ನಾಲ್ಕನೆ ಟೆಸ್ಟ್ಗೆ ತಂಡವನ್ನು ಪ್ರಕಟಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಸೋಮವಾರದಂದು ಸಿನಿಮೀಯವಾಗಿ ಡ್ರಾನಲ್ಲಿ ಕೊನೆಗೊಂಡ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಅಡಿದ ತನ್ನ ತಂಡದಲ್ಲಿ ಒಂದು ಬದಲಾವಣೆಯನ್ನು ಮಾಡಿ ಗಾಯಗೊಂಡಿರುವ ವಿಲ್ ಪುಕೊವ್ಸ್ಕಿ ಸ್ಥಾನದಲ್ಲಿ ಮಾರ್ಕಸ್ ಹ್ಯಾರಿಸ್ರನ್ನು ಆರಿಸಿದೆ.
ತನ್ನ ಪಾದಾರ್ಪಣೆ ಟೆಸ್ಟ್ನಲ್ಲೇ ಫೀಲ್ಡಿಂಗ್ ಮಾಡುವಾಗ ಭುಜ ನೋವಿಗೆ ತುತ್ತಾದ ಆಸ್ಟ್ರೇಲಿಯಾದ ಆರಂಭ ಆಟಗಾರ ವಿಲ್ ಪುಕೊವ್ಸ್ಕಿ ಬ್ರಿಸ್ಬೇನ್ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ಗೆ ತಂಡದಿಂದ ಹೊರಗುಳಿಯಲಿದ್ದಾರೆ. ಅವರ ಸ್ಥಾನದಲ್ಲಿ ಆಯ್ಕೆಯಾಗಿರುವ ಮಾರ್ಕಸ್ ಹ್ಯಾರಿಸ್ ಗಬ್ಬಾ ಮೈದಾನದಲ್ಲಿ ಡೇವಿಡ್ ವಾರ್ನರ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ನಾಲ್ಕನೇ ಟೆಸ್ಟ್ಗೆ ತಂಡವನ್ನು ಪ್ರಕಟಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಸೋಮವಾರದಂದು ಸಿನಿಮೀಯವಾಗಿ ಡ್ರಾನಲ್ಲಿ ಕೊನೆಗೊಂಡ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಡಿದ ತನ್ನ ತಂಡದಲ್ಲಿ ಇದೊಂದೇ ಬದಲಾವಣೆಯನ್ನು ಮಾಡಿದೆ. ಭಾರತೀಯ ಟೀಂನಲ್ಲೂ ಹಲವಾರು ಆಟಗಾರರು ಗಾಯಗೊಂಡಿರುವುದರಿಂದ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆ.
ಪ್ರಸಕ್ತ 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ, ಹ್ಯಾರಿಸ್ ಆಸ್ಟ್ರೇಲಿಯಾ ಟೀಂನ ಭಾಗವಾಗಿದ್ದರೂ 2019 ರ ಌಷಸ್ ಸರಣಿಯ ನಂತರ ಯಾವುದೇ ಟೆಸ್ಟ್ ಆಡಿಲ್ಲ. ಸರಣಿಯಲ್ಲಿ, ಪುಕೊವ್ಸ್ಕಿ, ವಾರ್ನರ್, ಜೊ ಬರ್ನ್ಸ್ ಮತ್ತು ಮ್ಯಾಥ್ಯೂ ವೇಡ್ ನಂತರ ಆಸ್ಟ್ರೇಲಿಯಾ ಕಣಕ್ಕಿಳಿಸಲಿರುವ 5 ನೇ ಆರಂಭ ಆಟಗಾರ ಹ್ಯಾರಿಸ್ ಆಗಲಿದ್ದಾರೆ.
ಮಾರ್ಕಸ್ ಹ್ಯಾರಿಸ್
ಸೋಮವಾರದಂದು ಭುಜಕ್ಕೆ ಗಾಯ ಮಾಡಿಕೊಂಡ ಪುಕೊವ್ಸ್ಕಿ ಬುಧವಾರ ಮತ್ತು ಗುರುವಾರದಂದು ಗಬ್ಬಾ ಮೈದಾನದಲ್ಲಿ ಅಭ್ಯಾಸಕ್ಕಿಳಿಯಲಿಲ್ಲ.
ಹ್ಯಾರಿಸ್ ನಮ್ಮೊಂದಿಗೆ ಆಭ್ಯಾಸದಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸಿದರಾದರೂ ನೋವು ಹೆಚ್ಚಿರುವುದರಿಂದ ಸಾಧ್ಯವಾಗಲಿಲ್ಲ ಎಂದು ಪಂದ್ಯ-ಪೂರ್ವದ ಸುದ್ದಿಗೋಷ್ಠಿಯಲ್ಲಿ ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್ ಹೇಳಿದರು.
ನಮ್ಮ ವೈದ್ಯರ ತಂಡದೊಂದಿಗೆ ಹ್ಯಾರಿಸ್ ಫಿಸಿಯೋಥೆರಪಿಗೆ ಒಳಗಾಗಬೇಕಿದೆ. ಅವರು ಎಷ್ಟರ ಮಟ್ಟಿಗೆ ಚೇತರಿಸಿಕೊಳ್ಳಲಿದ್ದಾರೆನ್ನುವುದು ಕಾದು ನೋಡಬೇಕಿದೆ. ಅವರ ಸ್ಥಾನದಲ್ಲಿ ಮಾರ್ಕಸ್ ಹ್ಯಾರಿಸ್ ಆಡಲಿದ್ದು ವಾರ್ನರ್ರೊಂದಿಗೆ ಉತ್ತಮ ಆರಂಭ ಒದಗಿಸಕೊಡುತ್ತಾರೆಂಬ ನಿರೀಕ್ಷೆಯನ್ನು ನಾನಿಟ್ಟುಕೊಂಡಿದ್ದೇನೆ ಎಂದು ಪೇನ್ ಹೇಳಿದರು.
ಇಂಜುರಿಯಿಂದ ಮೊದಲಿನೆರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ವಾರ್ನರ್ ಅವರನ್ನು ಸಿಡ್ನಿಯಲ್ಲಿ ಟೆಸ್ಟ್ ಶುರುವಾಗುವ ಹಿಂದಿನ ದಿನ ಒಂದು ಗಂಟೆಗಿಂತ ಜಾಸ್ತಿ ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದ ನಂತರ ಪಂದ್ಯದಲ್ಲಿ ಆಡುವ ಬಗ್ಗೆ ಘೋಷಣೆ ಮಾಡಲಾಗಿತ್ತು.
ಭಾರತದ ಪ್ರಮುಖ ಬೌಲರ್ಗಳಾದ ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಸಹ ಗಾಯಗೊಂಡಿರುವುದರಿಂದ ಆಡುವ ಇಲೆವೆನ್ ಅಂತಿಮಗೊಳಿಸುವುದು ಟೀಂ ಮ್ಯಾನೇಜ್ಮೆಂಟ್ಗೆ ತಲೆನೋವಾಗಿ ಪರಿಣಮಿಸಿದೆ.
ಅಂತಿಮ ಟೆಸ್ಟ್ಗೆ ಅತಿಥೇಯರ ತಂಡ ಇಂತಿದೆ:
ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಕೆಮೆರಾನ್ ಗ್ರೀನ್, ಟಿಮ್ ಪೇನ್ (ಕ್ಯಾಪ್ಟನ್), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನೇಥನ್ ಲಿಯಾನ್ ಮತ್ತು ಜೊಷ್ ಹೆಜೆಲ್ವುಡ್.