ಗರ್ಭಿಣಿ ಮಹಿಳೆಗೆ ಸೋಂಕು: KMF ಖರೀದಿಸಿದ ಹಾಲು ಚರಂಡಿಗೆ!

ದೇವನಹಳ್ಳಿ: ಗರ್ಭಿಣಿ ಮಹಿಳೆಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಚಿಕ್ಕಕೊರಟಿ ಗ್ರಾಮದಲ್ಲಿ ಉತ್ಪಾದನೆಯಾಗಿದ್ದ ಭಾರಿ ಪ್ರಮಾಣದ ಹಾಲನ್ನು ಮೋರಿಗೆ ಸುರಿಯಲಾಗಿದೆ. ಹೊಸಕೋಟೆ ತಾಲೂಕಿನ ಚಿಕ್ಕಕೊರಟಿ ಗ್ರಾಮದಲ್ಲಿ ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನಲ್ಲಿ 4 ಸಾವಿರ ಲೀಟರ್​ನಷ್ಟು ಹಾಲು ಚರಂಡಿಗೆ ಚೆಲ್ಲಲಾಗಿದೆ. ತಾಲೂಕಿನ ಚಿಕ್ಕಕೊರಟಿ ಗ್ರಾಮದಲ್ಲಿ ಗರ್ಭಿಣಿಗೆ ಸೋಂಕು ಪತ್ತೆ ಹಿನ್ನೆಲೆ ನಿನ್ನೆಯಿಂದ ಗ್ರಾಮದ ಎರಡು ಡೈರಿಗಳಲ್ಲಿ ಸಿಬ್ಬಂದಿ ಹಾಲು ಸಂಗ್ರಹಣೆ ನಿಲ್ಲಿಸಿದ್ದಾರೆ. ಹಾಲು ಖರೀದಿ ಸ್ಥಗಿತಗೊಳಿಸಿದ ಕೆಎಂಎಫ್​​ ಸಿಬ್ಬಂದಿ, ಶೇಖರಣೆ ಮಾಡಿದ್ದ ಅಷ್ಟೂ ಹಾಲನ್ನು ಚರಂಡಿಗೆ ಸುರಿದಿದ್ದಾರೆ.

Related Posts :

Category:

error: Content is protected !!