ನಿಗಮ, ಮಂಡಳಿಗಳ ಅಧ್ಯಕ್ಷರು ಈಗ ಸಂಪುಟ ದರ್ಜೆ ಸಚಿವರಿಗೆ ಸಮಾನರು!

ಪ್ರಾಯಶಃ ಇಂಥದೊಂದು ನಿರ್ಧಾರ ಕರ್ನಾಟಕ ಸರ್ಕಾರ ತೆಗೆದುಕೊಳ್ಳಬಹುದೆಂಬ ನಿರೀಕ್ಷೆ ಜನರಲ್ಲಿ ಅದರಲ್ಲೂ ವಿಶೇಷವಾಗಿ ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕರಿಗಿತ್ತು. ಅವರನ್ನು ಸಂತೋಷವಾಗಿರಿಸುವುದು ಸರ್ಕಾರದ ಆದ್ಯತೆಗಳಲ್ಲೊಂದಾಗಿದೆ.

  • TV9 Web Team
  • Published On - 21:09 PM, 16 Dec 2020
ನಿಗಮ, ಮಂಡಳಿಗಳ ಅಧ್ಯಕ್ಷರು ಈಗ ಸಂಪುಟ ದರ್ಜೆ ಸಚಿವರಿಗೆ ಸಮಾನರು!
ವಿಧಾನಸೌಧ

ಬೆಂಗಳೂರು: ರಾಜ್ಯದ ಹಲವು ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಸ ವರ್ಷದ ಉಡುಗೊರೆ ನೀಡಿದ್ದಾರೆ. 2020 ಮುಗಿಯಲು ಇನ್ನೂ 15 ದಿನ ಬಾಕಿಯಿರುವಾಗಲೇ ಈ ಘೋಷಣೆ ಹೊರಬಿದ್ದಿದೆ.

ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕರೆಲ್ಲ ಇನ್ನು ಮುಂದೆ ಸಂಪುಟ ದರ್ಜೆಯ ಸ್ಥಾನಮಾನವನ್ನು ಹೊಂದಲಿದ್ದಾರೆ. ಈ ಕುರಿತು ಸರ್ಕಾರ ಈಗಾಗಲೇ ಆದೇಶವನ್ನು ಹೊರಡಿಸಿದೆ. ಸದರಿ ಆದೇಶದ ಮತ್ತೊಂದು ಗಮನಾರ್ಹ ಅಂಶವೆಂದರೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ.