ಒಳಜಗಳ, ಚುನಾವಣಾ ಸೋಲುಗಳ ನಡುವೆ ರಾಜಕೀಯವಾಗಿ ಮತ್ತೆ ಸಕ್ರಿಯವಾದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ರಾಜಕೀಯವಾಗಿ ಮತ್ತೆ ಸಕ್ರಿಯವಾಗಿದ್ದಾರೆ. ಪಂಚ ರಾಜ್ಯ ಚುನಾವಣೆಯ ವೇಳೆ ಸೋನಿಯಾಗಾಂಧಿ ಯಾವುದೇ ರಾಜ್ಯದಲ್ಲೂ ಚುನಾವಣಾ ಪ್ರಚಾರ ಮಾಡಿರಲಿಲ್ಲ. ಆದರೇ, ಈಗ ಲೋಕಸಭೆ ಒಳಗೆ ಹಾಗೂ ಹೊರಗೆ ಕಮ್ಯಾಂಡಿಂಗ್ ಮಾಡುವ ಮೂಲಕ ತಾವು ಇನ್ನೂ ಸಕ್ರಿಯವಾಗಿದ್ದು, ಪಕ್ಷದ ಮೇಲೆ ಹಿಡಿತ ಹೊಂದಿರುವ ಸಂದೇಶ ರವಾನಿಸಿದ್ದಾರೆ. ರಾಜಕೀಯವಾಗಿ ಸಕ್ರಿಯವಾದ ಸೋನಿಯಾ ಗಾಂಧಿ ವಯಸ್ಸು, ಅನಾರೋಗ್ಯದ ಕಾರಣದಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು, ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಕಡಿಮೆಯಾಗಿತ್ತು. ಆದರೇ, ಕಳೆದ ಕೆಲ ದಿನಗಳಿಂದ ಇದ್ದಕ್ಕಿದ್ದಂತೆ […]
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ರಾಜಕೀಯವಾಗಿ ಮತ್ತೆ ಸಕ್ರಿಯವಾಗಿದ್ದಾರೆ. ಪಂಚ ರಾಜ್ಯ ಚುನಾವಣೆಯ ವೇಳೆ ಸೋನಿಯಾಗಾಂಧಿ ಯಾವುದೇ ರಾಜ್ಯದಲ್ಲೂ ಚುನಾವಣಾ ಪ್ರಚಾರ ಮಾಡಿರಲಿಲ್ಲ. ಆದರೇ, ಈಗ ಲೋಕಸಭೆ ಒಳಗೆ ಹಾಗೂ ಹೊರಗೆ ಕಮ್ಯಾಂಡಿಂಗ್ ಮಾಡುವ ಮೂಲಕ ತಾವು ಇನ್ನೂ ಸಕ್ರಿಯವಾಗಿದ್ದು, ಪಕ್ಷದ ಮೇಲೆ ಹಿಡಿತ ಹೊಂದಿರುವ ಸಂದೇಶ ರವಾನಿಸಿದ್ದಾರೆ.
ರಾಜಕೀಯವಾಗಿ ಸಕ್ರಿಯವಾದ ಸೋನಿಯಾ ಗಾಂಧಿ ವಯಸ್ಸು, ಅನಾರೋಗ್ಯದ ಕಾರಣದಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು, ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಕಡಿಮೆಯಾಗಿತ್ತು. ಆದರೇ, ಕಳೆದ ಕೆಲ ದಿನಗಳಿಂದ ಇದ್ದಕ್ಕಿದ್ದಂತೆ ಸೋನಿಯಾಗಾಂಧಿ ರಾಜಕೀಯವಾಗಿ ಸಕ್ರಿಯವಾಗಿದ್ದಾರೆ. ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಳಿಕ ಸೋನಿಯಾಗಾಂಧಿ ಸಕ್ರಿಯರಾಗಿರುವುದು ವಿಶೇಷ. ಪಂಚ ರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲಿನಿಂದ ಕಾಂಗ್ರೆಸ್ ನಾಯಕರೇ ನೆಹರು-ಗಾಂಧಿ ಪರಿವಾರ ಕಾಂಗ್ರೆಸ್ ನಿಂದ ದೂರ ಸರಿಯಲಿ ಎಂದು ಆಗ್ರಹಿಸಿದ್ದರು. ಅಂಥ ವೇಳೆಯೂ ತಕ್ಷಣವೇ ಸಿಡಬ್ಲ್ಯುಸಿ ಸಭೆ ಕರೆದು ಸೋಲಿನ ಪರಾಮರ್ಶೆ ನಡೆಸಿದ್ದು ಸೋನಿಯಾಗಾಂಧಿ. ಸೋಲಿಗೆ ಕಾರಣಗಳನ್ನು ಹುಡುಕಿ ವರದಿ ಮಾಡಲು ಸಮಿತಿ ರಚಿಸಿದ್ದಾರೆ.
ಕಾಂಗ್ರೆಸ್ ನಾಯಕತ್ವ ಹಾಗೂ ಪಕ್ಷದಲ್ಲಿ ಪುನರ್ ರಚನೆಯಾಗಬೇಕೆಂದು ಆಗ್ರಹಿಸಿದ್ದ ಜಿ-23 ನಾಯಕರನ್ನು ಸೋನಿಯಾಗಾಂಧಿ ವಿಶ್ವಾಸಕ್ಕೆ ತೆೆಗೆದುಕೊಂಡು ಚರ್ಚಿಸಿದ್ದಾರೆ. ಜಿ-23 ಗುಂಪಿನ ನಾಯಕ ಗುಲಾಂ ನಬಿ ಆಜಾದ್ ರನ್ನು ತಮ್ಮ ನಿವಾಸಕ್ಕೆ ಕರೆದು ಚರ್ಚಿಸಿದ್ದಾರೆ. ಜಿ-23 ಗುಂಪಿನ ನಾಯಕರಿಗೆ ಪಕ್ಷದಲ್ಲಿ ಪ್ರಮುಖ ಹುದ್ದೆ ನೀಡಿ, ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಂದೇಶ ರವಾನಿಸಿದ್ದಾರೆ. ಆದರೇ, ಸೆಪ್ಟೆಂಬರ್ ನಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಲಿದೆ. ಆದಾದ ಬಳಿಕ ಜಿ-23 ನಾಯಕರಿಗೂ ಪ್ರಮುಖ ಹುದ್ದೆ ನೀಡಲಾಗುತ್ತೆ. ಜಿ-23 ಗುಂಪಿನ ಬೇಡಿಕೆಯಂತೆ ರಣದೀಪ್ ಸುರ್ಜೇವಾಲಾ, ಅಜಯ ಮಾಕನ್ ಸೇರಿದಂತೆ ರಾಹುಲ್ ಆಪ್ತರಿಗೆ ಕೊಕ್ ನೀಡಲಾಗುತ್ತೆ ಎಂಬ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷವೇ ಮತ್ತೊಮ್ಮೆ ಇಬ್ಬಾಗದ ಹಂತಕ್ಕೆ ಹೋಗಿದೆ, ಜಿ-23 ನಾಯಕರೇ ಪಕ್ಷದಿಂದ ಹೊರಬಂದು ಹೊಸ ಪಕ್ಷ ಸ್ಥಾಪಿಸಬಹುದು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿದ್ದವು. ಆದರೇ, ಅಂಥದ್ದೇನೂ ಆಗಿಲ್ಲ. ಸಿಡಬ್ಲ್ಯುಸಿ ಸಭೆ ಬಳಿಕ ಜಿ-23 ನಾಯಕ ಗುಲಾಂ ನಬಿ ಆಜಾದ್ ಅವರೇ ಸೋನಿಯಾಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಹೇಳಿದ್ದಾರೆ. ಗುಲಾಂ ನಬಿ ಆಜಾದ್ ನಿವಾಸದಲ್ಲಿ ನಡೆದ ಅತೃಪ್ತರು, ಜಿ-23 ಗುಂಪಿನ ನಾಯಕರ ಅಭಿಪ್ರಾಯಗಳನ್ನು ಗುಲಾಂ ನಬಿ ಆಜಾದ್ ನೇರವಾಗಿ ಸೋನಿಯಾಗಾಂಧಿಗೆ ತಿಳಿಸಿದ್ದಾರೆ.
ಲೋಕಸಭೆಯಲ್ಲೂ ಸಕ್ರಿಯವಾದ ಸೋನಿಯಾ ಇನ್ನು ಸೋನಿಯಾಗಾಂಧಿ ಯುಪಿಎ ಸರ್ಕಾರ ಇದ್ದಾಗ, ಲೋಕಸಭೆಯಲ್ಲಿ ಮಾತನಾಡುತ್ತಿರಲಿಲ್ಲ, ಆದರೇ, ಲೋಕಸಭೆಯ ಚರ್ಚೆಗಳ ವೇಳೆ ಉಪಸ್ಥಿತರಿರುತ್ತಿದ್ದರು. ಆದರೇ, ಈಗ ಕಾಂಗ್ರೆಸ್ ವಿರೋಧ ಪಕ್ಷದಲ್ಲಿದೆ. ಹೀಗಾಗಿ ಸೋನಿಯಾಗಾಂಧಿ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಲೋಕಸಭೆಯಲ್ಲಿ ಸರ್ಕಾರದ ವಿರುದ್ದ ವಿಪಕ್ಷಗಳನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಯುವಂತೆ ಕಮ್ಯಾಂಡಿಂಗ್ ಮಾಡುತ್ತಿದ್ದಾರೆ. ಇಂದು ಕೂಡ ಕಾಂಗ್ರೆಸ್ ಸದಸ್ಯರು ಮಾತ್ರವಲ್ಲದೇ, ವಿಪಕ್ಷಗಳನ್ನು ಒಗ್ಗೂಡಿಸಿ ಇಂಧನ, ಗ್ಯಾಸ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುವಂತೆ ಕಮ್ಯಾಂಡಿಂಗ್ ಮಾಡಿದ್ದಾರೆ.
ಲೋಕಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಬೆಲೆ ಏರಿಕೆ ವಿರೋಧಿಸಿ ಸರ್ಕಾರಕ್ಕೆ ಪ್ರಶ್ನೆ ಕೇಳದೇ, ಪ್ರತಿಭಟನೆ ನಡೆಸುವಂತೆ ಕಾಂಗ್ರೆಸ್ ಲೋಕಸಭಾ ಸದಸ್ಯರು ಹಾಗೂ ಉಳಿದ ವಿಪಕ್ಷಗಳ ಸದಸ್ಯರಿಗೂ ಸೋನಿಯಾಗಾಂಧಿ ಸೂಚಿಸಿದ್ದು ಕಂಡು ಬಂತು. ನ್ಯಾಷನಲ್ ಕಾನ್ಪರೆನ್ಸ್ ಸದಸ್ಯ ಹುಸೇನ್ ಮಸೂದಿ ಸರ್ಕಾರಕ್ಕೆ ಪ್ರಶ್ನೆ ಕೇಳಲು ಎದ್ದು ನಿಂತಿದ್ದರು. ಆದರೇ, ಸೋನಿಯಾಗಾಂಧಿ ಪ್ರಶ್ನೆ ಕೇಳದೇ ಕುಳಿತುಕೊಳ್ಳುವಂತೆ ನ್ಯಾಷನಲ್ ಕಾನ್ಪರೆನ್ಸ್ ಸದಸ್ಯರಿಗೆ ಕೈ ಸನ್ನೆ ಮೂಲಕ ಸೂಚಿಸಿದ್ದರು . ಅದರಂತೆ ಹುಸೇನ್ ಮಸೂದಿ ಪ್ರಶ್ನೆ ಕೇಳದೇ ಕುಳಿತುಕೊಂಡರು. ಇದೇ ರೀತಿ ಕಾಂಗ್ರೆಸ್ ಮಿತ್ರಪಕ್ಷದ ಸದಸ್ಯ ಮೊಹಮ್ಮದ್ ಬಸೀರ್, ತಮ್ಮ ಪ್ರಶ್ನೆ ಕೇಳದೇ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಸರ್ಕಾರಕ್ಕೆ ಪ್ರಶ್ನೆ ಕೇಳಿ ಕುಳಿತುಕೊಂಡರು.
ಅಪರೂಪಕ್ಕೆ ಸೋನಿಯಾಗಾಂಧಿ ಸದನದಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಪ್ರಾಕ್ಟಿಕಲ್ ಆಗಿಯೇ ಕಾಂಗ್ರೆಸ್ ಸದಸ್ಯರು ಬೆಲೆ ಏರಿಕೆ ವಿರುದ್ಧ ಸದನದೊಳಗೆ ಪ್ರತಿಭಟನೆ ನಡೆಸುವಂತೆ ನೋಡಿಕೊಂಡರು. ಇನ್ನೂ ಲೋಕಸಭೆಯಲ್ಲಿ ಮಾತನಾಡಿದ ಸೋನಿಯಾಗಾಂಧಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಮೊಟ್ಟೆಯನ್ನು ಮಕ್ಕಳಿಗೆ ನೀಡಬೇಕು. ಕೊರೊನಾ ಕಾರಣದಿಂದ ನಿಲ್ಲಿಸಿರುವ ಬಿಸಿಯೂಟವನ್ನು ಮತ್ತೆ ಆರಂಭಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.
ಮೊನ್ನೆಯೂ ಇದೇ ರೀತಿ ಸೋನಿಯಾ ಗಾಂಧಿ ಲೋಕಸಭೆಯಲ್ಲಿ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದರು. ಫೇಸ್ ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾಗಳು ಭಾರತದಲ್ಲಿ ರಾಜಕೀಯವಾಗಿ ದುರ್ಬಳಕೆ ಆಗುವುದನ್ನು ತಡೆಯಬೇಕು. ಈ ಬಗ್ಗೆ ಸೋಷಿಯಲ್ ಮೀಡಿಯಾ ಕಂಪನಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.
ಇಂದು ಮಧ್ಯಾಹ್ನದ ಬಿಸಿಯೂಟದ ಬಗ್ಗೆ ಮಾತನಾಡಿದ್ದಾರೆ. ಪ್ರಶ್ನೋತ್ತರ ಕಲಾಪದ ಬಳಿಕವೂ ಸೋನಿಯಾಗಾಂಧಿ ಸದನದಲ್ಲೇ ಕುಳಿತಿದ್ದರು. 2014ರಿಂದ 2019ರ ಅವಧಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿ ವಿರೋಧ ಪಕ್ಷದ ನಾಯಕನ ಸ್ಥಾನದ ಜವಾಬ್ದಾರಿಯನ್ನು ನಿಭಾಯಿಸಿದ್ದರು. ಆದರೇ, ಈಗ ಖರ್ಗೆ ಲೋಕಸಭಾ ಸದಸ್ಯರಾಗಿ ಉಳಿದಿಲ್ಲ. ಲೋಕಸಭೆಯ ಕಾಂಗ್ರೆಸ್ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ ಕಾರ್ಯನಿರ್ವಹಣೆ ಬಗ್ಗೆ ಸೋನಿಯಾಗಾಂಧಿಗೂ ತೃಪ್ತಿ ಇಲ್ಲ. ಹೀಗಾಗಿ ಈಗ ತಾವೇ ವಿಪಕ್ಷಗಳ ನೇತೃತ್ವ ವಹಿಸಿ ಸರ್ಕಾರದ ವಿರುದ್ಧ ಲೋಕಸಭೆಯೊಳಗೆ ಹೋರಾಟ ನಡೆಸಬೇಕಾದ ಸ್ಥಿತಿ ಸೋನಿಯಾಗಾಂಧಿ ಅವರಿಗೆ ಎದುರಾಗಿದೆ. ಈ ಜವಾಬ್ದಾರಿಯನ್ನು ಇಂದು ಸೋನಿಯಾಗಾಂಧಿ ನಿಭಾಯಿಸಿದ್ದಾರೆ.
Published On - 6:24 pm, Wed, 23 March 22