ಬಾದಾಮಿ ಕ್ಷೇತ್ರದಲ್ಲಿ ನನ್ನನ್ನು ಮತದಾರರಲ್ಲ.. BJPಯವರೇ ಸೋಲಿಸಿದ್ರು -ಸಚಿವ ಶ್ರೀರಾಮುಲು ಬೇಸರ

B Sriramulu: ಬಾದಾಮಿ ಕ್ಷೇತ್ರದಲ್ಲಿ ನನ್ನನ್ನು ಬಿಜೆಪಿ ನಾಯಕರೇ ಸೋಲಿಸಿದ್ರು. ಕ್ಷೇತ್ರದ ಮತದಾರರು ಸೋಲಿಸಿಲ್ಲ, ಬಿಜೆಪಿಯವರೇ ಸೋಲಿಸಿದ್ರು ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು ಬೇಸರ ವ್ಯಕ್ತಪಡಿಸಿದರು.

  • TV9 Web Team
  • Published On - 21:41 PM, 20 Feb 2021
ಬಾದಾಮಿ ಕ್ಷೇತ್ರದಲ್ಲಿ ನನ್ನನ್ನು ಮತದಾರರಲ್ಲ.. BJPಯವರೇ ಸೋಲಿಸಿದ್ರು -ಸಚಿವ ಶ್ರೀರಾಮುಲು ಬೇಸರ
ಬಿ.ಶ್ರೀರಾಮುಲು

ಚಿತ್ರದುರ್ಗ‌: ಬಾದಾಮಿ ಕ್ಷೇತ್ರದಲ್ಲಿ ನನ್ನನ್ನು ಬಿಜೆಪಿ ನಾಯಕರೇ ಸೋಲಿಸಿದ್ರು. ಕ್ಷೇತ್ರದ ಮತದಾರರು ಸೋಲಿಸಿಲ್ಲ, ಬಿಜೆಪಿಯವರೇ ಸೋಲಿಸಿದ್ರು ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು ಬೇಸರ ವ್ಯಕ್ತಪಡಿಸಿದರು.

ಶ್ರೀರಾಮುಲು ವಾಲ್ಮೀಕಿ ನಾಯಕ ಸಮಾಜದ ಸಣ್ಣ ಕುಲದವನು. ಶ್ರೀರಾಮುಲು ಗೆದ್ದರೆ ನಮಗೆ ಮುಳ್ಳಾಗ್ತಾನೆಂದು ಸೋಲಿಸಿದರು. ಮೋದಿ, ಅಮಿತ್ ಶಾ ಅಂತಹವರು ಮಾತ್ರ 2 ಕಡೆ ಸ್ಪರ್ಧಿಸ್ತಾರೆ. ನಮ್ಮ ವರಿಷ್ಠರು ನನಗೂ 2 ಕಡೆ ಸ್ಪರ್ಧೆಗೆ ಅವಕಾಶ ನೀಡಿದ್ರು. ಆದ್ರೆ ನನ್ನನ್ನು ಬಿಜೆಪಿ ನಾಯಕರೇ ಸೋಲಿಸಿದ್ರು ಎಂದು ಶ್ರೀರಾಮುಲು ನುಡಿದರು.

ಬಾದಾಮಿಯಲ್ಲಿ ಸೋತ ವೇಳೆ ಮೊಳಕಾಲ್ಮೂರು ಜನ ಕೈಹಿಡಿದ್ರಿ. ನಾನು ಜೀವ ಬಿಡುತ್ತೇನೆ. ಆದರೆ ನಿಮ್ಮ ವಿಶ್ವಾಸ ಕಳೆದುಕೊಳ್ಳಲ್ಲ ಎಂದು ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಸಮಾಜ ಕಲ್ಯಾಣ ಸಚಿವ ರಾಮುಲು ಹೇಳಿದರು. ನೂತನ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಚಿವ ಬಿ.ಶ್ರೀರಾಮುಲು ಭಾಷಣ ಮಾಡಿದರು.

‘ಎಲೆಕ್ಷನ್‌ನಲ್ಲಿ ಬಾದಾಮಿಯಲ್ಲಿ ಏನಾಯ್ತೆಂದು ಎಲ್ಲರಿಗೂ ಗೊತ್ತು’
ಎಲೆಕ್ಷನ್‌ನಲ್ಲಿ ಬಾದಾಮಿಯಲ್ಲಿ ಏನಾಯ್ತೆಂದು ಎಲ್ಲರಿಗೂ ಗೊತ್ತು. ಎಲ್ಲರೂ ಕುಳಿತು ಮಾತಾಡಿದ್ರೆ ರಾಮುಲು ಗೆಲ್ಲಬಹುದಾಗಿತ್ತು. ಎಲ್ಲೋ ಒಂದು ಕಡೆ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಈ ಕುರಿತು ನಾನು ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ. ಬಿ.ಶ್ರೀರಾಮುಲುಗೆ ಭಯ ಹಾಗೂ ಹೆದರಿಕೆ ಎಂಬುವುದಿಲ್ಲ. ರಾಜಕಾರಣದಲ್ಲಿ ಈವರೆಗೂ ಹೆದರಿಲ್ಲ, ಮುಂದೆ ಹೆದರಲ್ಲ ಎಂದು ಶ್ರೀರಾಮುಲು ಹೇಳಿದರು.

‘ಬಾದಾಮಿಯಲ್ಲಿ ಸೋತೆ, ಮೊಳಕಾಲ್ಮೂರು ಜನ ಕೈಹಿಡಿದ್ರು’
ಬಾದಾಮಿಯಲ್ಲಿ ಸೋತೆ, ಮೊಳಕಾಲ್ಮೂರು ಜನ ಕೈಹಿಡಿದ್ರು. ಇಲ್ಲವಾದರೆ ನನ್ನ ರಾಜಕೀಯ ಜೀವನ ಕತ್ತಲಾಗುತ್ತಿತ್ತು ಎಂದು ಕೊಂಡ್ಲಹಳ್ಳಿಯಲ್ಲಿ ಸಮಾಜ ಕಲ್ಯಾಣ ಸಚಿವ ರಾಮುಲು ಹೇಳಿದರು.

ಇದನ್ನೂ ಓದಿ: ಒಂದು ಎಕರೆ ಜಾಗ ಕೊಡುತ್ತೇನೆ.. ಸ್ವಂತ ಹಣದಿಂದ ಶ್ರೀರಾಮ ಮಂದಿರ ಕಟ್ಟಿಸಿ -ಸಿದ್ದರಾಮಯ್ಯಗೆ ರೈತನ ನೇರ ಸವಾಲ್​