ಹೊಸ ಹಾಲಿವುಡ್ ಸಿನಿಮಾದ ಫಸ್ಟ್​ ಲುಕ್ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ!

  • Skanda
  • Published On - 8:41 AM, 24 Nov 2020

ತನ್ನ ಹೊಸ ಹೊಸ ಉಡುಗೆ ತೊಡುಗೆಗಳಿಂದ ಗಮನ ಸೆಳೆಯುವ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ, ಹಾಲಿವುಡ್ ಅಂಗಳಕ್ಕೂ ಕಾಲಿಟ್ಟಿದ್ದಾರೆ. 2021ರಲ್ಲಿ ತೆರೆಕಾಣಲಿರುವ ‘ವಿ ಕ್ಯಾನ್ ಬಿ ಹೀರೋಸ್’ ಸಿನಿಮಾದಲ್ಲಿ ಅವರು ನಟಿಸಿದ್ದು, ಚಿತ್ರದ ಫರ್ಸ್ಟ್ ಲುಕ್ ಪೋಸ್ಟರನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ಸೂಪರ್ ಹೀರೋ ಸಿನಿಮಾವು ಜನವರಿ 1ರಂದು ರಿಲೀಸ್ ಆಗಲಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಚಿತ್ರವು ಆನ್ಲೈನ್ ವೇದಿಕೆ, ನೆಟ್​ಫ್ಲಿಕ್ಸ್​ನಲ್ಲಿ ತೆರೆಕಾಣಲಿದೆ.

‘ವಿ ಕ್ಯಾನ್ ಬಿ ಹೀರೋಸ್’ನಲ್ಲಿ ಏನಿರಲಿದೆ?
‘ವಿ ಕ್ಯಾನ್ ಬಿ ಹೀರೋಸ್’ ಎಂಬುದು ಆಕ್ಷನ್, ಡ್ರಾಮಾ, ಫ್ಯಾಂಟಸಿಯನ್ನು ಒಳಗೊಂಡ ಸೂಪರ್ ಹೀರೋ ಸಿನಿಮಾ ಆಗಿರಲಿದೆ. ಏಲಿಯನ್ಗಳು ಭೂಮಿಯ ಸೂಪರ್ ಹೀರೋಗಳನ್ನು ಅಪಹರಿಸಿದಾಗ, ಮಕ್ಕಳು ಹೇಗೆ ಜೊತೆಯಾಗಿ ಹೋರಾಡಬೇಕು. ವಿಶ್ವವನ್ನು ಹೇಗೆ ರಕ್ಷಿಸಬೇಕು ಎಂಬ ಕತೆ ಇರಲಿದೆ. ಇದನ್ನು ಪ್ರಿಯಾಂಕಾ ಚೋಪ್ರಾ, ‘ಎ ಕಿಡ್ಸ್ ಕ್ಲಾಸಿಕ್’ ಎಂದು ವರ್ಣಿಸಿದ್ದಾರೆ. ಸಿನಿಮಾದಲ್ಲಿ ನನ್ನ ಪಾತ್ರದ ಬಗ್ಗೆ ಇನ್ನಷ್ಟು ಹೇಳುವುದಿದೆ ಎಂದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

ಚಿತ್ರವನ್ನು ಖ್ಯಾತ ನಿರ್ದೇಶಕ ಮತ್ತು ತಂತ್ರಜ್ಞ ರಾಬರ್ಟ್ ರಾಡ್ರಿಗಸ್ ನಿರ್ದೇಶಿಸಲಿದ್ದಾರೆ. ಪೆಡ್ರೊ ಪಾಸ್ಕಲ್ ಸಹಿತ ಹಲವು ತಾರೆಯರು ಸಿನಿಮಾದ ಭಾಗವಾಗಲಿದ್ದಾರೆ. ಇದು 2005ರಲ್ಲಿ ತೆರೆಕಂಡ 3-ಡಿ ಸಿನಿಮಾ, ‘ಶಾರ್ಕ್ ಬಾಯ್ ಆಂಡ್ ಲಾವಾಗರ್ಲ್’ನ ಎರಡನೇ ಭಾಗವಾಗಿರಲಿದೆ .