ಚಂದ್ರಬಾಬು ನಾಯ್ಡು, ಪುತ್ರ ನಾರಾ ಲೋಕೇಶ್​ಗೆ ಗೃಹ ಬಂಧನ

ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಮತ್ತು ಆತನ ಮಗ ನಾರಾ ಲೋಕೇಶ್​ ಸೇರಿ ಟಿಡಿಪಿ ಪಕ್ಷದ ಹಲವು ಮುಖಂಡರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ವಿರುದ್ಧ ‘ಚಲೋ ಆತ್ಮಕೂರ್’ ಪ್ರತಿಭಟನಾ ಱಲಿಯಲ್ಲಿ ಪಾಲ್ಗೊಳ್ಳುವುದನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ.

ಪ್ರತಿಭಟನಾ ಱಲಿಗೆ ಹೋಗಬೇಕಿದ್ದ ನಮ್ಮನ್ನು ಪೊಲೀಸರು ತಡೆದಿದ್ದಾರೆ. ಆಡಳಿತಾರೂಢ ಸರ್ಕಾರ ಮಾನವನ ಹಕ್ಕುಗಳನ್ನ ಉಲ್ಲಂಘಿಸುತ್ತಿದೆ. ಗೃಹ ಬಂಧನದ ಮೂಲಕ ನಮ್ಮ ಱಲಿಯನ್ನು ತಡೆಯಲು ಸಾಧ್ಯವಿಲ್ಲ. ಸರ್ಕಾರಕ್ಕೆ ಮತ್ತು ಪೊಲೀಸರಿಗೆ ನಾನು ಎಚ್ಚರಿಕೆ ನೀಡುತ್ತೇನೆ. ಪೊಲೀಸರು ನಮ್ಮನ್ನು ಬಿಟ್ಟ ಮೇಲೆ ಱಲಿಗೆ ಹೋಗುತ್ತೇವೆ ಎಂದು ಚಂದ್ರಬಾಬು ನಾಯ್ಡು ತಮ್ಮ ನಿವಾಸದ ಬಳಿ ಹೇಳಿದ್ದಾರೆ.

ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ನಡೆಯನ್ನ ವಿರೋಧಿಸಿ ಅಮರಾವತಿಯಿಂದ ಆತ್ಮಕೂರ್​ಗೆ ಟಿಡಿಪಿ ಪ್ರತಿಭಟನಾ ಱಲಿ ಹಮ್ಮಿಕೊಂಡಿತ್ತು. ಆದ್ರೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ತಡೆಯಲು ಚಂದ್ರಬಾಬು ನಾಯ್ಡು, ನಾರಾ ಲೋಕೇಶ್​ ಸೇರಿದಂತೆ ಹಲವು ಟಿಡಿಪಿ ನಾಯಕರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.

ವೈಎಸ್​ ಜಗನ್​ಮೋಹನ್​ ರೆಡ್ಡಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಮ್ಮ ಕಾರ್ಯಕರ್ತರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ ಎಂದು ತೆಲುಗು ದೇಶಂ ಪಕ್ಷ (ಟಿಡಿಪಿ) ಆರೋಪಿಸಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!