ಕೌಟುಂಬಿಕ ಕಲಹ ಶಂಕೆ: ಮನೆಯಲ್ಲೇ PSI ನೇಣಿಗೆ ಶರಣು!

ಬೀದರ್: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನೆಯಲ್ಲೇ ನೇಣು ಬಿಗಿದುಕೊಂಡು ಪ್ರೊಬೆಷನರಿ ಎಸ್​ಐ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವಕಲ್ಯಾಣದ ಮಹದೇವ್ ನಗರದಲ್ಲಿ ನಡೆದಿದೆ. ರೇಖಾ ಕಿರಣ್ ಕುಮಾರ್ ಕೋರೆ (26) ಆತ್ಮಹತ್ಯೆಗೆ ಶರಣಾದ ಎಸ್​ಐ.

ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕಡಗಂಚಿ ನಿವಾಸಿಯಾಗಿರುವ ರೇಖಾ ಕಿರಣ್ ಅವರು 8 ವರ್ಷದ ಹಿಂದೆ ಮದುವೆಯಾಗಿದ್ದರು. ರೇಖಾಗೆ ಇಬ್ಬರು ಮಕ್ಕಳು ಸಹ ಇದ್ದರು. ಕಳೆದ 8 ತಿಂಗಳಿನಿಂದ ಬಸವಕಲ್ಯಾಣದಲ್ಲಿ ಪಿಎಸ್​ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!