50 ಸೋಂಕಿತರಿಗೆ ಮೂರೇ ಟಾಯ್ಲೆಟ್, ಸೊಳ್ಳೇ ಕಾಟ ಎಕ್ಸ್​​ಟ್ರಾ! ಎಲ್ಲಿ?

ಬೀದರ್​: ಕೊವಿಡ್​ ನಿಯಂತ್ರಣಕ್ಕೆ ಹಾಗೂ ಸೋಂಕಿತರ ಚಿಕಿತ್ಸೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹಲವು ಬಾರಿ ಹೇಳಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಜಾರಿಯಾಗುತ್ತಿದೆ ಅನ್ನೋದು ನಿಜಕ್ಕೂ ಡೌಟ್. ಇದೀಗ, ಜಿಲ್ಲೆಯ ಬ್ರಿಮ್ಸ್ ಆಸ್ಪತ್ರೆಯ ಕೊವಿಡ್ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿರೋ ಸೋಂಕಿತರು ಅಲ್ಲಿನ ಅವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿದ್ದಾರೆ.

ವಾರ್ಡ್​ನಲ್ಲಿರುವ 50 ಸೋಂಕಿತರಿಗೆ ಕೇವಲ ಮೂರೇ ಶೌಚಾಲಯವಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಜೊತೆಗೆ, ಕತ್ತಲು ಕವಿದಿರುವ ವಾರ್ಡ್​ನಲ್ಲಿ ಸ್ವಚ್ಛತೆ ಇಲ್ಲದ ಕಾರಣ ಸೋಂಕಿತರಿಗೆ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಇದಲ್ಲದೆ, ಹಾಸಿಕೊಳ್ಳಲು ಮತ್ತು ಹೊದ್ದುಕೊಳ್ಳಲು ಮನೆಯಿಂದಲೇ ಬೆಡ್‌ಶೀಟ್ ತರಬೇಕಾದ ಅನಿವಾರ್ಯ ಪರಿಸ್ಥಿತಿ ಸಹ ಎದುರಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ವಿಡಿಯೋ ಮಾಡಿರುವ ಸೋಂಕಿತರು ಅದನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Related Tags:

Related Posts :

Category:

error: Content is protected !!