ಯಡಿಯೂರಪ್ಪ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಯಬೇಕು: ಸಿದ್ದರಾಮಯ್ಯ ಒತ್ತಾಯ

Siddaramaiah: ನಾ ಖಾವೂಂಗ, ನಾ ಖಾನೇ ದೂಂಗ ಎಂದು ಮೋದಿ ಹೇಳುತ್ತಾರೆ. ಸಿಎಂ ಯಡಿಯೂರಪ್ಪ ಭ್ರಷ್ಟಾಚಾರದ ಬಗ್ಗೆ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಯಿಂದ ತನಿಖೆ ಆಗಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

  • TV9 Web Team
  • Published On - 16:57 PM, 16 Feb 2021
ಯಡಿಯೂರಪ್ಪ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಯಬೇಕು: ಸಿದ್ದರಾಮಯ್ಯ ಒತ್ತಾಯ
ವಿಪಕ್ಷ ನಾಯಕ ಸಿದ್ದರಾಮಯ್ಯ

ದೆಹಲಿ: ಮುಖ್ಯಮಂತ್ರಿ ಮನೆಯಲ್ಲಿ ಹಾವು, ಚೇಳು ಸೇರಿವೆ. ಮಾರಿಷಸ್​ನಲ್ಲಿ ಹಣ ಇಟ್ಟು ಬಂದಿದ್ದಾರೆ ಎಂಬ ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ತನಿಖೆಗೆ ಸೂಚನೆ ನೀಡಬೇಕು. ಬಿಜೆಪಿಯವರೇ ಹೇಳಿರುವುದರಿಂದ ಗಂಭೀರವಾಗಿ ಪರಿಗಣಿಸಿ ಎಂದರು.

ನಾ ಖಾವೂಂಗ, ನಾ ಖಾನೇ ದೂಂಗ ಎಂದು ಮೋದಿ ಹೇಳುತ್ತಾರೆ. ಸಿಎಂ ಯಡಿಯೂರಪ್ಪ ಭ್ರಷ್ಟಾಚಾರದ ಬಗ್ಗೆ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಯಿಂದ ತನಿಖೆ ಆಗಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಇದನ್ನೂ ಓದಿ: ವಿವಾದಿತ ರಾಮ ಮಂದಿರಕ್ಕೆ ದೇಣಿಗೆ ಕೊಡುವುದಿಲ್ಲ: ವಿವಾದಿತ ಹೇಳಿಕೆ ನೀಡಿದ ಸಿದ್ದರಾಮಯ್ಯ!