Shivaraj Tangadagi ನಮ್ಮ ಸಂಸದರಿಗೆ ತಾಕತ್ ಇದ್ರೆ.. ಮೋದಿ ಜೊತೆ ಒಂದು ಫೋಟೋ ತೆಗೆಸಿಕೊಳ್ಳಲಿ -ಶಿವರಾಜ್ ತಂಗಡಗಿ ಸವಾಲ್​

Shivaraj Tangadagi : ನಮ್ಮ ಸಂಸದರಿಗೆ ತಾಕತ್ ಇದ್ರೆ ಮೋದಿ ಜೊತೆ ಒಂದು ಫೋಟೋ ತೆಗೆಸಿಕೊಳ್ಳಲಿ. ಮೋದಿ ಇವರನ್ನು ಹತ್ತಿರಕ್ಕೂ ಕೂಡ ಬಿಟ್ಟುಕೊಳ್ಳಲ್ಲ. ನಮ್ಮ ಸಂಸದರನ್ನ 200 ಮೀಟರ್ ದೂರ ನಿಲ್ಲಿಸುತ್ತಾನೆ ಎಂದು ಜಿಲ್ಲೆಯಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಟಾಂಗ್​ ಕೊಟ್ಟಿದ್ದಾರೆ.

  • TV9 Web Team
  • Published On - 17:13 PM, 14 Feb 2021
Shivaraj Tangadagi ನಮ್ಮ ಸಂಸದರಿಗೆ ತಾಕತ್ ಇದ್ರೆ.. ಮೋದಿ ಜೊತೆ ಒಂದು ಫೋಟೋ ತೆಗೆಸಿಕೊಳ್ಳಲಿ -ಶಿವರಾಜ್ ತಂಗಡಗಿ ಸವಾಲ್​
ಶಿವರಾಜ್ ತಂಗಡಗಿ

ಕೊಪ್ಪಳ: ನಮ್ಮ ಸಂಸದರಿಗೆ ತಾಕತ್ ಇದ್ರೆ ಮೋದಿ ಜೊತೆ ಒಂದು ಫೋಟೋ ತೆಗೆಸಿಕೊಳ್ಳಲಿ. ಮೋದಿ ಇವರನ್ನು ಹತ್ತಿರಕ್ಕೂ ಕೂಡ ಬಿಟ್ಟುಕೊಳ್ಳಲ್ಲ. ನಮ್ಮ ಸಂಸದರನ್ನ 200 ಮೀಟರ್ ದೂರ ನಿಲ್ಲಿಸುತ್ತಾನೆ ಎಂದು ಜಿಲ್ಲೆಯಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಟಾಂಗ್​ ಕೊಟ್ಟಿದ್ದಾರೆ.

‘ಮೋದಿಗೆ ನಮ್ಮ ಕರ್ನಾಟಕದ ಸಂಸದರೆಂದರೆ ನಿರ್ಲಕ್ಷ್ಯ’
ಮೋದಿಗೆ ನಮ್ಮ ಕರ್ನಾಟಕದ ಸಂಸದರೆಂದರೆ ನಿರ್ಲಕ್ಷ್ಯ. ಕರ್ನಾಟಕದ ಸಂಸದರು ಕೆಲಸ ಮಾಡುವುದು ಬೇಡ. ಪ್ರಧಾನಿ ಮೋದಿಗೆ ಗೊತ್ತಿದೆ ಸಂಸದರ ಅವಶ್ಯಕತೆ ಇಲ್ಲ. ಯಾಕಂದರೆ ಅವರನ್ನು EVMನಿಂದ ಗೆಲ್ಲಿಸಿದ್ದೇನೆಂದು ಗೊತ್ತಿದೆ. ಇನ್ಮುಂದೆ ಮೋದಿ ಅಂದ್ರೆ ಪೆಟ್ರೋಲ್, ಡೀಸೆಲ್​ ಅನ್ನಬೇಕು. ಮೋದಿ ಅಂದ್ರೆ ಸುಳ್ಳ ಅನಬೇಕು ಎಂದು ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದರು.

‘ಭಾರತ ದೇಶವನ್ನು ಆಳುತ್ತಿರುವುದು ಇಬ್ಬರು ಗುಜರಾತಿಗಳು’
ಮೋದಿ ಯಾವ ನೈತಿಕತೆಯಲ್ಲಿ ಕಾಂಗ್ರೆಸ್​ ಬಗ್ಗೆ ಮಾತಾಡುತ್ತಾರೆ. ಬಿಜೆಪಿಯವರು ಅಂದ್ರೆ ಸುಳ್ಳುಕೋರರ, ದಗಾಕೋರರೆಂದು ಕಿಡಿಕಾರಿದರು. ಭಾರತ ದೇಶವನ್ನು ಆಳುತ್ತಿರುವುದು ಇಬ್ಬರು ಗುಜರಾತಿಗಳು. ನರೇಂದ್ರ ಮೋದಿ, ಅಮಿತ್ ಶಾ ದೇಶವನ್ನು ಮಾರುತ್ತಿದ್ದಾರೆ. ಅಂಬಾನಿ, ಅದಾನಿ ಇಡೀ ದೇಶವನ್ನೇ ಖರೀದಿ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಇದನ್ನೂ ಓದಿ: Kaun Banega Crorepati ಕರೋಡ್​ಪತಿ ಆಗೋ ಆಸೆಗೆ ಬಿದ್ದು.. 84 ಸಾವಿರ ರೂ. ಲಾಸ್​ ಮಾಡ್ಕೊಂಡ ಇಂಜಿನಿಯರಿಂಗ್ ‌ವಿದ್ಯಾರ್ಥಿ!