ಸೋಂಕಿತರಿಗೆ ಉಚಿತ ಚಿಕಿತ್ಸೆ: ಇದು ಹಾವೇರಿಯ ಖಾಸಗಿ ವೈದ್ಯರ ಸಂಕಲ್ಪ

ಹಾವೇರಿ: ಕೊರೊನಾ ಹೆಮ್ಮಾರಿಯ ವಿರುದ್ಧದ ಸಮರದಲ್ಲಿ ರಾಜ್ಯಾದ್ಯಂತ ವಾರಿಯರ್ಸ್​ ಅಂದ್ರೆ ವೈದ್ಯಕೀಯ ಸಿಬ್ಬಂದಿಯ ಕೊರತೆ ಎದುರಾಗ್ತಿದೆ. ಸೋಂಕಿನ ಭೀತಿಯಿಂದ ಮಾರು ದೂರ ಓಡುವ ಹಲವರ ನಡುವೆ ಇದೀಗ ಜಿಲ್ಲೆಯ ಕೆಲ ಖಾಸಗಿ ವೈದ್ಯರು ತಮ್ಮ ನಿಸ್ವಾರ್ಥ ಮನೋಭಾವ ತೋರಿಸಿದ್ದಾರೆ.

ಹೌದು, ಜಿಲ್ಲೆಯ ಸುಮಾರು 540 ಖಾಸಗಿ ವೈದ್ಯರು ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲು ನಿರ್ಧರಿಸಿದ್ದಾರೆ. ಸ್ವತಃ ತಾವೇ ಕೊವಿಡ್-19 ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ನೀಡಲು ತೀರ್ಮಾನಿಸಿದ್ದಾರೆ. MBBS ಮತ್ತು ತಜ್ಞ ವೈದ್ಯರನ್ನ ಒಳಗೊಂಡ ಈ ತಂಡವು ಜಿಲ್ಲಾಡಳಿತದ ಮನವಿ ಮೇರೆಗೆ ಕರ್ತವ್ಯ ನಿರ್ವಹಿಸಲು ಮುಂದಾಗಿದೆ. ಬೆಳಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಕರ್ತವ್ಯ ನಿರ್ವಹಿಸಲಿರುವ ವೈದ್ಯರ ತಂಡ ಈ ಮುಖಾಂತರ ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆ ನೀಗಿಸಲು ಮುಂದಾಗಿದೆ.

Related Tags:

Related Posts :

Category:

error: Content is protected !!