ಲಾಕ್​​ಡೌನ್ ಶುರು ಆದ್ಮೇಲೆ ರೋಡಿಗಿಳಿದ್ರೆ ಹುಷಾರ್! ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ

ಬೆಂಗಳೂರು: ಬಂದ್.. ಎಲ್ಲವೂ ಬಂದ್.. ಬೆಂಗಳೂರು ಇಂದು ರಾತ್ರಿಯಿಂದಲೇ ಕಂಪ್ಲೀಟ್​ ಬಂದ್​. ಬೆಂಗಳೂರಿನ ಬೆಂದು ಹಾಕ್ತಿರೋ ಕೊರೊನಾ ಕಟ್ಟಿ ಹಾಕೋಕೆ ಲಾಕ್​​ಡೌನ್ ಬ್ರಹ್ಮಾಸ್ತ್ರ ಪ್ರಯೋಗವಾಗಿದೆ.

ಇಂದು ರಾತ್ರಿ ನೀವು ಮನೆ ಸೇರಿದ್ರೆ ಇನ್ನೊಂದು ವಾರ ಒಳಗೆ ಲಾಕ್​​. ಮನೆ ಹೊಸ್ತಿಲು ದಾಟಂಗಿಲ್ಲ. ರಸ್ತೆಗಳಲ್ಲಿ ಹೆಜ್ಜೆ ಕೂಡ ಊರಂಗಿಲ್ಲ. ರಾಜಧಾನಿಯಲ್ಲಿ ಲಾಕ್​ಡೌನ್ ಜೊತೆಗೆ ಸ್ಟ್ರಿಕ್ಟ್ ರೂಲ್ಸ್ ಜಾರಿಯಾಗಿದೆ. ಲಾಕ್​ಡೌನ್ ರೂಲ್ಸ್ ಏನಾದ್ರೂ ಬ್ರೇಕ್ ಮಾಡಿದ್ರೆ ಖಾಕಿ ಬೆಂಡೆತ್ತೋಕೆ ರೆಡಿಯಾಗಿದೆ.

ಬೆಂಗಳೂರಲ್ಲಿ ರೂಲ್ಸ್ ಬ್ರೇಕ್​ ಮಾಡಿದ್ರೆ ಬೀಳುತ್ತೆ ಕೇಸ್!
ಬೆಂಗಳೂರಿನಲ್ಲಿ ಈ ಬಾರಿಯ ಲಾಕ್​​ಡೌನ್ ಮೊದಲಿನಂತೆ ಇಲ್ವೇ ಇಲ್ಲ. ಈ ಹಿಂದೆ ಜಾರಿಯಾಗಿದ್ದ ಲಾಕ್​​​ಡೌನ್ 1 & 2ರೂಲ್ಸ್ ಬೇರೆ. ಇದೀಗ ಜಾರಿಯಾಗಿರೋ ನಿಯಮವೇ​ ಬೇರೆ. ಯಾಕಂದ್ರೆ, ಇವತ್ತಿನಿಂದಲೇ ಬೆಂಗಳೂರಲ್ಲಿ ಟಫ್ & ಖಡಕ್ ರೂಲ್ಸ್ ಜಾರಿಗೆ ಬರ್ತಿದೆ.

ಬೆಂಗಳೂರಿನ ಪ್ರತಿ ಏರಿಯಾಗಳಲ್ಲೂ ಪೊಲೀಸರು ಪ್ರತಿಯೊಬ್ಬರ ಹೆಜ್ಜೆ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ. ಇಷ್ಟೇ ಅಲ್ಲ, ರೋಡಿಗಿಳಿದ್ರೆ ಕ್ರಿಮಿನಲ್ ಕೇಸ್ ಬೀಳುತ್ತೆ ಅಂತ ಖಡಕ್ ವಾರ್ನಿಂಗ್ ರವಾನಿಸಲಾಗಿದೆ. ಯಾರಾದ್ರೂ ಹೊಸ್ತಿಲು ದಾಟಿ ಹೊರಗೆ ಬಂದ್ರೆ ಮುಲಾಜಿಲ್ಲದೇ ಕೇಸ್ ಜಡೀರಿ ಅಂಥಾ ಪೊಲೀಸ್ ಅಧಿಕಾರಿಗಳಿಗೆ ಖುದ್ದು ಗೃಹ ಸಚಿವರೇ ಸೂಚನೆ ರವಾನಿಸಿದ್ದಾರೆ.

ಖಡಕ್ ವಾರ್ನಿಂಗ್
ಇನ್ನು ಇಂದು ರಾತ್ರಿ 8 ಗಂಟೆಯಿಂದ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಲಾಕ್​​ಡೌನ್ ಜಾರಿಯಾಗ್ತಿದ್ದಂತೆ ಸ್ಟ್ರಿಕ್ಟ್ ರೂಲ್ಸ್ ಜಾರಿಗೆ ಬರಲಿದೆ. ಲಾಕ್​ಡೌನ್ ನಿಯಮಗಳನ್ನ ಕಟ್ಟುನಿಟ್ಟಾಗಿ ಜಾರಿಗೆ ತನ್ನಿ. ಎಲ್ಲೂ ಕೂಡ ಲಾಕ್​​ಡೌನ್ ರೂಲ್ಸ್ ಬ್ರೇಕ್ ಆಗದಂತೆ ನೋಡಿಕೊಳ್ಳಿ ಅಂಥಾ ಪೊಲೀಸರಿಗೆ ಗೃಹ ಸಚಿವ ಬೊಮ್ಮಾಯಿ ಸೂಚಿಸಿದ್ದಾರೆ.

ಇಷ್ಟೇ ಅಲ್ಲ, ಯಾರಾದರೂ ನಿಯಮ ಉಲ್ಲಂಘಿಸಿದ್ರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್ ದಾಖಲಿಸಿ ಅಂತಲೂ ಆದೇಶಿಸಲಾಗಿದೆ. ಇದ್ರ ಜೊತೆಗೆ ಲಾಕ್​​ಡೌನ್ ಅವಧಿಯಲ್ಲಿ ಬೇಕಾಬಿಟ್ಟಿ ಓಡಾಡದಂತೆ, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕಟ್ಟಿಟ್ಟ ಬುತ್ತಿ ಅನ್ನೋ ಸಂದೇಶವನ್ನ ರವಾನಿಸಿದ್ದಾರೆ.

ಒಟ್ನಲ್ಲಿ, ಕೊರೊನಾ ಒದ್ದೋಡಿಸೋಕೆ ಇಂದು ರಾತ್ರಿಯಿಂದ ಒಂದು ವಾರಗಳ ಕಾಲ ಬೆಂಗಳೂರಿನಲ್ಲಿ ಲಾಕ್​ಡೌನ್​ ಜೊತೆಗೆ ಕಠಿಣ ರೂಲ್ಸ್ ಜಾರಿಯಾಗ್ತಿದೆ. ಅಯ್ಯೋ ಏನು ಮಾಡೊಲ್ಲ ಒಂದು ರೌಂಡ್ ಹಾಕ್ಕೊಂಡು ಬರೋಣ ಅಂಥಾ ಹೊರಗೆ ಹೆಜ್ಜೆ ಇಟ್ರೆ ನಿಮಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ.

ಯಾಕಂದ್ರೆ, ರಾಜಧಾನಿಯ ಕೇರಿ ಕೇರಿ.. ರಸ್ತೆ ರಸ್ತೆಗಳಲ್ಲಿ ಖಾಕಿ ಬೂಟಿನ ಸದ್ದೇ ಕೇಳಲಿದೆ. ನಿಮ್ಮ ಪ್ರತಿಯೊಂದು ಚಟುವಟಿಕೆಗಳ ಮೇಲೂ ಖಾಕಿ ಕಣ್ಗಾವಲಿರಲಿದೆ. ಯಾವುದಕ್ಕೂ ಮನೆಯಿಂದ ಹೊರಗೆ ಪಾದ ಊರೋಕು ಮುನ್ನ ಸ್ವಲ್ಪ ಯೋಚಿಸಿ.. ಮನೆಯಲ್ಲೇ ಇರಿ.. ಮನೆಯಲ್ಲೇ ಇರಿ.

Related Tags:

Related Posts :

Category:

error: Content is protected !!