ಬೆಳಗಾವಿಯಲ್ಲಿ ಶಿವಸೇನೆಯ ಪುಂಡಾಟ: ಶಿವಾಜಿ ಪ್ರತಿಮೆಯನ್ನು ಸ್ಥಳಾಂತರಿಸಿದ್ದಕ್ಕೆ ಪ್ರತಿಭಟನೆಗೆ ತೀರ್ಮಾನ

ಬೆಳಗಾವಿ: ಗ್ರಾಮದೇವತೆಯ ಜಾತ್ರೆ ವೇಳೆ ಯಾವುದೇ ಸಮಸ್ಯೆ ಎದುರಾಗಬಾರದೆಂದು ಗ್ರಾಮದಲ್ಲಿದ್ದ ಶಿವಾಜಿಯ ಪುತ್ಥಳಿಯನ್ನು ಬೇರೆಡೆ ಸ್ಥಳಾಂತರಿಸಿದಕ್ಕೆ ಶಿವಸೇನೆ ಮುಖಂಡರು ಗ್ರಾಮದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಜಿಲ್ಲೆಯ ಚಿಕ್ಕೋಡಿಯ ಮನಗುತ್ತಿ ಗ್ರಾಮದಲ್ಲಿ ಶಿವಾಜಿಯ ಪ್ರತಿಮೆಯನ್ನ ಈ ಹಿಂದೆ ಪ್ರತಿಷ್ಠಾಪಿಸಲಾಗಿತ್ತು. ಆದರೆ ಗ್ರಾಮದಲ್ಲಿ ಮುಂದಿನವಾರ ಗ್ರಾಮದೇವತೆಯ ಜಾತ್ರೆನಡೆಯಲಿದ್ದು ಈ ವೇಳೆ ಯಾವುದೇ ತೊಂದರೆಯಾಗಬಾರದೆಂದು ಶಿವಾಜಿಯ ಪುತ್ಥಳಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಗ್ರಾಮದ ಹಿರಿಯರು ಹಾಗೂ ಮರಾಠ ಮುಖಂಡರೆಲ್ಲಾ ಸೇರಿ ನಿರ್ಧಾರಿಸಿದ್ದರು.

ಆದರೆ, ಈ ವಿಚಾರ ತಿಳಿದ ನೆರೆಯ ಮಹಾರಾಷ್ಟ್ರದ ಶಿವಸೇನೆ ಮುಖಂಡರು ಗ್ರಾಮದಲ್ಲಿ ಶಾಂತಿ ಕದಡಲು ತಯಾರಿ ನಡೆಸಿದ್ದು, ಮುಂದಿನ ಸೋಮವಾರ ಮನಗುತ್ತಿ ಚಲೋ ಎಂದು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

ಇದರಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಯಾವುದೇ ಕಾರಣಕ್ಕೂ ಅಹಿತಕರ ಘಟನೆ ಸಂಭವಿಸಬಾರದೆಂದು ಮುಂಜಾಗ್ರತಾ ಕ್ರಮವಾಗಿ ನೂರಕ್ಕೂ ಹೆಚ್ಚು ಪೊಲೀಸರನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ.

Related Tags:

Related Posts :

Category: