ಬಾವಿಗೆ ಬಿದ್ದ ವೃದ್ಧೆಯನ್ನು ರಕ್ಷಿಸಿದ ಖಾಕಿ, ಎಲ್ಲಿ?

ಉಡುಪಿ: ಬಾವಿಗೆ ಬಿದ್ದಿದ್ದ ವೃದ್ಧೆಯನ್ನು PSI ಒಬ್ಬರು ರಕ್ಷಿಸಿರುವ ಘಟನೆ ಜಿಲ್ಲೆಯ ಕುಕ್ಕಿಕಟ್ಟೆ ಬಳಿಯ ಮಾರ್ಪಳ್ಳಿ ಗ್ರಾಮದಲ್ಲಿ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ PSI ಸದಾಶಿವ ವೃದ್ಧೆಯನ್ನ ರಕ್ಷಿಸಿದ್ದಾರೆ.

ನಗರ ಪೊಲೀಸ್​ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ PSI ಸದಾಶಿವ ಗವರೋಜಿ ಅಗ್ನಿಶಾಮಕದಳ ಹಾಗೂ ಸ್ಥಳೀಯರ ಸಹಾಯದಿಂದ ಬಾವಿಗಿಳಿದು ವೃದ್ಧೆಯನ್ನ ಮೇಲಕ್ಕೆತ್ತಿದ್ದಾರೆ. ಅಜ್ಜಿಯ ಪ್ರಾಣ ಉಳಿಸಿದ ಸದಾಶಿವ ಅವರ ಕಾರ್ಯಕ್ಕೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ.

Related Tags:

Related Posts :

Category: