ಕೊರೊನಾ ಅಬ್ಬರದ ಮಧ್ಯೆ ಅಸ್ತಮಾ ಹೆಚ್ಚಾಗುವ ಭೀತಿಯೇ? ಚಿಂತೆ ಬೇಡ

ಕೊರೊನಾದ ಆರ್ಭಟದ ನಡುವೆ ಅತಿ ಹೆಚ್ಚು ಆತಂಕಗೊಂಡಿರೋದು ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿರುವವರು. ಮನುಷ್ಯನ ಶ್ವಾಸಕೋಶಕ್ಕೇ ನೇರವಾಗಿ ಲಗ್ಗೆಯಿಡುವ ಕೊರೊನಾ ಕೊನೆಗೆ ಮನುಷ್ಯರ ಉಸಿರನ್ನೇ ನಿಲ್ಲಿಸಿಬಿಡುತ್ತದೆ. ಹಾಗಾಗಿ ಉಸಿರಾಟದ ಸಮಸ್ಯೆ ಇರೋರು ಅದರಲ್ಲೂ ಅಸ್ತಮಾ ಇರೋರು ಸ್ವಲ್ಪ ಹೆಚ್ಚಿನ ಕಾಳಜಿ ವಹಿಸಬೇಕು. ಹಾಗಂದ್ರೆ, ಮನೆಯಲ್ಲೇ ಇದ್ದು ಆಸ್ತಮಾವನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾ? ಖಂಡಿತ. ಆದರೆ, ಅದಕ್ಕೆ ನೀವು ಮಾಡಬೇಕಾಗಿರೋದು ಇಷ್ಟೇ..

ಅಸ್ತಮಾವನ್ನ ಹತೋಟಿಯಲ್ಲಿಡಲು ಸುಲಭ ಸೂತ್ರಗಳು
ಅಸ್ತಮಾವನ್ನು ನಿಯಂತ್ರಿಸುವಲ್ಲಿ ಪ್ರಮುಖವಾದ ಅಸ್ತ್ರ ನಿಮ್ಮ ಇನ್ಹೇಲರ್​. ಹಾಗಾಗಿ, ನಿಮ್ಮ ಮತ್ತು ನಿಮ್ಮ ಕುಟುಂಬದವರಿಗೆ ಅಸ್ತಮಾ ಇದ್ದಲ್ಲಿ ಇನ್ಹೇಲರ್​ನ ಸದಾ ನಿಮ್ಮ ನಿಮ್ಮ ಬಳಿ ಇರುವಂತೆ ನೋಡಿಕೊಳ್ಳಿ. ಸಮಸ್ಯೆಯ ಅತೀವ ಲಕ್ಷಣಗಳು ಕಂಡುಬಂದಲ್ಲಿ ಪ್ರತಿ 30 ಅಥವಾ 60 ಸೆಕಂಡ್​ಗಳ ಅಂತರದಲ್ಲಿ ಕೂಡಲೇ ಬಳಸಬೇಕು. ಅಸ್ತಮಾದ ಲಕ್ಷಣಗಳು ಕೊಂಚ ಕಡಿಮೆಯಾಗೋವರೆಗೂ ಹೀಗೆಯೇ ಮಾಡಿ. ಆದರೆ ಗಮನವಿರಲಿ, ಒಂದೇ ಸಮಯದಲ್ಲಿ 10ಕ್ಕೂ ಹೆಚ್ಚು ಬಾರಿ ಇನ್ಹೇಲರ್ ಬಳಸಬೇಡಿ.

ಅಸ್ತಮಾ ಬಂದ್ರೆ ಗಾಬರಿ ಬೇಡ.. ರಿಲಾಕ್ಸ್​
ಒಂದು ವೇಳೆ ಇನ್ಹೇಲರ್​ ಬಳಸಿಯೂ ಹತೋಟಿಗೆ ಬಾರದಿದ್ದರೆ ಗಾಬರಿ ಆಗಬೇಡಿ. ರಿಲಾಕ್ಸ್​ ಆಗಿ. ಕುಳಿತಿರುವ ಸ್ಥಳದಲ್ಲಿ ನೆಟ್ಟಗೆ ಕೂತುಕೊಳ್ಳಿ ಅಥವಾ ನಿಂತುಕೊಂಡರೆಯೇ ಮತ್ತೂ ಒಳ್ಳೇಯದು. ಇದರಿಂದ ಶ್ವಾಸಕೋಶದ ಮೇಲಿನ ಒತ್ತಡ ತುಸು ಕಡಿಮೆಯಾಗಿ ಉಸಿರಾಡಲು ಅನುಕೂಲವಾಗುತ್ತೆ. ಆಳವಾಗಿ ಉಸಿರಾಡುವುದರಿಂದ ಅಸ್ತಮಾದ ಲಕ್ಷಣ ಸ್ವಲ್ಪ ತಗ್ಗುತ್ತದೆ. ಹೀಗಾಗಿ, ಈ ಕೆಲವು ಸೂತ್ರಗಳನ್ನ ನೆನಪಿನಲ್ಲಿ ಇಟ್ಟುಕೊಂಡರೆ ಈ ಮಹಾಮಾರಿಯ ಅಬ್ಬರದ ಮಧ್ಯೆಯೂ ಅಸ್ತಮಾ ಪೇಷಂಟ್​ಗಳು ನಿರಾಳವಾಗಿರಬಹುದು.

Related Posts :

Category:

error: Content is protected !!

This website uses cookies to ensure you get the best experience on our website. Learn more