ತೊಳೆದು, ಪುನಃ ಬಳಸುತ್ತಿದ್ದ ಲಕ್ಷಾಂತರ ಕಾಂಡೋಮ್​ ವಶ ಪಡಿಸಿಕೊಂಡ ಪೊಲೀಸರು!

ಬಳಸಿ ತೊರೆದಿದ್ದ ಕಾಂಡೋಮ್​ಗಳನ್ನ ಸಂಗ್ರಹಿಸಿ, ಅವುಗಳನ್ನು ತೊಳೆದು ಪುನಃ ಮಾರಾಟ ಮಾಡಲು ಕೂಡಿಟ್ಟಿದ್ದ ಗೋದಾಮಿನ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ಆಗ್ನೇಯ ಏಷ್ಯಾದ ವಿಯೆಟ್ನಾಂನಲ್ಲಿ ಬೆಳಕಿಗೆ ಬಂದಿದೆ.

ದಾಳಿ ನಡೆಸಿದ ಪೊಲೀಸರು ಬರೋಬ್ಬರಿ 360 ಕೆ.ಜಿ ತೂಕದ (3,45,000 ಕಾಂಡೋಮ್​ಗಳು) ಕಾಂಡೋಮ್​ಗಳನ್ನ ಜಪ್ತಿ ಮಾಡಿದ್ದಾರೆ. ಜೊತೆಗೆ, ಗೋದಾಮಿನಲ್ಲಿದ್ದ ಓರ್ವ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

ಅಂದ ಹಾಗೆ, ಈ ಖರಾಬ್​ ಐಡಿಯಾಗೆ ಇಳಿದಿದ್ದ ಕಿರಾತಕರು ಬಳಕೆಯಾಗಿ ಬಿಸಾಡಿದ್ದ ಕಾಂಡೋಮ್​ಗಳನ್ನ ಸಂಗ್ರಹಿಸಿ ಅವುಗಳನ್ನು ಬಿಸಿನೀರಿನಲ್ಲಿ ಮೊದಲು ಶುದ್ಧ ಮಾಡುತ್ತಿದ್ದರಂತೆ. ಬಳಿಕ ಕೋಲು ಒಂದನ್ನು ಬಳಸಿ ಕಾಂಡೋಮ್​ ಅನ್ನು ಅದರ ಮೂಲಾಕಾರಕ್ಕೆ ತಂದು ಬಳಿಕ ಹೊಚ್ಚಹೊಸ ಪ್ಯಾಕೇಟ್​ನಲ್ಲಿ ಹಾಕಿ ಮಾರಾಟಕ್ಕೆ ರವಾನಿಸುತ್ತಿದ್ದರಂತೆ..ಹುಷಾರು!

Related Tags:

Related Posts :

Category:

error: Content is protected !!