ನನ್ನ ಬಳಿ ಯಾವುದೇ CD ಇಲ್ಲ.. ಇದು ಅಪ್ರಸ್ತುತ, ಅಸಹ್ಯ -ಸಿ.ಪಿ.ಯೋಗೇಶ್ವರ್

ಯತ್ನಾಳ್​ CD ಹೇಳಿಕೆಗೆ ನಾನು ಪ್ರತಿಕ್ರಿಯಿಸುವದಿಲ್ಲ. ನನ್ನ ಬಳಿ ಯಾವುದೇ CD ಇಲ್ಲ ಇದು ಅಪ್ರಸ್ತುತ, ಅಸಹ್ಯ. ಅವರು ನೋವಿನಿಂದ ಹೀಗೆ ಮಾತಾಡಿರಬಹದು. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಯೋಗೇಶ್ವರ್​ ಹೇಳಿದರು.

  • TV9 Web Team
  • Published On - 19:50 PM, 17 Jan 2021
ನನ್ನ ಬಳಿ ಯಾವುದೇ CD ಇಲ್ಲ.. ಇದು ಅಪ್ರಸ್ತುತ, ಅಸಹ್ಯ -ಸಿ.ಪಿ.ಯೋಗೇಶ್ವರ್
C.P.ಯೋಗೇಶ್ವರ್

ಬೆಳಗಾವಿ: ಸಚಿವ ಸ್ಥಾನ ನೀಡಿದ್ದಕ್ಕೆ ಕೆಲ BJP ಶಾಸಕರಿಂದ ವಿರೋಧ ವ್ಯಕ್ತವಾದ ಬಗ್ಗೆ ಪ್ರಶ್ನಿಸಿದ್ದಕ್ಕೆ ದಯವಿಟ್ಟು ವಿವಾದ ಮಾಡಬೇಡಿಯೆಂದು ನೂತನ ಸಚಿವ ಸಿ.ಪಿ.ಯೋಗೇಶ್ವರ್ ಕೈಮುಗಿದುಬಿಟ್ಟರು.

BJP ಸರ್ಕಾರ ರಚನೆಗೆ ನನ್ನ ಪಾತ್ರದ ಬಗ್ಗೆ ತಿಳಿ ಹೇಳಬೇಕಿತ್ತು. BJP ವರಿಷ್ಠರು ಅಸಮಾಧಾನಿತ ಶಾಸಕರಿಗೆ ತಿಳಿ ಹೇಳಬೇಕಿತ್ತು. ಸರ್ಕಾರ ಹೇಗೆ ಬಂತೆಂದು ಅಸಮಾಧಾನಿತ ಶಾಸಕರಿಗೆ ಗೊತ್ತಿಲ್ಲ. ಕೆಲ ಶಾಸಕರು ಅನುಭವದ ಕೊರತೆಯಿಂದ ಮಾತನಾಡುತ್ತಿದ್ದಾರೆ ಎಂದು ಯೋಗೇಶ್ವರ್​ ಹೇಳಿದರು. ಸರ್ಕಾರ ರಚನೆಯಲ್ಲಿ ನನ್ನ ಪಾತ್ರದ ಬಗ್ಗೆ ಮನದಟ್ಟು ಮಾಡಿಕೊಡಬೇಕಾಗುತ್ತದೆ ಎಂದು ಸಹ ಹೇಳಿದರು.

9 ಕೋಟಿ ಸಾಲ ಮಾಡಿದ್ದಾರೆ ಎಂಬ ರಮೇಶ್​ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಅದು ನನ್ನ ವೈಯಕ್ತಿಕ ವಿಚಾರ, ನನ್ನ ಅಳಿಲು ಸೇವೆಗೆ ಪಕ್ಷ ಅವಕಾಶ ಕೊಟ್ಟಿದೆ. ರಮೇಶ್ ಜಾರಕಿಹೊಳಿ ಹಾಗೂ ನಾನು ಇಬ್ಬರೂ 25 ವರ್ಷದಿಂದ ಸ್ನೇಹಿತರು ಎಂದು ಹೇಳಿದರು.

ಜೊತೆಗೆ, ಯತ್ನಾಳ್​ CD ಹೇಳಿಕೆಗೆ ನಾನು ಪ್ರತಿಕ್ರಿಯಿಸುವದಿಲ್ಲ. ನನ್ನ ಬಳಿ ಯಾವುದೇ CD ಇಲ್ಲ ಇದು ಅಪ್ರಸ್ತುತ, ಅಸಹ್ಯ. ಅವರು ನೋವಿನಿಂದ ಹೀಗೆ ಮಾತಾಡಿರಬಹದು. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಯೋಗೇಶ್ವರ್​ ಹೇಳಿದರು.

ಮೆಗಾ ಸಿಟಿ ಸೇರಿದಂತೆ ನನ್ನ ವಿರುದ್ಧ ಯಾವುದೇ ಹಗರಣವಿಲ್ಲ. ಡಿ.ಕೆ.ಶಿವಕುಮಾರ್‌, H.D.ಕುಮಾರಸ್ವಾಮಿ ನನ್ನ ಪ್ರತಿಸ್ಪರ್ಧಿಗಳು. ಹೀಗಾಗಿ, ವಾಮ ಮಾರ್ಗಗಳ ಮೂಲಕ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಯೋಗೇಶ್ವರ್​ ಹೇಳಿದರು. ನನ್ನ ಮೇಲೆ ಯಾವುದೇ ಗುರುತ್ತರ ಆಪಾದನೆಗಳಿಲ್ಲ ಎಂದು ಯೋಗೇಶ್ವರ್ ಹೇಳಿದರು.

ಯಡಿಯೂರಪ್ಪನವರ ನೋಡಲಾರದಂತಹ CDಗಳು ಇವೆ -BSY ವಿರುದ್ಧ ಯತ್ನಾಳ್​ ಗುಡುಗು