್​ಗೆ ಬೆದರಿಕೆ ಪತ್ರ: ಸಿಕ್ಕಿಬಿದ್ದರು ಇಬ್ಬರು ಆರೋಪಿಗಳು!

ಬಾಂಬ್ ಬೆದರಿಕೆ ಪ್ರಕರಣದ ಸೆನ್ಸೇಷನಲ್ ಇನ್‌ಸೈಡ್ ಸ್ಟೋರಿ.. ಸಿನಿಮೀಯವಾಗಿದೆ ಓದಿ!