ಆಸ್ಪತ್ರೆಗಳಿಗೆ ‘ಸರ್ಜರಿ’ ಕಾದಿರುವಂತಿದೆ!

ಬೆಂಗಳೂರು: ಚಿಕಿತ್ಸೆಗಾಗಿ ಲಂಗುಲಗಾಮಿಲ್ಲದೆ ಹಣ ಪೀಕುತ್ತಾ, ಬಡ ರೋಗಿಗಳ ರಕ್ತ ಹೀರುತ್ತಿರುವ ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆಯುವ ನಿರ್ಧಾರವನ್ನು ಬಿ ಎಸ್ ಯಡಿಯೂರಪ್ಪರವರ ಸರಕಾರವು ಇಷ್ಟರಲ್ಲೇ ತೆಗೆದುಕೊಳ್ಳುವ ಲಕ್ಷಣಗಳು ಕಾಣುತ್ತಿವೆ.

ಈ ನಿಟ್ಟಿನಲ್ಲಿ ಹಲವಾರು ಸಂಘಸಂಸ್ಥೆಗಳು ಸರಕಾರವನ್ನು ಈಗಾಗಲೇ ಆಗ್ರಹಿಸಿದ್ದು ಸುಗ್ರೀವಾಜ್ಞೆ ಮೂಲಕ ಆಸ್ಪತ್ರೆಗಳನ್ನು ವಶಕ್ಕೆ ಪಡೆಯಬೇಕು ಎಂದು ಒತ್ತಡ ಹೇರಿವೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಹಾಗೂ ಮೂಲಗಳ ಪ್ರಕಾರ, ಯಡಿಯೂರಪ್ಪನವರು ಇತ್ತೀಚಿಗೆ ಕರೆದ ಸಭೆಯೊಂದರಲ್ಲಿ ಸದರಿ ವಿಷಯವನ್ನು ಕಾಂಗ್ರೆಸ್ ನಾಯಕ ಪ್ರಸ್ತಾಪಿಸಬೇಕೆಂದುಕೊಂಡಿದ್ದರು. ಆದರೆ ಬಿಎಸ್ವೈ, ಕೇವಲ ಬೆಂಗಳೂರಿನ ಜನಪ್ರತಿನಿಧಿಗಳನ್ನು ಮಾತ್ರ ಆ ಸಭೆಗೆ ಆಹ್ವಾನಿಸಿದ್ದರು.

ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾದರೆ ಅವುಗಳನ್ನು ವಶಕ್ಕೆ ತೆಗೆದುಕೊಳ್ಳುವುದೇ ಸೂಕ್ತ ಮಾರ್ಗವೆಂದು ರೈತ ಮತ್ತು ದಲಿತ ಸಂಘಟನೆಗಳು ಸಹ ಹೇಳುತ್ತಿವೆ.

Related Tags:

Related Posts :

Category:

error: Content is protected !!