ಡಿಜೆ ಹಳ್ಳಿ‌ ಗಲಭೆ: ಅಖಂಡ ಮನೆ ಸುಡಲು ಅಣ್ಣ-ತಮ್ಮ ರೂಪಿಸಿದ್ದರು ಸಂಚು!

ಬೆಂಗಳೂರು: ಡಿಜೆ ಹಳ್ಳಿ‌-ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಅಂದು ನಡೆದ ಕಿಚ್ಚಿನ ಹಿಂದಿದ್ದ ಕಾಣದ ಕೈಗಳು ಒಂದೊಂದಾಗಿ ಬಯಲಾಗುತ್ತಿವೆ. ಈ ನಡುವೆ ಮತ್ತೊಬ್ಬ ಆರೋಪಿಯನ್ನು ಸಿಸಿಬಿ ಗುರುತಿಸಿದೆ.

MLA ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಇಟ್ಟ ಕಿಡಿಗೇಡಿಗಳ ಹಿಂದೆ ಮತ್ತೋರ್ವನ ಕೈವಾಡವಿರುವುದು ಬೆಳಕಿಗೆ ಬಂದಿದೆ. ಸಿಸಿಬಿ ಅಧಿಕಾರಿಗಳು ಕಾರ್ಪೊರೇಟರ್ ಸಹೋದರನ ಕೈವಾಡವಿರುವುದನ್ನು ಬಯಲಿಗೆಳೆದಿದ್ದಾರೆ.

ಪುಲಿಕೇಶಿನಗರ ಕಾರ್ಪೊರೇಟರ್ ಆಗಿದ್ದ ಝಾಕಿರ್ ಜೊತೆ ಅವನ ತಮ್ಮ ಸಹ ಈ ಕೃತ್ಯಕ್ಕೆ ಕುಮ್ಮಕ್ಕು‌ ನೀಡಿದ್ದ ಬಗ್ಗೆ ಚಾರ್ಜ್ ಶೀಟ್​ನಲ್ಲಿ ಸ್ಪಷ್ಟನೆ ನೀಡಲಾಗಿದೆ. ಝಾಕಿರ್ ಸಹೋದರ ಯಾಸಿರ್ ಮೊಹಮದ್ ಹಮೀದ್ ಕೂಡ ಗಲಭೆ ದಿನ ಅಣ್ಣನ ಜೊತೆ ಸೇರಿ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿಸಿದ್ದ ಬಗ್ಗೆ ಸಾಕ್ಷ್ಯ ಸಂಗ್ರಹ ಮಾಡಲಾಗಿದೆ.

ಸದ್ಯ ಬಂಂಧನ ಭೀತಿಯಿಂದ ಅಣ್ಣ ತಮ್ಮ ಇಬ್ಬರೂ ಎಸ್ಕೇಪ್ ಆಗಿದ್ದಾರೆ. ಈ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಜೊತೆಗೆ ಝಾಕಿರ್, ಯಾಸಿರ್ ಸಹ ಆರೋಪಿಗಳಾಗಿ ಗುರ್ತಿಸಲಾಗಿದೆ.

Related Tags:

Related Posts :

Category:

error: Content is protected !!