ಬೆಂಗಳೂರು: ಸಚಿವರಾಗುವ MLC ಹೆಚ್.ವಿಶ್ವನಾಥ್ ಕನಸು ನುಚ್ಚು ನೂರಾಗಿದೆ. ನಾಮನಿರ್ದೇಶನದ ಆಧಾರದಲ್ಲಿ ಸಚಿವ ಸ್ಥಾನ ಸಾಧ್ಯವಿಲ್ಲ ಎಂಬ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇನ್ನು ಸುಪ್ರೀಂ ಕೋರ್ಟ್ ಆದೇಶ ಹೊರಬೀಳುತ್ತಿದ್ದಾಗ ರಾಜ್ಯ ಮೇಲ್ಮನೆಯ ಕಲಾಪದ ವೇಳೆ ಹೆಚ್. ವಿಶ್ವನಾಥ್ ನಿದ್ರೆಗೆ ಜಾರಿದ್ದಾರೆ.
ನಾಮನಿರ್ದೇಶನದ ಆಧಾರದಲ್ಲಿ ಸಚಿವ ಸ್ಥಾನ ಪಡೆಯುವುದು ಅಸಾಧ್ಯವೆಂದು ಹೈಕೋರ್ಟ್ ಆದೇಶ ಹೊರಡಿತ್ತು. ಈಗ ಅದೇ ಅದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ವಿಧಾನ ಪರಿಷತ್ಗೆ ರಾಜ್ಯ ಸರ್ಕಾರ ಹೆಚ್.ವಿಶ್ವನಾಥ್ ಅವರ ನಾಮನಿರ್ದೇಶನ ಮಾಡಿತ್ತು. ಆದ್ರೆ ಅನರ್ಹತೆ ಪ್ರಕರಣ ಹಿನ್ನೆಲೆಯಲ್ಲಿ ವಿಶ್ವನಾಥ್ಗೆ ಮತ್ತೆ ಆಯ್ಕೆ ಆಗುವಂತೆ ‘ಸುಪ್ರೀಂ’ ಆದೇಶಿಸಿತ್ತು. ನಾಮನಿರ್ದೇಶನ ಬಳಿಕ ಸಚಿವರಾಗಲು ವಿಶ್ವನಾಥ್ ಪ್ರಯತ್ನ ಪಟ್ಟಿದ್ದರು. ಆದ್ರೆ ಸಚಿವ ಸ್ಥಾನ ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
ನಿದ್ರೆಗೆ ಜಾರಿದ ವಿಶ್ವನಾಥ್
ಇಂದಿನಿಂದ ವಿಧಾನ ಪರಿಷತ್ ಕಲಾಪ ಶುರುವಾಗಿದೆ. ಕಲಾಪದ ವೇಳೆ ಹೆಚ್.ವಿಶ್ವನಾಥ್ ನಿದ್ರೆಗೆ ಜಾರಿರುವ ದೃಶ್ಯ ಸೆರೆಯಾಗಿದೆ.
ನನಗೆ ಸಚಿವರ ಸಹಾನುಭೂತಿ ಬೇಕಿಲ್ಲ
ಇನ್ನು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗಾಪುರದಲ್ಲಿ ಮಾತನಾಡಿದ ಬಿಜೆಪಿ ಎಂಎಲ್ಸಿ H.ವಿಶ್ವನಾಥ್ ನನಗೆ ಸಚಿವರ ಸಹಾನುಭೂತಿ ಬೇಕಿಲ್ಲ. ನಮ್ಮ 17 ಜನರ ಟೀಂ ಸಿಎಂ ಜೊತೆ ಮಾತನಾಡಬೇಕಿತ್ತು. ಅದು ಬಿಟ್ಟು ಅವರ ಬಾಯಿಮಾತಿನ ಸಹಾನುಭೂತಿ ಬೇಕಿಲ್ಲ. ನನ್ನನ್ನು ಒಬ್ಬಂಟಿಯಲ್ಲ ಎಂದು ಹೇಳಿದ್ದಕ್ಕೆ ಅಭಿನಂದಿಸುವೆ. ನಾವೆಲ್ಲ ಜತೆಗೇ ಇದ್ದೇವೆ, ಆದ್ರೆ ಅವರು ಮಂತ್ರಿಯಾಗಿದ್ದಾರೆ. ಎಲ್ಲವೂ ಪವರ್ ಪಾಲಿಟಿಕ್ಸ್ ಬಿಡಿ. ಪಕ್ಷ ನನಗೆ ಸಭಾಪತಿ ಹುದ್ದೆ ಕಲ್ಪಿಸಿದರೆ ನೋಡೋಣ ಎಂದು ಹೇಳಿದ್ದಾರೆ.
Kannada News Live| ಸಚಿವರಾಗುವ ಎಂಎಲ್ಸಿ ಹೆಚ್.ವಿಶ್ವನಾಥ್ ಕನಸು ಭಗ್ನ