ಮುಸ್ಲಿಮರಲ್ಲಿ ಎರಡು ವಿಧ ಇದೆ: ಸಂಸದ ಪ್ರತಾಪ್ ಸಿಂಹ

ಕೊಡಗು: ಮುಸ್ಲಿಮರಲ್ಲಿ ಎರಡು ವಿಧ ಇದೆ. ದೇಶವನ್ನ ಪ್ರೀತಿಸುವ ಮುಸ್ಲಿಮರು ಬೇರೆ ಮತ್ತು SDPI ಮುಸ್ಲಿಮರೇ ಬೇರೆ. ಆ SDPIನವರು ಪುಂಡ ಮುಸ್ಲಿಮರು ಎಂದು ಕೊಡಗಿನ ಭಾಗಮಂಡಲದಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

SDPI, PFI ಸಂಘಟನೆಗಳು ನಿಷೇಧ ಆಗಬೇಕು. ಈ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಸ್ಪಷ್ಟವಾಗಿ ಹೇಳಿದ್ದಾರೆ. ಮಂಗಳೂರು ಘಟನೆ ನಂತರ ಈ ಪ್ರಕ್ರಿಯೆ ಶುರುವಾಗಿದೆ. SDPI ಕೃತ್ಯದ ಬಗ್ಗೆ ಪೂರಕ ದಾಖಲೆಗಳಿವೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ದಿನೇಶ್ ಗುಂಡೂರಾವ್ ಒಳ್ಳೆಯ ಹಿನ್ನೆಲೆ ಇರುವವರು.. ಆದ್ರೆ  ಮನೆಯಲ್ಲಿ ಒತ್ತಡ ಇರಬಹುದೇನೋ
ಜೊತೆಗೆ, ಗೃಹ ಸಚಿವರು ಹಾಗೂ ಮುಖ್ಯಮಂತ್ರಿಯವರ ಮೇಲೆ ವಿಶ್ವಾಸ ಇದೆ. ದಿನೇಶ್ ಗುಂಡೂರಾವ್ ಶಿಕ್ಷಿತರು, ಒಳ್ಳೆಯ ಹಿನ್ನೆಲೆ ಇರುವವರು. ಆದ್ರೆ ಯಾವಾಗಲೂ ಜನರ ದಾರಿ ತಪ್ಪಿಸುತ್ತಿರುತ್ತಾರೆ. ಕಾಂಗ್ರೆಸ್ ಪಕ್ಷದ ಶಾಸಕರ ಮೇಲೆ SDPIನವ್ರು ದಾಳಿ ಮಾಡಿದ್ದಾರೆ. SDPನ ಸಮರ್ಥನೆ ಮಾಡಿಕೊಳ್ಳುವ ದರ್ದು ಅವರಿಗೇನಿದೆ? ಬಹುಶಃ ಮನೆಯಲ್ಲಿ ಒತ್ತಡ ಇರಬಹುದೇನೋ ಎಂದು ಪ್ರತಾಪ್ ಸಿಂಹ, ದಿನೇಶ್​ ಗುಂಡೂರಾವ್​ರನ್ನ ಕಿಚಾಯಿಸಿದ್ದಾರೆ.

Related Tags:

Related Posts :

Category: