ಕೊರೊನಾ ಹೆಸರಲ್ಲಿ ಆರೋಗ್ಯಾಧಿಕಾರಿಗಳೇ ಲೂಟಿಗೆ ಇಳಿದರಾ? ಬಲ್ಲವರೇ ಸತ್ಯ ಬಾಯ್ಬಿಟ್ಟಿದ್ದಾರೆ..

ಕೊರೊನಾ ಹೆಸರಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಕ್ಕಿದ ಕಡೆಯಲೆಲ್ಲ ಕಾಸು ಮಾಡೋಕೆ ನಿಂತ್ರಾ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಟಿಟಿ ಆ್ಯಂಬುಲೆನ್ಸ್ ಹೆಸರಲ್ಲಿ ಫುಲ್ ಗೋಲ್ಮಾಲ್ ನಡೆಯುತ್ತಿದೆ ಎನ್ನಲಾಗಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಅವಶ್ಯಕತೆಗೂ ಮೀರಿ ಟಿಟಿ ಆ್ಯಂಬುಲೆನ್ಸ್ ಬಾಡಿಗೆಗೆ ಪಡೆದು ಹಣ ನುಂಗಿದ್ರಾ ಎಂಬ ಅನುಮಾನ ವ್ಯಕ್ತವಾಗಿದೆ.

ಒಂದು ಟಿಟಿ ಆ್ಯಂಬುಲೆನ್ಸ್​ಗೆ ತಿಂಗಳಿಗೆ 1 ಲಕ್ಷ 30 ಸಾವಿರ ರೂಪಾಯಿ ಬಾಡಿಗೆ ನೀಡಲಾಗತ್ತೆ. 2 ಸಾವಿರ ಕಿಲೋ ಮೀಟರ್ ಬಳಿಕ 1 ಕಿಲೋಮೀಟರ್​ಗೆ 16 ರೂಪಾಯಿ ಹೆಚ್ಚುವರಿ ಹಣ ನೀಡಲಾಗುತ್ತಿದೆ. ಜೊತೆಗೆ ಇನೋವಾ ಕಾರ್​ಗಳಿಗೆ ದಿನಕ್ಕೆ 4300 ರೂ ಬಾಡಿಗೆ ಮತ್ತು GST ನೀಡಲಾಗುತ್ತೆ.

ಆದ್ರೆ ಟಿಟಿ ಆ್ಯಂಬುಲೆನ್ಸ್ ಮಾಲೀಕರಿಗೆ ನೀಡೋದು 90 ಸಾವಿರ ರೂಪಾಯಿ ಮಾತ್ರ ಉಳಿದ ಹಣವನ್ನು ಅಧಿಕಾರಿಗಳು ಜೇಬಿಗಿಳಿಸುತ್ತಿದ್ದಾರೆ ಅಂತಾ ಆರೋಪ ಕೇಳಿಬಂದಿದೆ. ಜೊತೆಗೆ ಟಿಟಿ ಆ್ಯಂಬುಲೆನ್ಸ್​ಗಳು ಕೂಡ ನಿಂತಲ್ಲಿ ನಿಂತ್ರು ಬಾಡಿಗೆ ನೀಡಲಾಗುತ್ತಿದೆ. ಹೀಗಾಗಿ ಅನಾವಶ್ಯಕವಾಗಿ ಟಿಟಿ ಆ್ಯಂಬುಲೆನ್ಸ್​ಗಳ ಹೆಸರಲ್ಲಿ ಅಧಿಕಾರಿಗಳು ದುಡ್ಡು ಮಾಡ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಆ್ಯಂಬುಲೆನ್ಸ್ ಡ್ರೈವರ್​ಗಳೇ ಆರೋಗ್ಯ ಇಲಾಖೆಯ ಕರ್ಮಕಾಂಡ ಬಾಯ್ಬಿಟ್ಟಿದ್ದಾರೆ. ನಮಗೆ ಕೇವಲ 90 ಸಾವಿರ ರೂಪಾಯಿ ಕೊಡ್ತಿದ್ದಾರೆ ಅಂತಾ ಡ್ರೈವರ್​ಗಳೇ ಹೇಳ್ತಿದ್ದಾರೆ. ಟಿಟಿ ಆ್ಯಂಬುಲೆನ್ಸ್​ಗಳ ಬದಲು 108 ಆ್ಯಂಬುಲೆನ್ಸ್​ಗಳನ್ನೇ ಸರಿಯಾಗಿ ಬಳಸಬಹುದಿತ್ತು. ಆದರೆ ಹಣ ಲೂಟಿ ಹೊಡೆಯಲು ಟಿಟಿ ಆ್ಯಂಬುಲೆನ್ಸ್​ಗಳನ್ನ ಆಫೀಸರ್ಸ್ ಬಳಸುತ್ತಿದ್ದಾರೆ ಎನ್ನಲಾಗಿದೆ. ಆದರಿಂದ ಇದರ ಬಗ್ಗೆ ಸರ್ಕಾರ ತನಿಖೆ ಮಾಡಬೇಕು ಅಂತಾ ಒತ್ತಾಯಗಳು ಕೇಳಿಬರುತ್ತಿವೆ.

Related Tags:

Related Posts :

Category:

error: Content is protected !!