PUBG ಗೀಳಿಗೆ ಬಿದ್ದು ಊಟ, ನೀರು ಬಿಟ್ಟಿದ್ದ ಯುವಕ ಏನಾದ ಗೊತ್ತಾ?

PUBG ಎಂಬುದು ಜಗತ್ತಿನಾದ್ಯಂತದ ಅತ್ಯಂತ ಜನಪ್ರಿಯ ಬ್ಯಾಟಲ್ ರಾಯಲ್ ಆಟಗಳಲ್ಲಿ ಒಂದಾಗಿದೆ. ಈ ಆಟದ ಗೀಳಿಗೆ ಬಿದ್ದ ಅದೆಷ್ಟೋ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಈಗ ಅಂತದ್ದೇ ಘಟನೆ ನಡೆದಿದ್ದು, PUBG ಆಟದ ಗೀಳಿಗೆ ಬಿದ್ದು ಆಂಧ್ರ ಪ್ರದೇಶ ಮೂಲದ ಹುಡುಗನೊಬ್ಬ ಸಾವನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆಂಧ್ರ ಪ್ರದೇಶ ಮೂಲದ 16 ವರ್ಷದ ಬಾಲಕ ಹಲವು ದಿನಗಳವರೆಗೆ ನಿರಂತರವಾಗಿ PUBG ಆಟದಲ್ಲಿ ನಿರತನಾಗಿದ್ದಾನೆ. ಇದರಿಂದಾಗಿ ಯುವಕ ಆಟದಲ್ಲಿ ತೀರ ಮಗ್ನನಾಗಿದ್ದರಿಂದ ಅನೇಕ ದಿನಗಳವರೆಗೆ ಊಟ ಸಹ ಸೇವಿಸುವುದನ್ನು ಬಿಟ್ಟಿದ್ದಾನೆ. ಜೊತೆಗೆ ನೀರು ಕುಡಿಯುವುದನ್ನು ಬಿಟ್ಟಿದ್ದ ಯುವಕನಿಗೆ ತೀವ್ರವಾದ ಅನಾರೋಗ್ಯ ಕಾಡಲು ಶುರುವಾಗಿದೆ.

ಈ ವಿಚಾರ ತಿಳಿದ ಯುವಕನ ಕುಟುಂಬಸ್ಥರು, ಎಲ್ಲೂರು ಪಟ್ಟಣದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಆದರೆ ಅತಿಸಾರದಿಂದ ಬಳಲುತ್ತಿದ್ದ ಯುವಕನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. ಅದಾಗಲೆ ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದ ಯುವಕ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾನೆ.

Related Tags:

Related Posts :

Category: